More

    ಕೊನೆಗೂ ಸೆರೆಯಾಯ್ತು ಮಗುವನ್ನು ತಿಂದ ಚಿರತೆ!

    ಮಾಗಡಿ: ಮನೆಯಲ್ಲಿ ಮಲಗಿದ್ದ ಮೂರು ವರ್ಷದ ಮಗುವನ್ನು ಹೊತ್ತೊಯ್ದು ತಲೆ ಮತ್ತು ಎದೆ ಭಾಗ ತಿಂದು ಉಳಿದ ದೇಹವನ್ನು ಪೊದೆಯಲ್ಲಿ ಬಿಸಾಡಿ ಹೋಗಿದ್ದ ಚಿರತೆ ಕೊನೆಗೂ ಅರಣ್ಯಾಧಿಕಾರಿಗಳು ಇಟ್ಟಿದ್ದ ಬೋನಿಗೆ ಬಿದ್ದಿದೆ.

    ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ಕದರಯ್ಯನಪಾಳ್ಯದ ಅಜ್ಜಿ ಮನೆಗೆ ಬಂದಿದ್ದ ಬೆಂಗಳೂರು ದಕ್ಷಿಣ ತಾಲೂಕಿನ ದೊಡ್ಡೇರಿ ಗ್ರಾಮದ ಚಂದ್ರಪ್ಪ ಮತ್ತು ಮಂಗಳಗೌರಿ ಅವರ ಎರಡನೇ ಪುತ್ರ ಹೇಮಂತ್​ನನ್ನು ಮೇ 9ರಂದು ಚಿರತೆ ಹೊತ್ತೊಯ್ದು ಕೊಂದು ಹಾಕಿತ್ತು. ಚಿರತೆ ಕೈಗೆ ಸಿಕ್ಕ ಮಗು ತಲೆ ಮತ್ತು ದೇಹ ಬೇರ್ಪಟ್ಟ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿತ್ತು.

    ಇದನ್ನೂ ಓದಿ ಕರೊನಾ ಗೆದ್ದ 113 ವರ್ಷದ ಅಜ್ಜಿ ..!

    ಸ್ಥಳಕ್ಕೆ ಅರಣ್ಯ ಸಚಿವ ಆನಂದ್​ ಸಿಂಗ್​, ಸಂಸದ ಡಿ.ಕೆ. ಸುರೇಶ್​, ಶಾಸಕ ಎ. ಮಂಜುನಾಥ್​, ಕುಂಚಿಟಿಗ ಮಠದ ಹನುಮಂತನಾಥ ಶ್ರೀಗಳು ಸೇರಿ ಹಲವರು ಭೇಟಿ ನೀಡಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದ್ದರು. ಚಿರತೆ ಸೆರೆಹಿಡಿಯಲು ಕಾರ್ಯಾಚರಣೆ ನಡೆಸುವಂತೆ ಅರಣ್ಯ ಸಚಿವರು ಆದೇಶಿಸಿದ್ದರು. ಅರಣ್ಯಾಧಿಕಾರಿಗಳು ನಾಲ್ಕು ದಿನಗಳಿಂದ ಸುತ್ತಮುತ್ತಲ ಪ್ರದೇಶದಲ್ಲಿ 6 ಬೋನು ಇಟ್ಟು ಕಾಯುತ್ತಿದ್ದರು.

    ಮಗು ಶವ ಪತ್ತೆಯಾದ ಸುಮಾರು 400-500 ಮೀಟರ್​ ದೂರದಲ್ಲಿಟ್ಟಿದ್ದ ಬೋನಿಗೆ ಮಂಗಳವಾರ ತಡರಾತ್ರಿ ಚಿರತೆ ಬಿದಿದ್ದೆ. ಈ ವಿಷಯ ತಿಳಿದ ಸುತ್ತಮುತ್ತಲ ಗ್ರಾಮಸ್ಥರು ನೋಡಲು ಜಮಾಯಿಸಿದ್ದರು.

    ಇದನ್ನೂ ಓದಿ ಟಿವಿಗೇ ಅಕ್ಷತೆ ಹಾಕಿ ಮಗ-ಸೊಸೆಗೆ ಆಶೀರ್ವದಿಸಿದ ತಂದೆ-ತಾಯಿ!

    ಮಗು ಕೊಂದ ಚಿರತೆಯ ಹೆಜ್ಜೆ ಗುರುತಿನ ಆಧಾರದಲ್ಲಿ ಈಗ ಸೆರೆಸಿಕ್ಕ ಚಿರತೆ ಎರಡೂ ಒಂದೇ ಎಂದು ಮೇಲ್ನೋಟಕ್ಕೆ ತಿಳಿದು ಬಂದಿದೆ. ಇನ್ನೊಂದು ಚಿರತೆ ಇರುವ ಬಗ್ಗೆ ಸ್ಥಳೀಯರು ಸಂಶಯ ವ್ಯಕ್ತಪಡಿಸಿದ್ದಾರೆ. ಹಾಗಾಗಿ ಕಾರ್ಯಾಚರಣೆ ಮುಂದುವರಿಸಲಾಗುವುದು. ಬಿ.ನಾರಾಯಣಪುರದ ಬಳಿ ಮತ್ತೊಂದು ಚಿರತೆ ಕಾಣಿಸಿಕೊಂಡಿದ್ದು, ಅಲ್ಲೂ ಬೋನು ಇಡಲಾಗಿದೆ ಎಂದು ವಲಯ ಅರಣ್ಯಾಧಿಕಾರಿ ಕೆ. ಪುಷ್ಪಲತಾ ತಿಳಿಸಿದ್ದಾರೆ.

    ಇದನ್ನೂ ಓದಿ ಮನೆಯಲ್ಲಿ ಮಲಗಿದ್ದ 3 ವರ್ಷದ ಮಗುವನ್ನು ಹೊತ್ತೊಯ್ದು ಕೊಂದು ತಿಂದ ಚಿರತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts