More

    ಕೊಬ್ಬು ತೆಗೆಯುವ ಸರ್ಜರಿಗೊಳಗಾದ ಫಿಟ್‌ನೆಸ್‌ ಇನ್‌ಫ್ಲುಯೆನ್ಸರ್‌ ಹೃದಯ ಸ್ತಂಭನದಿಂದ ಸಾವು

    ಬ್ರೆಜಿಲ್​​: ದೇಹದ ಹೆಚ್ಚುವರಿ ಕೊಬ್ಬು ತೆಗೆಸಲು ಸರ್ಜರಿಗೆ ಒಳಗಾದ ಯುವತಿ ಹೃದಯ ಸ್ತಂಭನದಿಂದ ಮೃತಪಟ್ಟಿದ್ದಾರೆ. ಈ ಘಟನೆ ಬ್ರೆಜಿಲ್​​ನಲ್ಲಿ ನಡೆದಿದೆ.

    ಲುವಾನಾ ಆಂಡ್ರೇಡ್(29) ಮೃತ ಯುವತಿ. ಸೋಶಿಯಲ್​​ ಮೀಡಿಯಾ ಇನ್‌ಫ್ಲುಯೆನ್ಸರ್‌ ಆಗಿದ್ದಾರೆ. ತಮ್ಮ ಮೊಣಕಾಲಿನ ಲಿಪೊಸಕ್ಷನ್ ಶಸ್ತ್ರಚಿಕಿತ್ಸೆಯ ಒಂದು ದಿನದ ನಂತರ ಆಸ್ಪತ್ರೆಯಲ್ಲಿ ಮೃತಪಟಿದ್ದಾರೆ.

    ಮೊಣಕಾಲಿನ ಲಿಪೊಸಕ್ಷನ್ ಶಸ್ತ್ರಚಿಕಿತ್ಸೆಗೆ ಒಳಗಾದ ನಂತರ ದುರಂತವಾಗಿ ಸಾವನ್ನಪ್ಪಿದ್ದಾರೆ. ಶಸ್ತ್ರಚಿಕಿತ್ಸೆ ನಡೆಸುವಾಗಲೇ ಲುವಾನಾಗೆ ಕಾರ್ಡಿಯಾಕ್ ಅರೆಸ್ಟ್ ಆಗಿದ್ದು, ವೈದ್ಯರು ಕೊಬ್ಬು ತೆಗೆಯುವ ವಿಧಾನವನ್ನು ನಿಲ್ಲಿಸಿದರು. ತಕ್ಷಣ ಆಕೆಯನ್ನು ತೀವ್ರ ನಿಗಾ ಘಟಕಕ್ಕೆ ವರ್ಗಾಯಿಸಲಾಯಿತು. ಆದರೂ ಬದುಕುಳಿಯಲ್ಲಿಲ್ಲ. ಲುವಾನಾ, ಪಲ್ಮನರಿ ಎಂಬಾಲಿಸಮ್‌ನಿಂದ ಬಳಲುತ್ತಿದ್ದರು, ಇದು ಥ್ರಂಬೋಸಿಸ್‌ಗೆ ಸಂಬಂಧಿಸಿದೆ ಎಂದು ವೈದ್ಯಕೀಯ ತನಿಖೆಯಿಂದ ತಿಳಿದುಬಂದಿದೆ

    ಬ್ರೆಜಿಲಿಯನ್ ಕಾಲೇಜ್ ಆಫ್ ಪ್ಲಾಸ್ಟಿಕ್ ಸರ್ಜರಿಯ ಡಾ. ಎಡ್ವರ್ಡೊ ಟೀಕ್ಸೆರಾ, ‘ಯಾವುದೇ ಅಪಾಯ ಮುಕ್ತ ಶಸ್ತ್ರಚಿಕಿತ್ಸೆ ಇಲ್ಲ, ಅಥವಾ ಅಪಾಯವನ್ನು ಒಳಗೊಂಡಿರದ ಯಾವುದೇ ವೈದ್ಯಕೀಯ ವಿಧಾನವಿಲ್ಲ’ ಎಂದು ತಿಳಿಸಿದ್ದಾರೆ.

    ಇನ್‌ಸ್ಟಾಗ್ರಾಮ್‌ನಲ್ಲಿ ಇನ್‌ಫ್ಲುಯೆನ್ಸರ್‌ ಆಗಿದ್ದ ಲುವಾನಾ ಅತ್ಯಧಿಕ ಸಂಖ್ಯೆಯ ಫಾಲೋವರ್ಸ್‌ನ್ನು ಹೊಂದಿದ್ದಾರೆ. ಡೊಮಿಂಗೊ ಲೀಗಲ್‌ಗೆ ವೇದಿಕೆ ಸಹಾಯಕರಾಗಿ ಕೆಲಸ ಮಾಡಿದರು. ಮಾತ್ರವಲ್ಲ 2022 ರಲ್ಲಿ ಪ್ರಸಾರವಾದ ಪವರ್ ಕಪಲ್ ಬ್ರೆಸಿಲ್ 6 ಎಂಬ ರಿಯಾಲಿಟಿ ಶೋನ ಭಾಗವಾಗಿದ್ದರು.

    ಲಿಪೊಸೆಕ್ಷನ್ ಸರ್ಜರಿ ಎಂದರೇನು? : ಲಿಪೊಸೆಕ್ಷನ್ ಎಂದರೆ ಒಟ್ಟಾರೆ ತೂಕ ನಷ್ಟಕ್ಕೆ ಮಾಡುವ ಸರ್ಜರಿಯಾಗಿದೆ. ದೇಹದ ನಿರ್ದಿಷ್ಟ ಸ್ಥಳಗಳಲ್ಲಿ ಹೆಚ್ಚುವರಿ ದೇಹದ ಕೊಬ್ಬನ್ನು ಹೊಂದಿದ್ದರೆ ಲಿಪೊಸಕ್ಷನ್ ಶಸ್ತ್ರಚಿಕಿತ್ಸೆ ಮಾಡುತ್ತಾರೆ. ಲಿಪೊಸಕ್ಷನ್ ಆಹಾರ ಮತ್ತು ವ್ಯಾಯಾಮಕ್ಕೆ ಪ್ರತಿಕ್ರಿಯಿಸದ ದೇಹದ ಪ್ರದೇಶಗಳಿಂದ ಕೊಬ್ಬನ್ನು ತೆಗೆದುಹಾಕುತ್ತದೆ. ದೇಹದ ಹೊಟ್ಟೆ, ಮೇಲಿನ ತೋಳುಗಳು, ಪೃಷ್ಠ, ತೊಡೆ, ಎದೆ, ಬೆನ್ನು, ಗಲ್ಲ, ಕುತ್ತಿಗೆ ಮೊದಲಾದ ಜಾಗದಲ್ಲಿರುವ ಹೆಚ್ಚುವರಿ ಕೊಬ್ಬನ್ನು ತೆಗೆದು ಹಾಕುತ್ತದೆ. ಇದರ ಜೊತೆಗೆ, ಪುರುಷರಲ್ಲಿ ಹೆಚ್ಚುವರಿ ಸ್ತನ ಅಂಗಾಂಶವನ್ನು ಕಡಿಮೆ ಮಾಡಲು ಲಿಪೊಸಕ್ಷನ್ ಅನ್ನು ಕೆಲವೊಮ್ಮೆ ಬಳಸಬಹುದು.

    ಜಾಗಿಂಗ್ ವೇಳೆ ಹೃದಯಾಘಾತ: ಜೀವ ಉಳಿಸಿದ ಸ್ಮಾರ್ಟ್ ವಾಚ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts