More

    ಕಠಿಣ ನೈಟ್ ಕರ್ಫ್ಯೂ ಜಾರಿ

    ಶಿವಮೊಗ್ಗ: ಜಿಲ್ಲೆಯಲ್ಲಿ ಕಠಿಣ ರೀತಿಯಲ್ಲಿ ನೈಟ್ ಕರ್ಫ್ಯೂ ಜಾರಿಗೊಳಿಸಿ. ಈ ವಿಚಾರದಲ್ಲಿ ಎಸ್ಪಿ ಜತೆ ಸಮಾಲೋಚನೆ ನಡೆಸಿ. ರಾತ್ರಿ 11ರ ಬಳಿಕ ಯಾರೊಬ್ಬರೂ ರಸ್ತೆಯಲ್ಲಿ ಓಡಾಡದಂತೆ ನೋಡಿಕೊಳ್ಳಿ ಎಂದು ಡಿಸಿ ಕೆ.ಬಿ.ಶಿವಕುಮಾರ್​ಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಸೂಚನೆ ನೀಡಿದರು.

    ಆರೋಗ್ಯ ಇಲಾಖೆ ಹಾಗೂ ಸಿಮ್್ಸ ಅಧಿಕಾರಿಗಳೊಂದಿಗೆ ಗುರುವಾರ ಸಭೆ ನಡೆಸಿದ ಸಚಿವರು, ಜನರಿಗೆ ಕರೊನಾ ಭಯ ಇಲ್ಲವಾಗಿದೆ. ಬ್ರಿಟನ್​ನಿಂದ ಬಂದಿದೆ ಎನ್ನಲಾಗಿರುವ ಹೊಸ ಬಗೆಯ ಕರೊನಾ ವೈರಸ್ ಯಾವ ರೀತಿಯಲ್ಲಿ ಹಾನಿ ಮಾಡುವುದೋ ಗೊತ್ತಿಲ್ಲ. ಹೀಗಾಗಿ ಆರಂಭದಲ್ಲಿಯೇ ಜಿಲ್ಲಾಡಳಿತ ಎಚ್ಚೆತ್ತುಕೊಳ್ಳಬೇಕು ಎಂದರು.

    ರಾತ್ರಿ 11ಕ್ಕೆ ವೈನ್​ಶಾಪ್ ಸೇರಿ ಎಲ್ಲ ಅಂಗಡಿ ಮುಂಗಟ್ಟುಗಳನ್ನು ಕಟ್ಟುನಿಟ್ಟಾಗಿ ಮುಚ್ಚಿಸಬೇಕು. ಬಸ್​ಸ್ಟ್ಯಾಂಡ್ ಸೇರಿ ಯಾವುದೇ ಭಾಗದಲ್ಲಿ ತಳ್ಳುಗಾಡಿಗಳು ವಹಿವಾಟು ನಡೆಸದಂತೆ ನೋಡಿಕೊಳ್ಳಬೇಕು. ಈ ಹಿಂದೆ ಪರಿಸ್ಥಿತಿ ಕೈಮೀರಿ ಹೋದ ಬಳಿಕ ಎಚ್ಚೆತ್ತುಕೊಂಡಂತೆ ಈ ಬಾರಿ ಆಗಬಾರದು ಎಂದು ಸೂಚಿಸಿದರು.

    ಹೊಸ ತಳಿಯ ಕರೊನಾ ಇರುವಿಕೆ ಬಗ್ಗೆ ಜಿಲ್ಲೆಯಲ್ಲಿ ಯಾವುದೇ ಕುರುಹು ಕಂಡುಬಂದಿಲ್ಲ. ರಾಜ್ಯ ಸರ್ಕಾರ ನೀಡಿರುವ ವರದಿಯಂತೆ ಬ್ರಿಟನ್​ನಿಂದ ಜಿಲ್ಲೆಗೆ ಆಗಮಿಸಿದ 23 ಮಂದಿಯನ್ನು ಕ್ವಾರಂಟೈನ್​ನಲ್ಲಿ ಇರಿಸಿ ಗಮನಿಸಲಾಗುತ್ತಿದೆ. ಇಲ್ಲಿ ಒಂದು ಬಾರಿ ಎಲ್ಲರ ಗಂಟಲು ದ್ರವ ಪರೀಕ್ಷಿಸಲಾಗಿದೆ. ಈಗ ಮಾದರಿಯನ್ನು ಬೆಂಗಳೂರಿನ ನಿಮ್ಹಾನ್ಸ್​ಗೆ ಕಳುಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಸಭೆಗೆ ಮಾಹಿತಿ ನೀಡಿದರು.

    ಇಷ್ಟು ದಿನ ಜಿಲ್ಲೆಯಲ್ಲಿ ಕರೊನಾ ನಿಯಂತ್ರಣದಲ್ಲಿದೆ ಎಂಬ ಕಾರಣಕ್ಕೆ ಸಾರ್ವಜನಿಕರಿಗೆ ಸ್ವಲ್ಪ ಸಡಿಲಿಕೆ ನೀಡಲಾಗಿತ್ತು. ಆದರೆ ಈಗ ಬ್ರಿಟನ್ ಕರೊನಾ ವೈರಸ್ ಆತಂಕ ಉಂಟಾಗಿರುವುದರಿಂದ ಜಿಲ್ಲೆಯಲ್ಲಿ ಕಠಿಣ ಕ್ರಮಗಳನ್ನು ಜಾರಿಗೊಳಿಸಲಾಗುವುದು. ಮಾಸ್ಕ್ ಧರಿಸದ ಹಾಗೂ ಪರಸ್ಪರ ಅಂತರ ಕಾಯ್ದುಕೊಳ್ಳದವರಿಗೆ ದಂಡ ವಿಧಿಸಲಾಗುತ್ತದೆ ಎಂದು ಎಚ್ಚರಿಸಿದರು.

    ಜಿಪಂ ಸಿಇಒ ಎಂ.ಎಲ್.ವೈಶಾಲಿ, ಅಪರ ಜಿಲ್ಲಾಧಿಕಾರಿ ಜಿ.ಅನುರಾಧಾ, ಸಿಮ್್ಸ ನಿರ್ದೇಶಕ ಡಾ. ಸಿದ್ದಪ್ಪ, ವೈದ್ಯಕೀಯ ಅಧೀಕ್ಷಕ ಡಾ. ಎಸ್.ಶ್ರೀಧರ್, ಡಿಎಚ್​ಒ ಡಾ. ರಾಜೇಶ್ ಸುರಗೀಹಳ್ಳಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts