More

    ಮರಳು ಮಾಫಿಯಾ ಅಟ್ಟಹಾಸ: ಟ್ರ್ಯಾಕ್ಟರ್​ ಹಾಯಿಸಿ ಪೊಲೀಸ್ ಪೇದೆಯನ್ನು ಕೊಲ್ಲಲು ಯತ್ನ!

    ಚಿತ್ತಾಪುರ (ಕಲಬುರಗಿ): ಅಕ್ರಮ ಮರಳು ಗಣಿಗಾರಿಕೆ ತಡೆಯಲು ಹೋದ ಪೊಲೀಸ್ ಮುಖ್ಯಪೇದೆಯನ್ನೇ ಕೊಲೆ ಮಾಡಲು ಪ್ರಯತ್ನಿಸಿದ ಘಟನೆ ತಾಲೂಕಿನ ಮರಗೋಳ ಗ್ರಾಮದಲ್ಲಿ ಮಂಗಳವಾರ ನಡೆದಿದೆ.

    ಪೊಲೀಸ್ ಮುಖ್ಯ ಪೇದೆ ದತ್ತಾತ್ರೇಯ ಅವರು ಮರಗೋಳದಲ್ಲಿ ಬೀಟ್ ಕರ್ತವ್ಯದ ಮೇಲೆ ಗಸ್ತು ತಿರುಗುತ್ತಿದ್ದರು. ಅಕ್ರಮವಾಗಿ ಮರಳು ತುಂಬಿಸಿಕೊಂಡು ಬಂದ ಟ್ರ್ಯಾಕ್ಟರ್ ಎದುರಾಗಿದೆ. ಬೈಕ್‌ನಲ್ಲಿ ತಡೆಯಲು ಮುಂದಾಗಿದ್ದನ್ನು ಗಮನಿಸಿದ ಟ್ರ್ಯಾಕ್ಟರ್ ಚಾಲಕ ಮುಖ್ಯಪೇದೆ ಮೇಲೆ ಟ್ರಾೃಕ್ಟರ್ ಹತ್ತಿಸಿದ್ದಾನೆ.

    ಇದನ್ನೂ ಓದಿ: ಇಷ್ಟಾದರೂ ಈ ಜನರಿಗೆ ಬುದ್ಧಿ ಬರಲಿಲ್ಲವಲ್ಲಾ?!

    ಮುಖ್ಯಪೇದೆಯ ಕಾಲು, ಕೈಗಳಿಗೆ ಗಾಯಳಾಗಿದ್ದು, ಬೈಕ್ ಸಂಪೂರ್ಣ ಜಖಂಗೊಂಡಿದೆ. ಪೇದೆಯನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಕಲಬುರಗಿ ಜಿಲ್ಲಾಸ್ಪತ್ರೆಗೆ ಕಳುಹಿಸಲಾಗಿದೆ. ಟ್ರ್ಯಾಕ್ಟರ್ ಚಾಲಕ ಪರಾರಿಯಾಗಿದ್ದಾನೆ.

    ವಿಷಯ ತಿಳಿಯುತ್ತಿದ್ದಂತೆ ಪಿಎಸ್‌ಐ ಅಂಬಾಟಿ ಸಿಬ್ಬಂದಿಯೊಂದಿಗೆ ಸ್ಥಳಕ್ಕೆ ದೌಡಾಯಿಸಿದ್ದರು. ಟ್ರ್ಯಾಕ್ಟರ್ ವಶಕ್ಕೆ ಪಡೆದಿದ್ದು, ಟ್ರ್ಯಾಕ್ಟರ್ ಮಾಲೀಕ ಮತ್ತು ಚಾಲಕನ ವಿರುದ್ಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ನಕಲಿ ಅಶ್ಲೀಲ ಸಿಡಿ ಪ್ರಕರಣ ರದ್ದತಿಗೆ ಹೈಕೋರ್ಟ್ ನಕಾರ: ರಾಮಚಂದ್ರಾಪುರ ಮಠಕ್ಕೆ ಗೆಲುವು

     

    VIDEO: ಸಂಸದೆ ಶೋಭಾ ಕರಂದ್ಲಾಜೆಗೆ ಗಲ್ಫ್ ರಾಷ್ಟ್ರಗಳಿಂದ ಜೀವ ಬೆದರಿಕೆ ಕರೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts