More

    ಆರ್​ಆರ್​ಆರ್​ ಬಿಡುಗಡೆ: ರಾಜಮೌಳಿ ವಿರುದ್ಧ ಬೇಸರ ವ್ಯಕ್ತಪಡಿಸಿದ ಬೋನಿ …

    ಮುಂಬೈ: ಎಸ್ ಎಸ್ ರಾಜಮೌಳಿ ನಿರ್ದೇಶನದ ‘ಆರ್‌ಆರ್‌ಆರ್’ ಚಿತ್ರದ ಬಿಡುಗಡೆಯ ದಿನಾಂಕ ಸೋಮವಾರವಷ್ಟೇ ಹೊರಬಿದ್ದಿದದೆ. ರಾಮ್‌ಚರಣ್ ತೇಜ ಮತ್ತು ಜ್ಯೂನಿಯರ್​ ಎನ್‌ಟಿಆರ್ ಅವರ ಹೊಸ ಪೋಸ್ಟರ್​ ಬಿಡುಗಡೆ ಮಾಡಿರುವ ರಾಜಮೌಳಿ, ಚಿತ್ರವನ್ನು ಅಕ್ಟೋಬರ್​ 13ರಂದು ಬಿಡುಗಡೆ ಮಾಡುವುದಾಗಿ ಘೋಷಿಸಿದ್ದಾರೆ.

    ಆರ್​ಆರ್​ಆರ್​ ಬಿಡುಗಡೆ: ರಾಜಮೌಳಿ ವಿರುದ್ಧ ಬೇಸರ ವ್ಯಕ್ತಪಡಿಸಿದ ಬೋನಿ ...

    ‘ಆರ್​ಆರ್​ಆರ್​’ ಚಿತ್ರದ ಬಿಡುಗಡೆಯ ದಿನಾಂಕ ಘೋಷಣೆಯಾಗುತ್ತಿದ್ದಂತೆಯೇ, ಅಭಿಮಾನಿಗಳು ಖುಷಿಯಾಗಿದ್ದಾರೆ. ಚಿತ್ರದ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ಇನ್ನೊಂದು ಕಡೆ, ರಾಜಮೌಳಿ ನಡೆಯ ವಿರುದ್ಧ ಅಸಮಾಧಾನ ವ್ಯಕ್ತವಾಗಿದೆ. ಬಾಲಿವುಡ್​ನ ಜನಪ್ರಿಯ ನಿರ್ಮಾಪಕ ಬೋನಿ ಕಪೂರ್​, ರಾಜಮೌಳಿ ಮಾಡಿದ್ದು ಸರಿಯಲ್ಲ, ಅದು ಅನೈತಿಕ ಎಂದು ಹೇಳಿದ್ದಾರೆ.

    ಇದನ್ನೂ ಓದಿ: ಕೊನೆಗೂ ಜೈಲಿನಿಂದ ಹೊರಬಂದ ರಾಗಿಣಿಯ ಮೊದಲ ಪ್ರತಿಕ್ರಿಯೆ ಹೀಗಿತ್ತು..!

    ರಾಜಮೌಳಿ ಅವರು ‘ಆರ್​ಆರ್​ಆರ್​’ ಬಿಡುಗಡೆ ದಿನ ಘೋಷಿಸಿದ್ದಿಕ್ಕೆ ಬೋನಿ ಕಪೂರ್​ ಯಾಕೆ ಸಿಟ್ಟಾಗಬೇಕು ಎಂಬ ಪ್ರಶ್ನೆ ಬರುವುದು ಸಹಜ. ಟ್ವಿಸ್ಟ್​ ಇರೋದೇ ಇಲ್ಲ. ವಿಷಯವೇನೆಂದರೆ, ಆರು ತಿಂಗಳ ಹಿಂದೆಯೇ ಬೋನಿ ಕಪೂರ್​ ತಮ್ಮ ನಿರ್ಮಾಣದ ‘ಮೈದಾನ್​’ ಎಂಬ ಚಿತ್ರವನ್ನು ಅಕ್ಟೋಬರ್​ 15ಕ್ಕೆ ಬಿಡುಗಡೆ ಮಾಡುವುದಾಗಿ ಘೋಷಿಸಿದ್ದರು. ಈಗ ಅದಕ್ಕೂ ಎರಡು ದಿನಗಳ ಮುಂಚೆ ರಾಜಮೌಳಿ ತಮ್ಮ ಚಿತ್ರವನ್ನು ಬಿಡುಗಡೆ ಮಾಡುತ್ತಿದ್ದಾರೆ. ಸಮಸ್ಯೆ ಏನೆಂದರೆ, ಎರಡೂ ಚಿತ್ರಗಳಲ್ಲಿ ಅಜಯ್​ ದೇವಗನ್​ ಅಭಿನಯಿಸುತ್ತಿದ್ದಾರೆ.

    ‘ಆರ್​​ಆರ್​ಆರ್​’ ಚಿತ್ರದಲ್ಲಿ ಅಜಯ್​ ದೇವಗನ್​ ಕ್ರಾಂತಿಕಾರಿಯ ಪಾತ್ರ ಮಾಡಿದರೆ, ‘ಮೈದಾನ್​’ ಚಿತ್ರದಲ್ಲಿ ಅಜಯ್​ ದೇವಗನ್​ ಖ್ಯಾತ ಫುಟ್​ಬಾಲ್​ ಆಟಗಾರ ಸಯ್ಯದ್​ ಅಬ್ದುಲ್​ ರಹೀಮ್​ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಹೀಗೆ ಅಜಯ್​ ದೇವಗನ್​ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಎರಡು ಚಿತ್ರಗಳು, ಎರಡು ದಿನಗಳ ಅಂತರದಲ್ಲಿ ಬಿಡುಗಡೆಯಾಗುತ್ತಿದೆ. ಒಬ್ಬ ಸ್ಟಾರ್​ ನಟನ ಎರಡು ದೊಡ್ಡ ಚಿತ್ರಗಳು ಹೀಗೆ ಬಿಡುಗಡೆಯಾದರೆ, ಕಥೆಯೇನು ಎಂಬುದು ಬೋನಿ ಕಪೂರ್​ ಅಳಲು.

    ಇದನ್ನೂ ಓದಿ: ದೇವರಾದ ಪುನೀತ್; ಓ ಮೈ ಕಡುವುಳೇ ಚಿತ್ರದ ರೀಮೇಕ್​ನಲ್ಲಿ ನಟನೆ

    ಮೂಲಗಳ ಪ್ರಕಾರ, ಹೀಗಾಗಬಹುದು ಎಂದು ಅಜಯ್​ಗೆ ಗೊತ್ತಿತ್ತಂತೆ. ಅದೇ ಕಾರಣಕ್ಕೆ ಅವರು ರಾಜಮೌಳಿಗೆ ಚಿತ್ರದ ಬಿಡುಗಡೆ ಘೋಷಣೆ ಮಾಡುವುದಕ್ಕಿಂತ ಮುನ್ನ ಒಮ್ಮೆ ಬೋನಿ ಕಪೂರ್​ ಅವರ ಜತೆಗೆ ಮಾತನಾಡಿ ಎಂದು ಹೇಳಿದ್ದರಂತೆ. ಆದರೆ, ಬೋನಿ ಜತೆಗೆ ಮಾತನಾಡುವುದಕ್ಕಿಂತ ಮುಂಚೆಯೇ ರಾಜಮೌಳಿ, ಚಿತ್ರವನ್ನು ಅಕ್ಟೋಬರ್​ 13ರಂದು ಬಿಡುಗಡೆ ಮಾಡುವುದಾಗಿ ಘೋಷಿಸಿದ್ದಾರೆ. ಇದರಿಂದ ಬೋನಿ ಕಪೂರ್​ ಬಹಳ ಅಪ್​ಸೆಟ್​ ಆಗಿದ್ದಾರಂತೆ.

    ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ‘ನಿಜಕ್ಕೂ ಅಪ್​ಸೆಟ್​ ಆಗಿದ್ದೇನೆ. ಇದು ಅನೈತಿಕ. ನಮ್ಮ ಚಿತ್ರದ ಬಿಡುಗಡೆಯನ್ನು ಆರು ತಿಂಗಳ ಹಿಂದೆಯೇ ಘೋಷಿಸಿದ್ದೆ. ಈಗ ರಾಜಮೌಳಿ ಅದೇ ಸಮಯದಲ್ಲಿ ತಮ್ಮ ಚಿತ್ರ ಬಿಡುಗಡೆ ಮಾಡುವುದಕ್ಕೆ ಮುಂದೆ ಬಂದಿದ್ದಾರೆ. ಲಾಕ್​ಡೌನ್​ನಿಂದ ಚಿತ್ರರಂಗ ತತ್ತರಿಸಿದೆ. ಇಂಥ ಸಮಯದಲ್ಲಿ ನಾವೆಲ್ಲರೂ ಒಟ್ಟಾಗಿ ಚಿತ್ರರಂಗವನ್ನು ಉಳಿಸುವ ಪ್ರಯತ್ನ ಮಾಡಬೇಕು. ಆದರೆ, ರಾಜಮೌಳಿ ನೊಡಿದರೆ ಹೀಗೆ ಮಾಡಿದ್ದಾರೆ’ ಎಂದು ಬೇಸರಿಸಿಕೊಂಡಿದ್ದಾರೆ.

    ‘ಆರ್​ಆರ್​ಆರ್​’ ಚಿತ್ರದಲ್ಲಿ ರಾಮ್​ಚರಣ್​ ತೇಜ, ಜ್ಯೂನಿಯರ್​ ಎನ್​ಟಿಆರ್​, ಆಲಿಯಾ ಭಟ್, ಅಜಯ್ ದೇವಗನ್, ಶ್ರೀಯಾ ಸರಣ್ ಸೇರಿ ಹಲವರು ನಟಿಸಿದ್ದು, ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಚಿತ್ರಕ್ಕೆ ಕಥೆ-ಚಿತ್ರಕಥೆ ಬರೆದಿದ್ದಾರೆ.

    ‘ಮದುವೆ ಆದ್ಮೇಲೆ ಎಲ್ಲರೂ ದಪ್ಪ ಆಗ್ತಾರೆ, ನಾನು ಬಹಳ ಸಣ್ಣಗಾಗಿದ್ದೀನಿ ಅಲ್ವಾ’

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts