More

    ರಾಶಿ ರಾಶಿ ನೋಟುಗಳ ಮೇಲೆ ನಿದ್ರೆ ಮಾಡುತ್ತಿರುವ ಅಸ್ಸಾಂ ರಾಜಕಾರಣಿಯ ಫೋಟೋ ವೈರಲ್; ರಾಜಕೀಯ ವಲಯದಲ್ಲಿ ತೀವ್ರ ಚರ್ಚೆ

    ಗುವಾಹಟಿ: ಭ್ರಷ್ಟಾಚಾರ ಆರೋಪದ ಹಿನ್ನೆಲೆಯಲ್ಲಿ ಅಮಾನತುಗೊಂಡಿರುವ ಅಸ್ಸಾಂನ ಯುನೈಟೆಡ್ ಪೀಪಲ್ಸ್ ಪಾರ್ಟಿ ಲಿಬರಲ್ (ಯುಪಿಪಿಎಲ್) ನಾಯಕ ಬೆಂಜಮಿನ್ ಬಸುಮತರಿಯ ವಿವಾದಾತ್ಮಕ ಫೋಟೋವೊಂದು ಲೋಕಸಭೆ ಚುನಾವಣೆಗೆ ಮುನ್ನವೇ ಹೊರಬಿದ್ದಿದೆ. ವೈರಲ್ ಆಗಿರುವ ಫೋಟೋದಲ್ಲಿ ಅವರು ಹಾಸಿಗೆಯ ಮೇಲೆ ಮಲಗಿದ್ದು, ಅವರ ಮೇಲೆ 500 ರೂಪಾಯಿ ನೋಟುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ.

    ಬೆಂಜಮಿನ್ ಬಸುಮತರಿ ಈ ಫೋಟೋದಲ್ಲಿ ಸಾಂಪ್ರದಾಯಿಕ ‘ಗಾಮೋಸಾ’ ಧರಿಸಿದ್ದಾರೆ. ಈ ಫೋಟೋ ವೈರಲ್ ಆದ ನಂತರ ವಿರೋಧ ಪಕ್ಷಗಳು ಬಿಜೆಪಿಯನ್ನು ಟಾರ್ಗೆಟ್ ಮಾಡುತ್ತಿವೆ. ಆದರೆ ಈ ಫೋಟೋ ಹಳೆಯದಾಗಿದ್ದು ತಮಾಷೆಗಾಗಿ ತೆಗೆಯಲಾಗಿದೆ ಎಂದು ಬಸುಮತರಿ ಹೇಳಿಕೊಂಡಿದ್ದಾರೆ.

    ಫೋಟೋ ವೈರಲ್ ಆದ ನಂತರ, ವಿರೋಧ ಪಕ್ಷಗಳು ಭ್ರಷ್ಟಾಚಾರ ಆರೋಪಗಳ ಮೇಲೆ ಯುಪಿಪಿಎಲ್ -ಬಿಜೆಪಿ ನೇತೃತ್ವದ ಮೈತ್ರಿಯನ್ನು ಟೀಕಿಸಿವೆ. ಕಾಂಗ್ರೆಸ್ ನಾಯಕ ದೇಬಬ್ರತ ಸೈಕಿಯಾ ಇದನ್ನು ‘ಭ್ರಷ್ಟಾಚಾರದ ಬಹಿರಂಗ ಪ್ರದರ್ಶನ’ ಎಂದು ಖಂಡಿಸಿ, ಕ್ರಮಕ್ಕೆ ಒತ್ತಾಯಿಸಿದರು. ಒಟ್ಟಾರೆ ಯುಪಿಪಿಎಲ್ ನಾಯಕನ ಅಮಾನತು ಮತ್ತು ಫೋಟೋ ವಿವಾದವು ಅಸ್ಸಾಂನಲ್ಲಿ ರಾಜಕೀಯ ಚರ್ಚೆಯನ್ನು ಹುಟ್ಟುಹಾಕಿದೆ.

    ಚುನಾವಣಾ ಆಯೋಗಕ್ಕೆ ದೂರು

    ಈ ವಿಚಾರದಲ್ಲಿ ಯುಪಿಪಿಎಲ್ ಮುಖ್ಯಸ್ಥ ಮತ್ತು ಬೋಡೋಲ್ಯಾಂಡ್ ಟೆರಿಟೋರಿಯಲ್ ಕೌನ್ಸಿಲ್ ಸಿಇಎಂ ಪ್ರಮೋದ್ ಬೋರೋ ಅವರು ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ಪಕ್ಷದ ವಿರುದ್ಧ ದೂರು ದಾಖಲಿಸಿದ್ದಾರೆ. ಈ ಕುರಿತು ಮಾತನಾಡಿದ ಅವರು ಕಾಂಗ್ರೆಸ್‌ನ ಕೆಲವು ಟ್ವಿಟರ್ ಪೇಜ್ ಗಳು ಬಸುಮತರಿ ಅವರ ಫೋಟೋ ಬಳಸಿದ್ದಾರೆ. ಇದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಕಾಂಗ್ರೆಸ್ ಮತ್ತು ಅದರ ನಾಯಕರು ಎಷ್ಟು ಬೇಜವಾಬ್ದಾರಿ ಹೊಂದಿದ್ದಾರೆ ಎಂದು ನನಗೆ ಆಶ್ಚರ್ಯವಾಗಿದೆ. ಇದು ನಿಜವಾದ ಸುದ್ದಿಯೇ ಅಥವಾ ಅಲ್ಲವೇ, ಅಧಿಕೃತ ಮೂಲದಿಂದ ಬರುತ್ತಿದೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಲು ಅವರಿಗೆ ಸಮಯವಿಲ್ಲ. ಹಾಗಾದರೆ ಅವರು ರಾಷ್ಟ್ರಮಟ್ಟದಲ್ಲಿ ತಮ್ಮ ರಾಜಕೀಯವನ್ನು ಹೇಗೆ ಮಾಡುತ್ತಿದ್ದಾರೆ? ನನಗೆ ತುಂಬಾ ಆಶ್ಚರ್ಯವಾಗಿದೆ. ಆದ್ದರಿಂದ ನಾನು ಅವರ ವರ್ತನೆ ಖಂಡಿಸುತ್ತೇನೆ. ಅವರ ವಿರುದ್ಧ ಎಫ್‌ಐಆರ್ ದಾಖಲಿಸಲಿದ್ದೇನೆ ಮತ್ತು ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಚುನಾವಣಾ ಆಯೋಗಕ್ಕೆ ಈಗಾಗಲೇ ದೂರು ನೀಡಿದ್ದೇನೆ ಎಂದರು.

    ತಾಪಮಾನ ಏರಿಕೆ; ಉತ್ತರ ಕರ್ನಾಟಕ ಭಾಗದ 4 ಜಿಲ್ಲೆಗಳಿಗೆ ಎಚ್ಚರಿಕೆ ನೀಡಿದ ಐಎಂಡಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts