More

    IIT, IIM ವಿದ್ಯಾರ್ಥಿಯಲ್ಲದಿದ್ರೂ ಬೆಂಗ್ಳೂರಿನ ಉನ್ನತ ಕಂಪನಿಯಲ್ಲಿ​ ಕೆಲಸ! ಈಕೆಯ ತಿಂಗಳ ಸಂಬಳ ಕೇಳಿದ್ರೆ ಬೆರಗಾಗ್ತೀರಾ

    ಹೈದರಾಬಾದ್​: ಜೀವನದಲ್ಲಿ ಉನ್ನತ ಸ್ಥಾನಕ್ಕೆ ಬರಬೇಕಾದರೆ ಗುರಿಯೆಡೆಗೆ ಗಮನ ಮತ್ತು ಸಮರ್ಪಣೆ ಇದ್ದರೆ ಸಾಕು. ಭರವಸೆ ಕಳೆದುಕೊಳ್ಳದೆ ಪರಿಶ್ರಮ ಪಟ್ಟರೆ ಯಶಸ್ಸು ಕಷ್ಟದ ಮಾತಲ್ಲ ಎಂಬುದನ್ನು ಇಂದಿನ ಯುವ ಜನಾಂಗ ಆಗಾಗ ಸಾಬೀತು ಮಾಡುತ್ತಿದ್ದಾರೆ.

    ಕೈತುಂಬಾ ಹಣ ಸಿಗುವ ಉದ್ಯೋಗ ಪಡೆಯಲು ಐಐಟಿ, ಐಐಎಂ, ಎನ್‌ಐಟಿ ಹಾಗೂ ಎನ್‌ಐಟಿಯಂತಹ ಪ್ರಸಿದ್ಧ ಶಿಕ್ಷಣ ಸಂಸ್ಥೆಗಳಲ್ಲಿ ಓದಲು ಹೇಳಲಾಗುತ್ತದೆ. ಪ್ರತಿಷ್ಠಿತ ಸಂಸ್ಥೆಯಲ್ಲಿ ಪದವಿ ಪಡೆದರೆ ಹೆಚ್ಚಿನ ಸಂಬಳದ ಉದ್ಯೋಗ ಪಡೆಯಬಹುದು ಎನ್ನುತ್ತಾರೆ. ಆದರೆ ಇಂತಹ ಸಂಸ್ಥೆಗಳಲ್ಲಿ ಓದದಿದ್ದರೂ ಸಮರ್ಪಣಾ ಮನೋಭಾವ ಒಂದಿದ್ದರೆ ಒಳ್ಳೆಯ ಪ್ಯಾಕೇಜ್​ ಇರುವ ಕೆಲಸವನ್ನು ಗಿಟ್ಟಿಸಬಹುದು ಎಂಬುದನ್ನು ಅನೇಕ ವಿದ್ಯಾರ್ಥಿಗಳು ಈಗಾಗಲೇ ಸಾಬೀತು ಮಾಡಿದ್ದಾರೆ. ಅದೇ ರೀತಿ ಇದೀಗ ಯುಕ್ತಾ ಗೋಪಾಲನಿ ಎಂಬ ವಿದ್ಯಾರ್ಥಿನಿ 82.5 ಲಕ್ಷ ಪ್ಯಾಕೇಜ್‌ನೊಂದಿಗೆ ಸಾಫ್ಟ್‌ವೇರ್ ಕಂಪನಿಯಲ್ಲಿ ಉದ್ಯೋಗ ಪಡೆದು ಯುವಜನತೆಗೆ ಮಾದರಿಯಾಗಿ ನಿಂತಿದ್ದಾಳೆ.

    ಇತ್ತೀಚಿನ ದಿನಗಳಲ್ಲಿ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸುತ್ತಿದ್ದಂತೆ ಕ್ಯಾಂಪಸ್ ಸೆಲೆಕ್ಷನ್​ ಮೂಲಕ ಕೋಟ್ಯಾಂತರ ರೂಪಾಯಿ ಪ್ಯಾಕೇಜ್‌ ಇರುವ ಉದ್ಯೋಗ ಗಿಟ್ಟಿಸಿಕೊಂಡಿರುವ ಅನೇಕ ವಿದ್ಯಾರ್ಥಿಗಳಿದ್ದಾರೆ. ಸಾಮಾನ್ಯ ಶಿಕ್ಷಣ ಸಂಸ್ಥೆಗಳಲ್ಲಿ ಅಧ್ಯಯನ ಮಾಡಿಯೂ ಉತ್ತಮ ಸಾಧನೆ ಮಾಡುವ ಮೂಲಕ ಅಸಾಧಾರಣ ಪ್ರತಿಭೆಯನ್ನು ತೋರಿಸಿದ್ದಾರೆ. ಯುಕ್ತಾ ಗೋಪಾಲನಿ ಕೂಡ ಸಾಮಾನ್ಯ ಸಂಸ್ಥೆಯಲ್ಲಿ ವ್ಯಾಸಂಗ ಮಾಡಿ 82.5 ಲಕ್ಷಗಳ ಪ್ಯಾಕೇಜ್‌ನೊಂದಿಗೆ ಒಳ್ಳೆಯ ಉದ್ಯೋಗ ಗಿಟ್ಟಿಸಿದ್ದಾರೆ. ನಿಮ್ಮ ಪದವಿಯನ್ನು ಎಲ್ಲಿ ಪೂರ್ಣಗೊಳಿಸುತ್ತೀರಿ ಎಂಬುದು ಮುಖ್ಯವಲ್ಲ ಎಂಬುದನ್ನು ನಿರೂಪಿಸಿದ್ದಾರೆ.

    ಯುಕ್ತಾ ಗೋಪಾಲನಿ ಅವರು ಅಲಹಾಬಾದ್‌ನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಇನ್ಫರ್ಮೇಷನ್ ಟೆಕ್ನಾಲಜಿಯಲ್ಲಿ ತಮ್ಮ ಬಿ.ಟೆಕ್ ಅನ್ನು ಪೂರ್ಣಗೊಳಿಸಿದ್ದಾರೆ. ಇದರ ಬೆನ್ನಲ್ಲೇ ಸಾಫ್ಟ್​ವೇರ್ ಕಂಪನಿ ಅಟ್ಲಾಸಿಯನ್​ನಿಂದ ವಾರ್ಷಿಕ 82.5 ಲಕ್ಷ ರೂ. ಸಂಬಳದ ಉದ್ಯೋಗವನ್ನು ಪಡೆದು ಮಾದರಿಯಾಗಿದ್ದಾರೆ. ತಮ್ಮ ವಿಶೇಷ ಸಾಧನೆಯಿಂದಾಗಿ ಯುಕ್ತಾ ಇದೀಗ ಸುದ್ದಿಯಲ್ಲಿದ್ದಾರೆ. ಆಕೆಗೆ ದೇಶದೆಲ್ಲೆಡೆ ಪ್ರಶಂಸೆಗಳ ಸುರಿಮಳೆಯಾಗುತ್ತಿದೆ. ಯುಕ್ತಾ ಪ್ರಸ್ತುತ ಕರ್ನಾಟಕದ ಬೆಂಗಳೂರಿನ ಅಟ್ಲಾಸಿಯನ್‌ನಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ. ಸಾಮಾನ್ಯ ಶಿಕ್ಷಣ ಸಂಸ್ಥೆಗಳಲ್ಲಿ ಓದಿದರೂ ಕೌಶಲ ವೃದ್ಧಿಸಿಕೊಳ್ಳಬಹುದು ಎಂಬುದಕ್ಕೆ ಯುಕ್ತಾ ಸಾಧನೆಯೇ ಸಾಕ್ಷಿಯಾಗಿದೆ. (ಏಜೆನ್ಸೀಸ್​)

    ಜೂ. ಎನ್​ಟಿಆರ್​ ವಾಚ್​ ಬೆಲೆ ಕೇಳಿ ದಂಗಾದ್ರೂ ಫ್ಯಾನ್ಸ್​! ಇದನ್ನು ಮಾರಿದ್ರೆ ಐದಾರು ಮಂದಿಯ ಲೈಫ್​ ಸೆಟ್ಲ್

    ಓವೈಸಿ ಭದ್ರಕೋಟೆಗೆ ನುಗ್ಗಿ ಸವಾಲು ಹಾಕಿದ ಲೇಡಿ ಟೈಗರ್​! ಮೋದಿ ಮೆಚ್ಚಿದ ಮಾಧವಿ ಲತಾ ಯಾರು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts