More

    ಹಾವು ಕಚ್ಚಿದರೂ ದ್ವಿತೀಯ ಪಿಯುಸಿ ಪರೀಕ್ಷೆ ಬರೆಯಲು ಹಾಜರಾದ ವಿದ್ಯಾರ್ಥಿನಿ! ಮುಂದೇನಾಯ್ತು?

    ಭುವನೇಶ್ವರ: ಹಾವು ಕಡಿತಕ್ಕೆ ಒಳಗಾಗಿದ್ದರೂ ದ್ವಿತೀಯ ಪಿಯು ಪರೀಕ್ಷೆ ಎದುರಿಸಿದ ವಿದ್ಯಾರ್ಥಿನಿಯೊಬ್ಬಳು ಪರೀಕ್ಷೆಯ ನಡುವೆಯೇ ಅಸ್ವಸ್ಥಗೊಂಡ ಘಟನೆ ಒಡಿಶಾದ ಕಿಯೊಂಜರ್​ ಜಿಲ್ಲೆಯಲ್ಲಿ ಕಳೆದ ಶನಿವಾರ ನಡೆದಿದೆ.

    ವಿದ್ಯಾರ್ಥಿನಿಯನ್ನು ಲಿಪ್ಸಾ ರಾಣಿ ಸಾಹೋ ಎಂದು ಗುರುತಿಸಲಾಗಿದೆ. ಈಕೆ ದಾಧಿಬಾಬನ್ಪುರ್​ ಗ್ರಾಮದ ನಿವಾಸಿ. ದ್ವಿತೀಯ ಪಿಯುಸಿಯ ವಾರ್ಷಿಕ ಪರೀಕ್ಷೆಯನ್ನು ಎದುರಿಸಲು ಆನಂದಪುರ್​ ಕಾಲೇಜಿಗೆ ತೆರಳುವಾಗ ಹಾವು ಕಡಿದಿದೆ. ಆದಾಗ್ಯೂ ಲಿಪ್ಸಾ ಕಾಲೇಜಿಗೆ ತೆರಳಿ ಪರೀಕ್ಷೆ ಬರೆಯುತ್ತಿರುವ ನಡುವೆಯೇ ಆಕೆಯ ಆರೋಗ್ಯದಲ್ಲಿ ಏರುಪೇರಾಗಿದೆ.

    ಇದನ್ನೂ ಓದಿ: ನ್ಯಾಯದೇವತೆ: ಹೆಂಡತಿಯ ಸ್ವಯಾರ್ಜಿತ ಆಸ್ತಿಯಲ್ಲಿ ಆಕೆ ಬದುಕಿರುವಾಗ ಗಂಡನಿಗೆ ಹಕ್ಕು ಇರುತ್ತದೆಯೇ?

    ಸುಸ್ತಾಗುತ್ತಿದೆ ಎಂದು ಲಿಪ್ಸಾ ಹೇಳಿಕೊಂಡಾಗ ಆಕೆಯನ್ನು ತಕ್ಷಣ ಆನಂದಪುರದ ಉಪ ವಿಭಾಗೀಯ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗಿದೆ.

    ಲಿಪ್ಸಾ ಪರೀಕ್ಷೆಗೆ ಹಾಜರಾಗಲು ಮನೆಯಿಂದ ಹೊರಡುವ ಮುನ್ನ ಹಿತ್ತಲಿಗೆ ಹೋಗಿದ್ದಳು. ಈ ವೇಳೆ ಆಕೆಗೆ ಕಪ್ಪು ಬಣ್ಣದ ಹಾವು ಕಡಿದಿತ್ತು. ಆದಾಗ್ಯೂ, ಆಕೆ ಪರೀಕ್ಷೆಗೆ ಬಂದಿದ್ದಳು. ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ಲಿಪ್ಸಾಳ ಸಂಬಂಧಿಕರೊಬ್ಬರು ಸ್ಥಳೀಯ ಮಾಧ್ಯಮಕ್ಕೆ ತಿಳಿಸಿದ್ದಾರೆ. (ಏಜೆನ್ಸೀಸ್​)

    ವಿದ್ಯಾರ್ಥಿನಿಯರ ಮೈ-ಕೈ ಮುಟ್ಟಿ ಅನುಚಿತ ವರ್ತನೆ: ತುಮಕೂರಲ್ಲಿ ಕಾಮುಕ ಶಿಕ್ಷಕನ ಬಂಧನ

    ಮಾಡಾಳ್​ ವಿರೂಪಾಕ್ಷಪ್ಪಗೆ ಲೋಕಾಯುಕ್ತ ಅಧಿಕಾರಿಗಳ ಡ್ರಿಲ್! ಉತ್ತರಿಸಲು ತಡಬಡಾಯಿಸುತ್ತಿರುವ ಶಾಸಕ

    ಪ್ರಕೃತಿ ಮಾತೆಗೆ ಬಂಗಾರದ ಕೊಡುಗೆ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts