More

    ವೈದ್ಯರ ಮೇಲಿನ ಹಿಂಸಾಚಾರ ತಡೆಯಲು ಕಾನೂನು ತನ್ನಿ : ಐಎಂಎ

    ನವದೆಹಲಿ : ವೈದ್ಯಕೀಯ ಸೇವಾಕರ್ತರ ಮೇಲೆ ನಡೆಯುವ ಹಿಂಸಾಚಾರದ ಬಗ್ಗೆ ದೇಶದಲ್ಲಿ ಒಂದು ಸಮಗ್ರವಾದ, ಏಕರೂಪ ಮತ್ತು ಪರಿಣಾಮಕಾರಿ ಕಾನೂನನ್ನು ಜಾರಿಗೊಳಿಸಬೇಕೆಂದು ಇಂಡಿಯನ್ ಮೆಡಿಕಲ್ ಅಸೋಸಿಯೇಷನ್(ಐಎಂಎ) ಆಗ್ರಹಿಸಿದೆ. ಈ ಕುರಿತು ಐಎಂಎ ಕೇಂದ್ರ ಗೃಹ ಸಚಿವ ಅಮಿತ್​ ಷಾ ಅವರಿಗೆ ಪತ್ರ ಬರೆದಿದೆ.

    ದೇಶದಲ್ಲಿ ವೈದ್ಯರ ವಿರುದ್ಧ ವರದಿಯಾಗುತ್ತಿರುವ ಹಲ್ಲೆಗಳ ಹಿನ್ನೆಲೆಯಲ್ಲಿ ಐಎಂಎ ಈ ಮನವಿ ಮಾಡಿದೆ. ಇತ್ತೀಚಿನ ಪ್ರಕರಣದಲ್ಲಿ ಅಸ್ಸಾಂನಲ್ಲಿ ಕಿರಿಯ ವೈದ್ಯರೊಬ್ಬರನ್ನು ಮೃತರೋಗಿಯ ಸಂಬಂಧಿಕರ ದೊಡ್ಡ ಗುಂಪು ಮನಬಂದಂತೆ ಥಳಿಸಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದೆ.

    ಇದನ್ನೂ ಓದಿ: ಗಾಯಕಿ ಶಮಿತಾ ಮಲ್ನಾಡ್ ಪುತ್ರನ ಪ್ರಶ್ನೆಗೆ ವಿರಾಟ್ ಕೊಹ್ಲಿ ಕೊಟ್ರು ಉತ್ತರ

    “ವರ್ಷಗಳು ಕಳೆದಂತೆ ಆರೋಗ್ಯಸೇವಾಕರ್ತರ ಮೇಲಿನ ಹಿಂಸಾಚಾರ ಪ್ರಕರಣಗಳು ಹೆಚ್ಚಿವೆ ಮತ್ತು ವ್ಯಾಪಕವಾಗಿವೆ. ಈ ಆತಂಕಕಾರಿ ವಿಷಯವು ವೈದ್ಯರ ಕಾರ್ಯನಿರ್ವಹಣೆಗೆ ಕುತ್ತಾಗಿದೆ” ಎಂದು ಹೇಳಿರುವ ಐಎಂಎ, “ಭಾರತದಲ್ಲಿ ಆರೋಗ್ಯಸೇವೆಗೆ ಸಂಬಂಧಿಸಿದ ಹಿಂಸಾಚಾರದ ವಿರುದ್ಧ ಸಮಗ್ರವಾದ ಕಾನೂನಿನ ಅಗತ್ಯವಿದೆ. ಆದ್ದರಿಂದ ಪರಿಣಾಮಕಾರಿ ಮತ್ತು ಬಲ ಹೊಂದಿದ ಕಾಯ್ದೆಯೊಂದನ್ನು ಅನುಮೋದಿಸಬೇಕೆಂದು ಮನವಿ ಮಾಡುತ್ತೇವೆ” ಎಂದು ಪತ್ರದಲ್ಲಿ ಹೇಳಿದೆ.(ಏಜೆನ್ಸೀಸ್)

    VIDEO | ಕರೊನಾ ರೋಗಿ ಸತ್ತಿದ್ದಕ್ಕೆ ವೈದ್ಯನನ್ನು ಹಿಗ್ಗಾಮುಗ್ಗಾ ಥಳಿಸಿದರು! ಹಲ್ಲೆ ಮಾಡಿದ 24 ಜನರು ಜೈಲಿಗೆ

    ಲಸಿಕೆ ಪಡೆದು ಹೊಟೆಲ್​ನಲ್ಲಿ ತಂಗುವ ಆಫರ್​! ಮಾಮೂಲಿ ಫ್ರಿಜ್ಜಲ್ಲಿ ಕೋವಾಕ್ಸಿನ್ ಶೇಖರಣೆ​!

    ಅಂಧ ದಂಪತಿಯ ಕುಟುಂಬಕ್ಕೆ ಪೊಲೀಸ್​ ಅಧಿಕಾರಿಯ ಸಹಾಯಹಸ್ತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts