More

    ‘ಬಾಂಡ್ ರವಿ’ ದೊಡ್ಡ ಬ್ರಾಂಡ್​ ಆಗೋದು ನಿಜ … ಪ್ರಮೋದ್​ ಭವಿಷ್ಯ

    ಬೆಂಗಳೂರು: ‘ರತ್ನನ್ ಪ್ರಪಂಚ’ ನಂತರ ಪ್ರಮೋದ್​ ಅಭಿನಯದ ಯಾವೊಂದು ಚಿತ್ರ ಸಹ ಇದುವರೆಗೂ ಬಿಡುಗಡೆಯಾಗಿಲ್ಲ. ಈಗ ಪ್ರಮೋದ್​, ಪುನೀತ್​ ಅಭಿಮಾನಿಯಾಗಿ ನಟಿಸಿರುವ ‘ಬಾಂಡ್​ ರವಿ’ ಚಿತ್ರವು ಡಿ.9ಕ್ಕೆ ಬಿಡುಗಡೆಯಾಗುತ್ತಿದ್ದು, ಮೊದಲ ಹಂತವಾಗಿ ಚಿತ್ರದ ಟ್ರೈಲರ್​ ಬಿಡುಗಡೆಯಾಗಿದೆ.

    ಇದನ್ನೂ ಓದಿ: ವರಾಹ ರೂಪಂ‌’ ಈಸ್​ ಬ್ಯಾಕ್​; ಇಂದಿನಿಂದ ಚಿತ್ರಮಂದಿರ, ಓಟಿಟಿ ಸೇರಿದಂತೆ ಎಲ್ಲೆಡೆ ಹಾಡು ಲಭ್ಯ

    ”ಬಾಂಡ್ ರವಿ’ ದೊಡ್ಡ ಬ್ರ್ಯಾಂಡ್ ಆಗಿ ಎಲ್ಲರ ಮನಸ್ಸಲ್ಲೂ ಹತ್ತಾರು ವರ್ಷ ಉಳಿದುಕೊಳ್ಳುತ್ತಾನೆ’ ಎಂದು ಭವಿಷ್ಯ ನುಡಿಯುತ್ತಾರೆ ಪ್ರಮೋದ್​. ಅವರು ಅಷ್ಟೊಂದು ಆತ್ಮವಿಶ್ವಾಸದಿಂದ ಹೇಳುವುದಕ್ಕೂ ಕಾರಣವಿದೆಯಂತೆ. ‘ನಾನು ‘ರತ್ನನ್ ಪ್ರಪಂಚ’ ಚಿತ್ರದ ನಂತರ ಒಂದೊಳ್ಳೆಯ ಕಥೆಗಾಗಿ ಹುಡುಕಾಟ ಮಾಡುತ್ತಿದ್ದೆ. ಮಾಸ್​ ಸಿನಿಮಾ ಮಾಡುವ ಆಸೆ ಇತ್ತು. ಆದರೆ, ಸುಮ್ಮನೆ ಮಾಸ್​ ಸಿನಿಮಾ ಮಾಡುವುದಕ್ಕೆ, ಮಾಸ್​ ಡೈಲಾಗ್​ ಹೇಳೋಕೆ ಆಗಲ್ಲ. ಅದಕ್ಕೊಂದು ಒಳ್ಳೆಯ ಕಥೆ ಬೇಕು. ಒಳ್ಳೆಯ ಕಥೆಯ ಹುಡುಕಾಟದಲ್ಲಿದ್ದಾಗಲೇ ಸಿಕ್ಕಿದ್ದು ‘ಬಾಂಡ್ ರವಿ’. ಕಥೆ ಕೇಳಿದಾಗಿಂದ ಬಾಂಡ್ ರವಿ ಪಾತ್ರ ನನ್ನನ್ನು ಕಾಡಿತ್ತು. ಅಷ್ಟು ಇಷ್ಟವಾಗಿತ್ತು ಕಥೆ. ಈ ಸಿನಿಮಾ ನನ್ನ ಲೈಫ್ ಟೈಂ ಮೆಮೋರಿ ಆಗಿ ಉಳಿಯಲಿದೆ’ ಎನ್ನುತ್ತಾರೆ ಪ್ರಮೋದ್​.

    ಈ ಚಿತ್ರದಲ್ಲಿ ಅವರಿಗೆ ನಾಯಕಿಯಾಗಿ ಕಾಜಲ್​ ಕುಂದರ್​ ನಟಿಸಿದ್ದಾರೆ. ಚಿತ್ರದ ಬಗ್ಗೆ ಮಾತನಾಡುವ ಅವರು, ‘ಈ ವರ್ಷದ ಮಾರ್ಚ್​ನಲ್ಲಿ ನಿರ್ದೇಶಕ ಪ್ರಜ್ವಲ್​ ಅವರನ್ನು ಭೇಟಿ ಮಾಡಿದೆ. ಅವರು ಕಥೆ ಹೇಳುವಾಗ ಅವರಲ್ಲಿ ಅದೆಷ್ಟು ಎಕ್ಸ್ಟೈಟ್​ಮೆಂಟ್​ ಇತ್ತೋ, ಈಗಲೂ ಅಷ್ಟೇ ಇದೆ. ಈ ಸಿನಿಮಾದಲ್ಲಿ ಮಾಸ್, ಕ್ಲಾಸ್ ಎರಡೂ ಅಂಶಗಳಿವೆ. ಚಿತ್ರಮಂದಿರದ ಒಳಗೆ ಹೋದ್ರೆ ಒಂದು ಸೆಕೆಂಡ್ ಕೂಡ ಬೋರ್ ಆಗೋದಿಲ್ಲ. ಅಷ್ಟು ಚೆನ್ನಾಗಿ ಸಿನಿಮಾ ಚಿತ್ರಕಥೆ ಹೆಣೆದಿದ್ದಾರೆ’ ಎಂದು ನಿರ್ದೇಶಕರನ್ನು ಹೊಗಳುತ್ತಾರೆ ಕಾಜಲ್​.

    ಇದನ್ನೂ ಓದಿ: ನಟ-ನಿರ್ದೇಶಕ ರಿಷಬ್‌ ಶೆಟ್ಟಿಗೆ ಪ್ರತಿಷ್ಠಿತ ರಾಷ್ಟ್ರೀಯ ಸಿದ್ಧಶ್ರೀ ಪ್ರಶಸ್ತಿ ಪ್ರದಾನ

    ‘ಬಾಂಡ್​ ರವಿ’ ಚಿತ್ರವನ್ನು ನಿರ್ದೇಶನ ಮಾಡಿರುವವರು ಪ್ರಜ್ವಲ್​. ಕಥೆ, ಚಿತ್ರಕಥೆ ಸಹ ಅವರದ್ದೇ. ಇನ್ನು, ವಿ. ನರಸಿಂಹಮೂರ್ತಿ ಈ ಚಿತ್ರವನ್ನು ಲೈಫ್ ಲೈನ್ ಫಿಲಂ ಬ್ಯಾನರ್ ನಡಿ ನಿರ್ಮಿಸಿದ್ದರೆ. ಚಿತ್ರದಲ್ಲಿ ಪ್ರಮೋದ್​ ಮತ್ತು ಕಾಜಲ್​ ಜತೆಗೆ ರವಿ ಕಾಳೆ, ಧರ್ಮ, ವಿಜಯ್ ಚೆಂಡೂರ್, ಶೋಭರಾಜ್ ಮುಂತಾದವರು ನಟಿಸಿದ್ದಾರೆ. ಕೆ.ಎಸ್. ಚಂದ್ರಶೇಖರ್ ಛಾಯಾಗ್ರಹಣ ಮತ್ತು ಮನೋಮೂರ್ತಿ ಸಂಗೀತ ಈ ಚಿತ್ರಕ್ಕಿದೆ.

    ವಸಿಷ್ಠ ಸಿಂಹ-ಹರಿಪ್ರಿಯಾ ನಿಶ್ಚಿತಾರ್ಥದ ಫೋಟೋಗಳು ಬಹಿರಂಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts