More

    ಜಾಗಿಂಗ್ ವೇಳೆ ಹೃದಯಾಘಾತ: ಜೀವ ಉಳಿಸಿದ ಸ್ಮಾರ್ಟ್ ವಾಚ್

    ನವದೆಹಲಿ: ಹಾಕಿ ವೇಲ್ಸ್‌ನ ಸಿಇಒ ಪಾಲ್ ವಾಫಮ್ ತಮ್ಮ ಮನೆಯ ಸಮೀಪ ಬೆಳಗ್ಗೆ ಓಡುತ್ತಿದ್ದಾಗ ಎದೆಯಲ್ಲಿ ತೀವ್ರವಾದ ಎದೆ ನೋವು ಕಾಣಿಸಿಕೊಂಡಿದ್ದು, ಸ್ಮಾರ್ಟ್ ವಾಚ್ ಮೂಲಕವಾಗಿ ಈತನ ಪ್ರಾಣ ಉಳಿದಿದೆ ಎನ್ನುವುದು ನಂಬಲು ಅಸಾದ್ಯವಾದರು ಇದು ಸತ್ಯ.

    ಹಾಕಿ ವೇಲ್ಸ್‌ನ CEO ಆಗಿರುವ ಪಾಲ್ ವಾಫಮ್ ಅವರು ಬೆಳಿಗ್ಗೆ ತಮ್ಮ ಮನೆಯ ಬಳಿ ಜಾಗಿಂಗ್ ಮಾಡುತ್ತಿದ್ದಾಗ ಎದೆಯಲ್ಲಿ ತೀವ್ರವಾದ ನೋವು ಕಾಣಿಸಿಕೊಂಡಿದೆ. ಈ ಸಂದರ್ಭದಲ್ಲಿ ಸ್ಮಾರ್ಟ್ ವಾಚ್ ಮೂಲಕ ತನ್ನ ಹೆಂಡತಿಯನ್ನು ಸಂಪರ್ಕಿಸಿದ್ದಾರೆ. ತಕ್ಷಣವೇ ಅವರ ಹೆಂಡತಿ ಸ್ಥಳಕ್ಕೆ ಬಂದು ಪಾಲ್ ವಾಫಮ್ ರನ್ನು ಆಸ್ಪತ್ರೆಗೆ ಸೇರಿಸಿದ್ದಾರೆ.

    ಇದರ ಬಗ್ಗೆ ಮಾಹಿತಿ ನೀಡಿದ ಪಾಲ್ “ನಾನು ಪ್ರತಿನಿತ್ಯದಂತೆ ಬೆಳಿಗ್ಗೆ 7 ಗಂಟೆಗೆ ಜಾಗಿಂಗ್​ಗೆ ಹೋಗಿದ್ದೇನು. 5 ನಿಮಿಷದಲ್ಲಿಯೇ ನನಗೆ ಎದೆ ನೋವು ಕಾಣಿಸಿಕೊಂಡಿತು. ನನ್ನ ಎದೆಯು ಬಿಗಿಯಾದಂತಾಯಿತು. ಸುಸ್ತಾಗಿ ರಸ್ತೆಯಲ್ಲಿ ನಾನು ಕುಳಿತುಬಿಟ್ಟೆ. ಏನು ಮಾಡಬೇಕು ಎಂದು ಸ್ವಲ್ಪ ಸಮಯ ತಿಳಿಯಲೇ ಇಲ್ಲ. ನಂತರ ನನ್ನ ಬಳಿ ಇದ್ದ ಸ್ಮಾಟ್​​ವಾಚ್​ನಿಂದ ನನ್ನ ಪತ್ನಿ ಲಾರಾಗೆ ಫೋನ್ ಮಾಡಿದೆ. ಅದೃಷ್ಟವಶಾತ್, ನಾನು ಹತ್ತಿರದಲ್ಲೆ ಇದ್ದೆ ಆದ್ದರಿಂದ ಅವಳು ಬೇಗನೆ ಬಂದು ನನ್ನನ್ನು ಆಸ್ಪತ್ರೆಗೆ ಕರೆಕೊಂಡು ಹೋಗಲು ಸಾಧ್ಯವಾಯಿತು. ವೈದ್ಯರು ಸಹ ನನಗೆ ತಕ್ಷಣ ಚಿಕಿತ್ಸೆ ನೀಡಿ ಬದುಕಿಸಿದ್ದಾರೆ ಎಂದರು.

    ನಾನು ಅಧಿಕ ತೂಕ ಹೊಂದಿಲ್ಲದ ಕಾರಣ ಇದು ಸ್ವಲ್ಪ ಆಘಾತವನ್ನುಂಟು ಮಾಡಿದೆ ಮತ್ತು ನಾನು ನನ್ನನ್ನು ಫಿಟ್ ಆಗಿಟ್ಟುಕೊಳ್ಳಲು ಪ್ರಯತ್ನಿಸುತ್ತೇನೆ. ನನ್ನ ಕುಟುಂಬ ಸೇರಿದಂತೆ ಎಲ್ಲರಿಗೂ ಆಘಾತ ನೀಡಿದೆ. ಅವರ ಕಾಳಜಿ ಮತ್ತು ಬೆಂಬಲಕ್ಕಾಗಿ ಅವರ ಪತ್ನಿ ಮತ್ತು ಆಸ್ಪತ್ರೆಯ ಸಿಬ್ಬಂದಿಗೆ ಧನ್ಯವಾದ ಹೇಳಿದರು.

    ಸ್ಮಾರ್ಟ್ ವಾಚ್‌ಗಳು ಜೀವ ರಕ್ಷಕ ಎಂದು ಹಲವು ಸಂದರ್ಭಗಳಲ್ಲಿ ಸಾಬೀತಾಗಿದೆ. ಹೃದಯ ಬಡಿತ, ಇಸಿಜಿ ಮತ್ತು ಹೆಚ್ಚಿನದನ್ನು ಅಳೆಯುವ ಸಂವೇದಕಗಳನ್ನು ಬಳಸಿಕೊಂಡು ಬಳಕೆದಾರರ ಆರೋಗ್ಯದಲ್ಲಿನ ಅಸಹಜತೆಯನ್ನು ಪತ್ತೆಹಚ್ಚುವ ಮೂಲಕ ಅದು ಹೇಗೆ ಜೀವಗಳನ್ನು ಉಳಿಸಿದೆ ಎಂಬುದರ ಕುರಿತು ಅನೇಕ ಘಟನೆಗಳು ನಡೆದಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts