More

    ಮತ್ತಿಬ್ಬರು ಆಟಗಾರರಿಗೆ ಕರೊನಾ ದೃಢ: ಐಪಿಎಲ್ ರದ್ದು!

    ನವದೆಹಲಿ: ಈವರೆಗೆ ನಾಲ್ವರು ಆಟಗಾರರಿಗೆ ಕರೊನಾ ಪಾಸಿಟಿವ್​ ದೃಢಪಟ್ಟಿದ್ದು, ಕರೊನಾ ಎರಡನೇ ಅಲೆಯ ಗಂಭೀರತೆ ಅರಿತು ಪ್ರಸಕ್ತ ಐಪಿಎಲ್ ಟೂರ್ನಿಯನ್ನು ರದ್ದು ಮಾಡಿರುವುದಾಗಿ ಬಿಸಿಸಿಐ ಉಪಾಧ್ಯಕ್ಷ ರಾಜೀವ್​ ಶುಕ್ಲಾ ಮಂಗಳವಾರ ತಿಳಿಸಿದ್ದಾರೆ. ​

    ಡೆಲ್ಲಿ ಕ್ಯಾಪಿಟಲ್ಸ್​ ತಂಡದ ಅಮಿತ್​ ಮಿಶ್ರಾ ಮತ್ತು ಸನ್​ ರೈಸರ್ಸ್​ ಹೈದರಾಬಾದ್​ನ ವೃದ್ಧಿಮಾನ್​ ಸಹಾಗೆ ಕರೊನಾ ಸೋಂಕು ದೃಢಪಟ್ಟಿದೆ. ವೃದ್ಧಿಮನ್ ಪರೀಕ್ಷೆಯ ನಂತರ ನಿನ್ನೆಯಿಂದಲೇ ಪ್ರತ್ಯೇಕವಾಗಿದ್ದಾರೆ.

    ಸೋಮವಾರವಷ್ಟೇ ಕೆಕೆಆರ್​ ತಂಡದ ವರುಣ್​ ಚಕ್ರವರ್ತಿ ಮತ್ತು ಸಂದೀಪ್​ ವಾರಿಯರ್​ಗೆ ಕರೊನಾ ದೃಢಪಟ್ಟಿದೆ. ಬಯೋಬಬಲ್​ ಒಳಗೆ ಕರೊನಾ ಪಾಸಿಟಿವ್​ ಆದ ಮೊದಲ ಆಟಗಾರರು ಎನಿಸಿಕೊಂಡಿದ್ದು, ಇದೇ ಕಾರಣದಿಂದ ನಿನ್ನೆ ನಡೆಯಬೇಕಿದ್ದ ಆರ್​ಸಿಬಿ ಮತ್ತು ಕೆಕೆಆರ್​ ನಡುವಿನ ಪಂದ್ಯ ರದ್ದು ಪಡಿಸಲಾಯಿತು.

    ಎಲ್ಲವೂ ಸರಿಯಿದ್ದರೆ ಇಂದು ಮುಂಬೈ ಇಂಡಿಯನ್ಸ್ ಹಾಗೂ ಸನ್‌ರೈಸರ್ಸ್‌ ನಡುವೆ ಪಂದ್ಯ ನಡೆಯಬೇಕಿತ್ತು. ಆದರೆ, ಕರೊನಾ ಒಂದು ಕ್ಯಾಂಪ್​ನಿಂದ ಮತ್ತೊಂದು ಕ್ಯಾಂಪ್​ಗೆ ಸ್ಥಳಾಂತರ ಆಗಿರುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ಐಪಿಎಲ್​ ರದ್ದು ಮಾಡಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts