

ಜೈಪುರ: ಆಘಾತಕಾರಿ ಘಟನೆಯೊಂದರಲ್ಲಿ ಬಾಲಕನೋರ್ವ ಆನ್ಲೈನ್ ಗೇಮಿಂಗ್ ಗೀಳಿಗೆ ಬಿದ್ದು, 15 ವರ್ಷದ ಬಾಲಕನೊಬ್ಬನಿಗೆ ಡಿಸಾರ್ಡರ್ ಆಗಿರುವ ಘಟನೆ ರಾಜಸ್ಥಾನದ ಅಲ್ವಾರ್ನಲ್ಲಿ ನಡೆದಿದೆ.
ಬಾಲಕ ಪ್ರತಿನಿತ್ಯ 15 ಘಂಟೆಗೂ ಹೆಚ್ಚಿನ ಕಾಲ ಪಬ್-ಜಿ ಆಡುತ್ತಿದ್ದ ಎಂದು ಪೋಷಕರು ತಿಳಿಸಿದ್ದು, ಇದರ ಪರಿಣಾಮವಾಗಿ ಆತ ರಾತ್ರಿ ಮಲಗಿದ್ದ ವೇಳೆ ಫೈರ್ ಫೈರ್ ಎಂದು ಚೀರುತ್ತಾನೆ. ಇತ್ತೀಚಿನ ದಿನಗಳಲ್ಲಿ ಆತನಿಗೆ ಗೇಮ್ ಆಡಲು ಮೊಬೈಲ್ ಕೊಡದ ಪರಿಣಾಮ ಆತನ ಕೈ ನಡುಗಲು ಶುರು ಮಾಡಿದೆ ಎಂದು ಪೋಷಕರು ತಿಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಆಪ್ತ ಸಮಾಲೋಚಕ ಭವಾನಿ ಸಿಂಗ್ ಬಾಲಕ ಕಳೆದ ಆರು ತಿಂಗಳುಗಳ ಕಾಲ ನಿರಂತರವಾಗಿ ಫ್ರೀ ಫೈರ್, ಪಬ್-ಜಿ ಆಡಿದ ಪರಿಣಾಮ ಆತನ ಸಂಪೂರ್ಣವಾಗಿ ಆಟದಲ್ಲಿ ತ್ಲಲೀನನಾಗಿದ್ದಾನೆ. ಆಟದಲ್ಲಿ ಸೋತಾಗ ಕೆಲವರು ಹತಾಶೆಯಿಂದ ಪ್ರಾಣ ಕಳೆದುಕೊಳ್ಳುತ್ತಾರೆ. ಆದರೆ, ಈ ಮಗುವಿನ ಪ್ರಕರಣವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಆತ ಮಾನಸಿಕ ಸಮತೋಲನವನ್ನು ಕಳೆದುಕೊಂಡಿದ್ದಾನೆ.
ಅದರಂತೆ ಓಈ ಮಗವೂ ಆಟದಲ್ಲಿ ತಲ್ಲೀನನಾಗಿ ಉಟವನ್ನು ತ್ಯಜಿಸಿದ್ದು, ರಾತ್ರಿ ಮಲಗಿದ್ದ ವೇಳೆ ಫೈರ್ ಫೈರ್ ಎಂದು ಚೀರುತ್ತಾನೆ. ಕೆಲವು ದಿನಗಳಿಂದ ಆಟವಾಡಲು ಮೊಬೈಲ್ ಕೊಡದ ಕಾರಣ ಆತ ಕೈಗಳು ನಡುಗಲು ಶುರುವಾಗಿದ್ದು ನಿಗಾ ವಹಿಸಿ ಚಿಕಿತ್ಸೆ ಕೊಡಲಾಗುತ್ತಿದೆ. ಈತನಿಗಾಗಿ ವಿಶೇಷ ಚಟುವಟಿಕೆಗಳನ್ನು ಏರ್ಪಡಿಸಲಾಗುತ್ತಿದ್ದು, ಆತ ಸೋಲಿನ ಆಘಾತದಿಂದ ಹೊರಬಂದು ಮಾನಸಿಕ ಸಮತೋಲನವನ್ನು ಕಂಡುಕೊಳ್ಳಲು ಚಿಕತ್ಸೆ ನೀಡಲಾಗುತ್ತಿದೆ.
ಇತ್ತೀಚಿನ ದಿನಗಳಲ್ಲಿ ಆನ್ಲೈನ್ ಗೇಮಿಂಗ್ ಚಟಕ್ಕೆ ಮಕ್ಕಳು ವ್ಯಸನಿಯಾಗುತ್ತಿದ್ದು, ಇದಕ್ಕೆ ಅನೇಕರು ಬಲಿಯಾಗಿದ್ದಾರೆ. ಎಚ್ಚರಿಕೆಯ ಹೊರತ್ಗಿಯೂ ಈ ರೀತಿ ಆಗುತ್ತಿರುವುದು ಚಿಂತಿಸಬೇಕಾಗಿರುವ ವಿಚಾರ ಎಂದು ಆಪ್ತ ಸಮಾಲೋಚಕ ಭವಾನಿ ಸಿಂಗ್ ತಿಳಿಸಿದ್ದಾರೆ.