More

    ಎರಡೂ ಕೈಯಲ್ಲಿ ಚೀಲ ಹಿಡಿದುಕೊಂಡು ಅಂಗಡಿಯಿಂದ ಹೊರಬಿದ್ದ ವೃದ್ಧನ ಮೇಲೆ ಹಲ್ಲೆ; ಬ್ಯಾಗ್​​ನಲ್ಲಿದ್ದ ಬಿಳಿ ಬಣ್ಣದ ‘ಅಮೂಲ್ಯ’ ವಸ್ತುವೇ ಇದಕ್ಕೆ ಕಾರಣ

    ಲಂಡನ್​: ವೃದ್ಧನೋರ್ವ ಅಂಗಡಿಗೆ ಹೋಗಿ ಕೆಲವು ಅಗತ್ಯ ಸಾಮಗ್ರಿಗಳನ್ನು ಖರೀದಿಸಿ ಹೊರಗೆ ಬಂದ. ಸ್ವಲ್ಪ ದೂರ ಹೋಗಿದ್ದಷ್ಟೇ ಒಂದಷ್ಟು ಜನರ ಕಿಡಿಗೇಡಿಗಳ ಗುಂಪು ಆ ಅಜ್ಜನ ಮೇಲೆ ತೀವ್ರ ಹಲ್ಲೆ ನಡೆಸಿದೆ.

    ಘಟನೆ ನಡೆದಿದ್ದು ಉತ್ತರ ಲಂಡನ್​ನ ಹ್ಯಾರಿಂಗೇ ಎಂಬಲ್ಲಿ. 57 ವರ್ಷದ ವೃದ್ಧ ದಿನೇಂದ್ರ ಅವರು ಅಂಗಡಿಯಿಂದ ತಂದ ಅಮೂಲ್ಯ ವಸ್ತುವೇ ಈ ಹಲ್ಲೆಗೆ ಕಾರಣ.

    ಕರೊನಾ ಕಾರಣದಿಂದ ಕೆಲವು ದೇಶಗಳಲ್ಲಿ ಹ್ಯಾಂಡ್​ ಸ್ಯಾನಿಟೈಸರ್​, ಟಾಯ್ಲೆಟ್ ಪೇಪರ್​ಗಳಿಗೆ ತೀವ್ರ ಕೊರತೆ ಉಂಟಾಗಿದೆ. ಆಸ್ಟ್ರೇಲಿಯಾ, ಚೀನಾಗಳಲ್ಲಿ ಟಾಯ್ಲೆಟ್​ ಪೇಪರ್​ ಇಲ್ಲ ಎಂಬ ಕೂಗು ಸ್ವಲ್ಪ ದಿನಗಳ ಹಿಂದೆಯೇ ಕೇಳಿಬಂದಿದೆ. ಚೀನಾದಲ್ಲಿ ಟಾಯ್ಲೆಟ್​ ಪೇಪರ್​ಗಳು ಕಳವು ಆಗಿದ್ದೂ ಇದೆ. ಹಾಗೇ ಆಸ್ಟ್ರೇಲಿಯಾದಲ್ಲಿ ಮುದ್ರಣ ಮಾಧ್ಯಮವೊಂದು ಪತ್ರಿಕೆಯೊಂದಿಗೆ ಹೆಚ್ಚುವರಿ ಪುಟಗಳನ್ನು ನೀಡುವ ಮೂಲಕ ಜನರಿಗೆ ಟಾಯ್ಲೆಟ್ ಪೇಪರ್​ ಕೊರತೆ ನೀಗಿಸಲು ಮುಂದಾಗಿತ್ತು. ಒಟ್ಟಾರೆ ಸದ್ಯದ ಪರಿಸ್ಥಿತಿಯಲ್ಲಿ ಈ ಟಾಯ್ಲೆಟ್​ ಪೇಪರ್​, ಹ್ಯಾಂಡ್​ ಸ್ಯಾನಿಟೈಸರ್​ಗಳು ಜನರ ಪಾಲಿಗೆ ಅತ್ಯಗತ್ಯ ಮತ್ತು ಅಮೂಲ್ಯ ವಸ್ತುಗಳಾಗಿವೆ.

    ಈಗ ಇದೇ ಟಾಯ್ಲೆಟ್​ ಪೇಪರ್​ ಕಾರಣಕ್ಕೆ ವೃದ್ಧ ದಿನೇಂದ್ರ ಮೇಲೆ ತೀವ್ರ ಹಲ್ಲೆಯಾಗಿದೆ. ಬ್ಯಾಗ್​ನಲ್ಲಿ ಟಾಯ್ಲೆಟ್​ಪೇಪರ್​​ಗಳ ಎರಡು ಪ್ಯಾಕೆಟ್​ಗಳನ್ನು ಇಟ್ಟುಕೊಂಡು ಬರುತ್ತಿದ್ದ ವೃದ್ಧನನ್ನು ಅಂಗಡಿಯಿಂದಲೇ ಹಿಂಬಾಲಿಸಿಕೊಂಡು ಬಂದ ಕಿಡಿಗೇಡಿಗಳು, ಅದರಲ್ಲಿ ಒಂದು ಪ್ಯಾಕ್​ನ್ನು ಕದ್ದಿದ್ದಾರೆ.

    ಈ ಬಗ್ಗೆ ಮಾಧ್ಯಮಗಳಿಗೆ ತಿಳಿಸಿರುವ ವೃದ್ಧ, ನನಗೆ ಒಂದು ಸಲ ಭಯ ಆಯಿತು. ಆದರೆ ಈಗ ಟಾಯ್ಲೆಟ್​ ಪೇಪರ್​ ಸಿಗುತ್ತಿಲ್ಲ. ಸಿಕ್ಕರೂ ದುಬಾರಿ ಬೆಲೆ ಕೊಡಬೇಕಾಗಿದೆ. ಹಣ ಕೊಡಲು ಕಷ್ಟವಾದವರು ಹೀಗೆ ಕದಿಯುತ್ತಾರೆ. ನಾನೊಬ್ಬ ಹಿರಿಯ ನಾಗರಿಕನಾಗಿ, ಅಂತಹ ದುರ್ಬಲ ವರ್ಗದ ಜನರ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳುತ್ತೇನೆ ಎಂದಿದ್ದಾರೆ.
    ಲಂಡನ್​ನಲ್ಲಿ ಕರೊನಾ ವೈರಸ್​ನಿಂದ 21 ಮಂದಿ ಸಾವನ್ನಪ್ಪಿದ್ದಾರೆ. ಸದ್ಯ 1140 ಮಂದಿ ಸೋಂಕಿತರಿದ್ದಾರೆ. (ಏಜೆನ್ಸೀಸ್)

    ಷೇರುಪೇಟೆಯಲ್ಲಿ ಮಹಾಪತನದ ಶಾಕ್​ : ಸೆನ್ಸೆಕ್ಸ್ 2,713 ಅಂಶ ಕುಸಿತ, 9,200ರ ಕೆಳಕ್ಕೆ ಕುಸಿದ ನಿಫ್ಟಿ

    ಪ್ರೇಯಸಿಗೆ ಹೊಡೆದ ಯುವಕನಿಗೆ ಕ್ಲಾಸ್​ ತೆಗೆದುಕೊಂಡಿದ್ದ ನೇಹಾ ಧೂಪಿಯಾ ಪತಿಗಿದ್ದಾರಂತೆ ಐವರು ಗರ್ಲ್​ಫ್ರೆಂಡ್ಸ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts