More

    IPL 2024: ಗುಜರಾತ್​​​ ಟೈಟನ್ಸ್‌ಗೆ ಶಾಕ್..ಸ್ಟಾರ್​​​​​ ಬೌಲರ್​​ ಟೂರ್ನಿಯಿಂದ ಔಟ್.?

    ಬೆಂಗಳೂರು: ಕಾಲಿನ ಗಾಯದ ನೋವಿನ ಗಂಭೀರ ಸಮಸ್ಯೆ ಎದುರಿಸಿರುವ ವಿಕೆಟ್ ಟೇಕರ್ ಮೊಹಮ್ಮದ್ ಶಮಿ, 2024ರ ಸಾಲಿನ ಇಂಡಿಯನ್ ಪ್ರೀಮಿಯರ್​ ಲೀಗ್​ ಟೂರ್ನಿಯಿಂದ ಹೊರಬಿದ್ದಿದ್ದಾರೆ.

    ಇದನ್ನೂ ಓದಿ:ತಮಿಳುನಾಡು ರಾಜಕಾರಣಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ ನಟಿ ತ್ರಿಷಾ!

    ಅಷ್ಟೇ ಅಲ್ಲದೆ 17ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಗುಜರಾತ್ ಟೈಟಾನ್ಸ್​ ತಂಡದ ಪರ ಆಡುವುದು ಕೂಡ ಅನುಮಾನವಾಗಿದೆ. ಇದರಿಂದ ಗುಜರಾತ್ ಟೈಟಾನ್ಸ್ ತಂಡಕ್ಕೆ ಮತ್ತೊಂದು ಬಿಗ್ ಶಾಕ್ ಎದುರಾಗಿದೆ.

    ಶಮಿ ಕಾಲಿನ ಗಾಯದ ಚಿಕಿತ್ಸೆಗಾಗಿ ಕಳೆದವಾರವಷ್ಟೇ ಲಂಡನ್​ಗೆ ಹೋಗಿ ಬಂದಿದ್ದರು. ವೈದ್ಯರು ಸ್ಪೆಷಲ್​ ಟ್ರೀಟ್​ಮೆಂಟ್​ ನೀಡಿದ್ದರು. ವೈದ್ಯರ ಸಲಹೆ ಮೇರೆಗೆ ಮೂರು ವಾರಗಳ ಕಾಲ ನಿಧಾನವಾಗಿ ಓಡಾಡುತ್ತಾ ವಿಶ್ರಾಂತಿ ಪಡೆಯುತ್ತಿದ್ದರು. ಆದರೆ ಇನ್ನೂ ಗುಣಮುಖರಾಗದ ಕಾರಣ ಅವರಿಗೆ ಕಾಲಿಗೆ ಶಸ್ತ್ರಚಿಕಿತ್ಸೆ ಮಾಡಬೇಕು ಎಂದು ವೈದ್ಯರು ಸೂಚಿಸಿದ್ದು ಅವರು ಲಂಡನ್​ಗೆ ತೆರಳಲಿದ್ದಾರೆ. ಇದರಿಂದ ಐಪಿಎಲ್​ 2024 ಎಲ್ಲಿ ಆಡುವುದು ಅನುಮಾನ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

    ಗುಜರಾತ್ ಟೈಟಾನ್ಸ್ ಪರ ಕಣಕ್ಕಿಳಿಯುತ್ತಿರುವ ಮೊಹಮ್ಮದ್ ಶಮಿ, ತಂಡದ ಬೌಲಿಂಗ್ ವಿಭಾಗವನ್ನು ಮುನ್ನಡೆಸುತ್ತಿದ್ದರು. ಆದರೀಗ ಶಮಿ ಅಲಭ್ಯತೆ ಗುಜರಾತ್ ತಂಡಕ್ಕೆ ಸಂಕಷ್ಟ ತಂದೊಡ್ಡಿದೆ.

    2023ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ 24 ವಿಕೆಟ್ ಪಡೆದು ಲೀಡಿಂಗ್ ವಿಕೆಟ್ ಟೇಕರ್ ಆಗಿರುವ ಮೊಹಮ್ಮದ್ ಶಮಿ, ಪಾದದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ವಿಶ್ವಕಪ್ ಟೂರ್ನಿ ನಂತರ ಕ್ರಿಕೆಟ್ ಅಂಗಳದಿಂದ ದೂರ ಉಳಿದಿರುವ ಮೊಹಮ್ಮದ್ ಶಮಿ, ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ 5 ಪಂದ್ಯಗಳ ಟೆಸ್ಟ್ ಸರಣಿಯಿಂದಲೂ ವಿಶ್ರಾಂತಿ ಪಡೆಯುತ್ತಿದ್ದರು.

    ದೆಹಲಿಯಲ್ಲಿ ಕಾಂಗ್ರೆಸ್ ಜತೆಗಿನ ಮೈತ್ರಿ ಖಚಿತ?: ಕಾಂಗ್ರೆಸ್‌ ತಲೆಬಾಗುವಂತೆ ಮಾಡಿತೇ ಎಎಪಿ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts