More

    ಪೆಟ್ರೋಲ್​, ಡೀಸೆಲ್​ಗಳನ್ನೂ ಜಿಎಸ್​ಟಿ ವ್ಯಾಪ್ತಿಗೆ ತನ್ನಿ: ಅಸೋಚಾಮ್ ಮನವಿ

    ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್​ಗಳನ್ನೂ ಗೂಡ್ಸ್​ ಆ್ಯಂಡ್ ಸರ್ವೀಸಸ್ ಟ್ಯಾಕ್ಸ್​ (ಜಿಎಸ್​ಟಿ) ವ್ಯಾಪ್ತಿಗೆ ತನ್ನಿ. ಆ ಮೂಲಕ ಆಟೋಮೊಬೈಲ್ ಇಂಧನದ ವಿಚಾರದಲ್ಲಿ ಏಕರೂಪತೆಯನ್ನು ಖಾತರಿಗೊಳಿಸಿ ಎಂದು ಕೈಗಾರಿಕಾ ಸಂಘಟನೆ ಅಸೋಚಾಮ್ ಮಂಗಳವಾರ ಸರ್ಕಾರವನ್ನು ಆಗ್ರಹಿಸಿದೆ. ರಾಷ್ಟ್ರ ರಾಜಧಾನಿಯಲ್ಲಿ ಪೆಟ್ರೋಲ್ ದರ 7.10 ರೂಪಾಯಿ ಮತ್ತು ಡೀಸೆಲ್ ದರ 1.67 ರೂಪಾಯಿ ಏರಿಕೆ ಮಾಡಿದ ಮರುದಿನವೇ ಅಸೋಚಾಮ್ ಈ ಕುರಿತು ಕೇಂದ್ರ ಸರ್ಕಾರವನ್ನು ಆಗ್ರಹಿಸಿರುವುದು ಗಮನಾರ್ಹ.

    ಆದಷ್ಟು ಶೀಘ್ರವಾಗಿ ಪೆಟ್ರೋಲ್​, ಡೀಸೆಲ್​ಗಳನ್ನು ಜಿಎಸ್​​ಟಿ ವ್ಯಾಪ್ತಿಗೆ ತರುವುದು ಅವಶ್ಯ. ಜಿಎಸ್​ಟಿ ಕೌನ್ಸಿಲ್​ನಲ್ಲಿ ವಿಸ್ತೃತವಾಗಿ ಚರ್ಚೆ ನಡೆಸಿದ ಬಳಿಕ ಈ ತೀರ್ಮಾನ ಆಗಬೇಕು. ಭಾರತದ ಅರ್ಥವ್ಯವಸ್ಥೆಯಲ್ಲಿ ಜಿಎಸ್​ಟಿ ಚಾಲ್ತಿಗೆ ಬಂದಿರುವ ಕಾರಣ ಒಟ್ಟಾರೆ ಹಿತ ದೃಷ್ಟಿಯಿಂದ ಈ ಬದಲಾವಣೆ ಆಗಬೇಕು ಎಂದು ಅಸೋಚಾಮ್​ ಸೆಕ್ರೆಟರಿ ಜನರಲ್​ ದೀಪಕ್ ಸೂದ್​ ಹೇಳಿದ್ದಾರೆ.

    ಇದನ್ನೂ ಓದಿ: ಆನ್‌ಲೈನ್‌ನಲ್ಲಿ ವಿಕೃತ ಪೋಲಿ ಚಾಟಿಂಗ್: ಬಾಲಕನೊಬ್ಬನನ್ನು ಬಂಧಿಸಿದ ಪೊಲೀಸರು

    COVID 19 ವೈರಸ್ ಸೋಂಕು ತಡೆಯಲು ಲಾಕ್​ಡೌನ್ ಘೋಷಿಸಿದ ಬೆನ್ನಲ್ಲೆ ಸರ್ಕಾರ ಆರ್ಥಿಕ ಪ್ಯಾಕೇಜನ್ನು ಕೂಡ ಪ್ರಕಟಿಸಿತ್ತು. ಅರ್ಥ ವ್ಯವಸ್ಥೆಗೆ ಘಾಸಿಯಾಗಬಾರದು ಎಂಬ ಕಾರಣಕ್ಕೆ ಈ ಕ್ರಮವನ್ನು ಸರ್ಕಾರ ತೆಗೆದುಕೊಂಡಿತ್ತು. ಆದರೆ, ಇದಕ್ಕೆ ವ್ಯತಿರಿಕ್ತವಾಗಿ ತೆರಿಗೆಗಳನ್ನು ಹೆಚ್ಚಿಸಿದರೆ ಅರ್ಥ ವ್ಯವಸ್ಥೆಯ ಮೇಲೂ ಅದು ಪರಿಣಾಮ ಬೀರಲಿದೆ. ಬೇಡಿಕೆ ಕುಸಿದು ಆರ್ಥಿಕ ಪ್ಯಾಕೇಜ್​ನ ಉದ್ದೇಶ ಸಾರ್ಥಕವಾಗದು ಎಂದು ಸೂದ್ ಎಚ್ಚರಿಸಿದ್ದಾರೆ.

    ಇದನ್ನೂ ಓದಿ: VIDEO: ಸಂಸದೆ ಶೋಭಾ ಕರಂದ್ಲಾಜೆಗೆ ಗಲ್ಫ್ ರಾಷ್ಟ್ರಗಳಿಂದ ಜೀವ ಬೆದರಿಕೆ ಕರೆ!

    ಮಾರ್ಚ್ ತಿಂಗಳಲ್ಲಿ ಕೇಂದ್ರ ಸರ್ಕಾರವೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಲೀಟರ್​ಗೆ 3 ರೂಪಾಯಿಯಂತೆ ಏರಿಸಿತ್ತು. ಇದರ ಮೂಲಕ ವಾರ್ಷಿಕ 39,000 ಕೋಟಿ ರೂಪಾಯಿ ಹೆಚ್ಚುವರಿಯಾಗಿ ಸಂಗ್ರಹಿಸುವುದು ಕೇಂದ್ರ ಸರ್ಕಾರದ ಉದ್ದೇಶವಾಗಿತ್ತು. ಎರಡು ದಶಕಗಳ ಅವಧಿಯಲ್ಲಿ ಇದೇ ಮೊದಲ ಬಾರಿಗೆ ಕನಿಷ್ಠ ಮಟ್ಟಕ್ಕೆ ತೈಲ ದರ ತಲುಪಿದ್ದರ ಪ್ರಯೋಜನ ಪಡೆಯಲು ಈ ಬೆಲೆ ಏರಿಕೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಲಾಕ್​ಡೌನ್​ನ ವ್ಯತಿರಿಕ್ತ ಪರಿಣಾಮ ತಡೆಯುವ ಕ್ರಮಕ್ಕೆ ವಿರುದ್ಧವಾಗಿ ಇಂಧನ ದರ ಹೆಚ್ಚಿಸಿದರೆ ಅದರ ಪರಿಣಾಮ ಎಲ್ಲದರ ಮೇಲೂ ಆಗಲಿದೆ. ಸರಕು ಸಾಗಣೆ ಮೇಲೆ ಆದರೆ ಉಳಿದ ಅಗತ್ಯವಸ್ತುಗಳ ಬೆಲೆಯೂ ಹೆಚ್ಚಲಿದೆ ಎಂದು ಪರಿಣತರು ಎಚ್ಚರಿಸಿದ್ದಾರೆ. (ಏಜೆನ್ಸೀಸ್​)

    ಮರಳು ಮಾಫಿಯಾ ಅಟ್ಟಹಾಸ: ಟ್ರ್ಯಾಕ್ಟರ್​ ಹಾಯಿಸಿ ಪೊಲೀಸ್ ಪೇದೆಯನ್ನು ಕೊಲ್ಲಲು ಯತ್ನ!

    ಚೆನ್ನೈನ ಈ ಹಣ್ಣು ಮಾರುಕಟ್ಟೆ ಈಗ ಭಯ ಹುಟ್ಟಿಸುತ್ತಿರುವುದೇಕೆ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts