More

    ಅಲ್ಲಿ ಕೈ ಹಾಕಬಾರದಿತ್ತು! ಪ್ರಿಯಾಮಣಿ ಜತೆ ಕ್ಯಾಮೆರಾಗೆ ಪೋಸ್, ಬೋನಿ ಕಪೂರ್​ ವಿರುದ್ಧ ಆಕ್ರೋಶ

    ಮುಂಬೈ: ವಿಡಿಯೋವೊಂದು ವೈರಲ್​ ಆದ ಬೆನ್ನಲ್ಲೇ ಭಾರತದ ಖ್ಯಾತ ನಿರ್ಮಾಪಕ ಬೋನಿ ಕಪೂರ್​ ಅವರು ವಿವಾದದ ಸುಳಿಗೆ ಸಿಲುಕಿಕೊಂಡಿದ್ದಾರೆ. ಇತ್ತೀಚೆಗಷ್ಟೇ ಬಿಡುಗಡೆಯಾದ ಅಜಯ್​ ದೇವಗನ್​ ನಟನೆಯ ಮೈದಾನ್​ ಸಿನಿಮಾದ ಸ್ಕ್ರೀನಿಂಗ್​ ಸಮಯದಲ್ಲಿ ಬಹುಭಾಷಾ ನಟಿ ಪ್ರಿಯಾಮಣಿ ಜತೆಯಲ್ಲಿ ನಿಂತು ಕ್ಯಾಮೆರಾಗೆ ಪೋಸ್​ ನೀಡುವಾಗ ಅನುಚಿತವಾಗಿ ವರ್ತಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

    ವಿಡಿಯೋ ವೈರಲ್​ ಆಗುತ್ತಿದ್ದಂತೆ ನೆಟ್ಟಿಗರು ಬೋನಿ ಕಪೂರ್​ ವಿರುದ್ಧ ಕಿಡಿಕಾರುತ್ತಿದ್ದಾರೆ. ಎಲ್ಲೆಲ್ಲೂ ಮುಟ್ಟುವ ಮೂಲಕ ಪ್ರಿಯಾಮಣಿ ಅವರಿಗೆ ಮುಜುಗರ ಉಂಟಾಗುವಂತೆ ವರ್ತಿಸಿದ್ದಾರೆ ಎಂದು ಬೋನಿ ಕಪೂರ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಅಂದಹಾಗೆ ಬೋನಿ ಕಪೂರ್​ ಅವರು ಬಾಲಿವುಡ್​ನ ಖ್ಯಾತ ದಿವಂಗತ ನಟಿ ಶ್ರೀದೇವಿ ಅವರ ಪತಿ. ಅವರ ಮಗಳು ಜಾಹ್ನವಿ ಕಪೂರ್​ ಕೂಡ ಖ್ಯಾತ ನಟಿಯಾಗಿ ಗುರುತಿಸಿಕೊಂಡಿದ್ದಾರೆ.

    ಮುಂಬೈನಲ್ಲಿ ಮೈದಾನ್​ ಸಿನಿಮಾದ ಸ್ಕ್ರೀನಿಂಗ್​ ನಡೆಯುವ ವೇಳೆ ಈ ಘಟನೆ ನಡೆದಿದೆ. ಈ ಸಿನಿಮಾ ನೋಡಲು ಬಾಲಿವುಡ್​ ಸೆಲೆಬ್ರಿಟಿಗಳ ದಂಡೇ ಆಗಮಿಸಿತ್ತು. ಮೈದಾನ್​ ಸಿನಿಮಾದಲ್ಲಿ ಪ್ರಿಯಾಮಣಿ ಅವರು ಮುಖ್ಯವಾದ ಪಾತ್ರವನ್ನು ಮಾಡಿದ್ದಾರೆ. ಸ್ಕ್ರೀನಿಂಗ್​ ವೇಳೆ ಅವರು ಕೂಡ ಉಪಸ್ಥಿತರಿದ್ದರು. ಸಾಂಪ್ರದಾಯಿಕ ಸೀರೆಯಲ್ಲಿ ಪ್ರಿಯಾಮಣಿ ಮಿಂಚಿದರು. ಬೋನಿ ಕಪೂರ್ ಅವರು ಸ್ಕ್ರೀನಿಂಗ್ ಥಿಯೇಟರ್‌ನ ಹೊರಗೆ ಅತಿಥಿಗಳೊಂದಿಗೆ ಸಂವಾದ ನಡೆಸುತ್ತಿದ್ದಾಗ, ಪ್ರಿಯಾಮಣಿ ಜತೆ ಕ್ಯಾಮೆರಾಗೆ ಪೋಸ್​ ನೀಡಿದರು. ಈ ವೇಳೆ ಕಪೂರ್​ ಅವರು ಪ್ರಿಯಾಮಣಿ ಮೇಲೆ ಕೈ ಇಟ್ಟ ಜಾಗ ವಿವಾದಕ್ಕೆ ಕಾರಣವಾಗಿದೆ.

    ಕಪೂರ್​ ಅವರು ತಮ್ಮ ಕೈಯನ್ನು ಪ್ರಿಯಾಮಣಿ ಅವರ ಸೊಂಟದ ಮೇಲೆ ಇಟ್ಟಿದ್ದರು. ಆದರೆ, ಇದು ಸೂಕ್ತವಲ್ಲ ಎಂದು ಅನೇಕರು ಟೀಕಿಸಿದ್ದಾರೆ. ಕೆಲವರು ಕಪೂರ್​ ಅವರನ್ನು ಹಾಲಿವುಡ್ ನಿರ್ಮಾಪಕ ಹಾರ್ವೆ ವೈನ್‌ಸ್ಟೈನ್‌ಗೆ ಹೋಲಿಸಿದರು. ನಿಮ್ಮನ್ನು “ದಿ ಹಾರ್ವೆ ವೈನ್‌ಸ್ಟೈನ್‌ ಆಫ್ ಇಂಡಿಯಾ” ಎಂದು ಕರೆಯಬಹುದೇ ಎಂದು ಕೇಳಿದರು. ಕಪೂರ್‌ಗೆ ಇಬ್ಬರು ಚಿಕ್ಕ ಹೆಣ್ಣುಮಕ್ಕಳಿದ್ದಾರೆ ಎಂಬುದು ನೆನಪಿರಲಿ ಎಂದು ಹಲವರು ಟೀಕಿಸಿದ್ದಾರೆ.

    ಈ ಹಿಂದೆಯೂ ಬೋನಿ ಕಪೂರ್ ಅವರು ಅನುಚಿತ ವರ್ತನೆಯ ಆರೋಪ ಎದುರಿಸಿದ್ದರು. 2023ರಲ್ಲಿ ನೀತಾ ಅಂಬಾನಿ ಕಲ್ಚರಲ್ ಸೆಂಟರ್ (NMACC) ಆರಂಭದ ಕಾರ್ಯಕ್ರಮದಲ್ಲಿ ಮಾಡೆಲ್ ಗಿಗಿ ಹಡಿದ್ ಅವರ ಸೊಂಟದ ಮೇಲೆ ತನ್ನ ಕೈಯನ್ನು ಇಟ್ಟಿದ್ದ ಫೋಟೋ ವೈರಲ್​ ಆಗಿ ಕಪೂರ್​ ಟೀಕೆಗೆ ಗುರಿಯಾಗಿದ್ದರು. ಅಲ್ಲದೆ, ಈ ಹಿಂದೆ ಕಾರ್ಯಕ್ರಮವೊಂದರಲ್ಲಿ ನಟಿ ಊರ್ವಶಿ ರೌಟೇಲಾ ಅವರನ್ನು ಅನುಚಿತವಾಗಿ ಸ್ಪರ್ಶಿಸಿದ ಆರೋಪವೂ ಅವರ ಮೇಲೆ ಕೇಳಿಬಂದಿತ್ತು. (ಏಜೆನ್ಸೀಸ್​)

    IIT, IIM ವಿದ್ಯಾರ್ಥಿಯಲ್ಲದಿದ್ರೂ ಬೆಂಗ್ಳೂರಿನ ಉನ್ನತ ಕಂಪನಿಯಲ್ಲಿ​ ಕೆಲಸ! ಈಕೆಯ ತಿಂಗಳ ಸಂಬಳ ಕೇಳಿದ್ರೆ ಬೆರಗಾಗ್ತೀರಾ

    ಸೂರ್ಯ ಗ್ರಹಣದ ವೇಳೆ ವಿಚಿತ್ರವಾಗಿ ವರ್ತಿಸಿದ ಪ್ರಾಣಿಗಳು! ಏನಿದರ ರಹಸ್ಯ? ಅಚ್ಚರಿಗೀಡಾದ ವಿಜ್ಞಾನಿಗಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts