More

    ಲಸಿಕೆ ಪಡೆದು ಹೊಟೆಲ್​ನಲ್ಲಿ ತಂಗುವ ಆಫರ್​! ಮಾಮೂಲಿ ಫ್ರಿಜ್ಜಲ್ಲಿ ಕೋವಾಕ್ಸಿನ್ ಶೇಖರಣೆ​!

    ಮುಂಬೈ: ‘ಲಸಿಕೆ ಪಡೆದು ವಿಶ್ರಾಂತಿ ತೆಗೆದುಕೊಳ್ಳಿ’ ಎಂಬ ಆಫರ್​ಗಳನ್ನು ಕೆಲವು ಹೊಟೆಲ್​ಗಳು ಆರಂಭಿಸಿರುವುದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಲಾಕ್​ಡೌನ್​ನಿಂದಾಗಿ ಮನೆಯಲ್ಲೇ ಇದ್ದು ಬೇಸರಗೊಂಡಿರುವ, ಲಸಿಕೆ ನೋಂದಣಿಗೆ ಸಮಸ್ಯೆ ಎದುರಿಸುತ್ತಿರುವ ಜನರು ಈ ಬಗ್ಗೆ ಯೋಚಿಸುತ್ತಿದ್ದಾರೆ. ಆದರೆ ಅದು ಎಷ್ಟು ಸಮಂಜಸ ಎಂಬ ಪ್ರಶ್ನೆಗಳು ಮೂಡುವುದರೊಂದಿಗೆ ಕೇಂದ್ರ ಸರ್ಕಾರ ಕೂಡ ಅದಕ್ಕೆ ಅನುಮತಿ ನೀಡಬಾರದೆಂದು ತಾಕೀತು ಮಾಡಿದೆ.

    ಇದೇ ರೀತಿ ಆಫರ್​ನಡಿ ಮುಂಬೈನ ಅಂಧೇರಿ ಈಸ್ಟ್​ನ ‘ದ ಲಲಿತ್​ ಹೋಟೆಲ್’​ನಲ್ಲಿ ವ್ಯವಸ್ಥೆ ಮಾಡಿದ್ದು, ಮಾಮೂಲಿ ಫ್ರಿಜ್​ನಲ್ಲಿ ಕೋವಾಕ್ಸಿನ್ ಲಸಿಕೆಗಳನ್ನು ಶೇಖರಿಸಿಟ್ಟಿರುವುದು ಬೆಳಕಿಗೆ ಬಂದಿದೆ. ಬೃಹನ್​ಮುಂಬೈ ಮಹಾನಗರ ಪಾಲಿಕೆ ಅಧಿಕಾರಿಗಳೊಂದಿಗೆ ಮುಂಬೈ ಮೇಯರ್​ ಕಿಶೋರಿ ಪೆಡ್ನೆಕರ್ ಅವರು ನಿನ್ನೆ ತಪಾಸಣೆ ನಡೆಸಿದ್ದು, ಶೇಖರಿಸಿಟ್ಟ ಲಸಿಕೆಗಳನ್ನು ಜಪ್ತಿಪಡಿಸಿಕೊಂಡು ತನಿಖೆಗೆ ಆದೇಶಿಸಿದ್ದಾರೆ.

    ಇದನ್ನೂ ಓದಿ: ಐ ಡ್ರಾಪ್ಸ್​ನಿಂದ ಕರೊನಾದಿಂದ ಗುಣಮುಖನಾದೆ ಎಂದು ವಿಡಿಯೋ ಮಾಡಿದ್ದ ವ್ಯಕ್ತಿ… ಆಸ್ಪತ್ರೆಯಲ್ಲಿ ನಿಧನ

    ಸದರಿ ಹೋಟೆಲ್ ಸ್ಥಳೀಯ ಖಾಸಗಿ ಆಸ್ಪತ್ರೆಯಾದ ಕ್ರಿಟಿಕೇರ್ ಹಾಸ್ಪಿಟಲ್​​ನೊಂದಿಗೆ ಟೈಅಪ್ ಹೊಂದಿದ್ದು, 500 ಜನರಿಗೆ ಈಗಾಗಲೇ ಲಸಿಕೆ ನೀಡಿದೆ. ಆಸ್ಪತ್ರೆಯೇ ಈ ಪ್ರಸ್ತಾವನೆ ನೀಡಿದ್ದು, ಒಬ್ಬರೇ ವಾಸಿಸುವವರು ಈ ರೀತಿ ಹೊಟೆಲ್​ಗೆ ಬಂದು ಲಸಿಕೆ ಪಡೆಯಬಹುದು ಎಂದು ಆರಂಭಿಸಿದ್ದಾರೆ. ಹೊಟೆಲ್​ನವರನ್ನು ಬೈಯ್ಯುವ ಹಾಗಿಲ್ಲ. ಆದರೆ ಆಸ್ಪತ್ರೆಯು ಲಸಿಕೆಯ ಕೋಲ್ಡ್​ ಸ್ಟೋರೇಜ್​ ಬಗೆಗಿನ ನಿಯಮಗಳನ್ನು ಪಾಲಿಸಿಲ್ಲ ಎಂದು ಪೆಡ್ನೆಕರ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

    “ಪಾಲಿಕೆ ಕೇಂದ್ರಗಳಲ್ಲೇ ಕೋವಾಕ್ಸಿನ್ ಲಭ್ಯವಿಲ್ಲ. ಅಂದ ಮೇಲೆ ಇವರಿಗೆ ಕೋವಾಕ್ಸಿನ್ ಹೇಗೆ ಸಿಕ್ಕಿತು. ಮಾಮೂಲಿ ಫ್ರಿಜ್​ನಲ್ಲಿ ಲಸಿಕೆಗಳನ್ನು ಇಟ್ಟಿರುವುದನ್ನು ನಾನು ಪತ್ತೆ ಹಚ್ಚಿದ್ದೇನೆ. ಇದರಿಂದ ಲಸಿಕೆ ಪಡೆದವರಲ್ಲಿ ಅಡ್ಡಪರಿಣಾಮ ಉಂಟಾಗಬಹುದು. ಲಸಿಕೆ ಜಪ್ತಿಪಡಿಸಿಕೊಂಡು ತನಿಖೆ ಆದೇಶಿಸಲಾಗಿದೆ” ಎಂದಿದ್ದಾರೆ. (ಏಜೆನ್ಸೀಸ್)

    ಅಂಧ ದಂಪತಿಯ ಕುಟುಂಬಕ್ಕೆ ಪೊಲೀಸ್​ ಅಧಿಕಾರಿಯ ಸಹಾಯಹಸ್ತ

    VIDEO | ‘ಚಿಕ್ಕ ಮಕ್ಕಳಿಗೆ ಇಷ್ಟೊಂದು ಕೆಲಸವೇಕೆ, ಮೋದಿ ಸಾಬ್ ?’ ಮುದ್ದು ಹುಡುಗಿಯ ಪ್ರಶ್ನೆ !

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts