More

    ಗ್ಯಾರೆಂಟಿಗಾಗಿ ಅಲೆದು ಗೃಹಲಕ್ಷ್ಮೀಯರ ಚಪ್ಪಲಿ ಸವೆಯುತ್ತಿವೆ: ಬಸವರಾಜ ಬೊಮ್ಮಾಯಿ

    ಗದಗ: ರಾಜ್ಯ ಸರ್ಕಾರದ ಖಜಾನೆ ಸಂಪೂರ್ಣ ಖಾಲಿ ಆಗಿದೆ. ಒಂದು ನಯಾ ಪೈಸೆ ಈ ಸರ್ಕಾರ ಅಭಿವೃದ್ಧಿ ಮಾಡಿಲ್ಲ. ಇದೊಂದು ದರಿದ್ರ ಸರ್ಕಾರ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಗದಗ ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
    ಅವರು ಇಂದು ಗದಗ ವಿಧಾನಸಭಾ ಕ್ಷೇತ್ರದ ಕುರ್ತಕೋಟಿ, ಹರ್ತಿ, ಕಣವಿ, ಹೊಸೂರು ಹಾಗೂ ಸೊರಟೂರು ಗ್ರಾಮಗಳಲ್ಲಿ ಮತಯಾಚನೆ ಮಾಡಿ ಮಾತನಾಡಿದರು. ಗ್ರಾಮಪಂಚಾಯಿತಿಗೆ ರಸ್ತೆ, ದ್ವೀಪ ಹಾಕಿಸಿಕೊಡದಂತಹ ದುಃಸ್ಥಿತಿ ಈ ಸರ್ಕಾರದ್ದಾಗಿದೆ ಎಂದು ನಾವು ಹೇಳುತ್ತಿಲ್ಲ. ಕಾಂಗ್ರೆಸಿನ ಶಾಸಕರೇ ಹೇಳುತ್ತಿದ್ದಾರೆ. ಬರಗಾಲ ಬಂದಿದೆ. ಒಂದು ಬೆಳೆಯೂ ಬಂದಿಲ್ಲ. ರೈತರಿಗೆ ಬರ ಪರಿಹಾರ ನೀಡದೇ ಕೇಂದ್ರ ಸರ್ಕಾರದ ಕಡೆ ಬೆರಳು ಮಾಡಿ ತೋರಿಸುತ್ತಿದ್ದಾರೆ. ಇದೊಂದು ದರಿದ್ರ ಸರ್ಕಾರ.ಇಂತಹ ದರಿದ್ರ ಸರ್ಕಾರವನ್ನು ಹಿಂದೆಂದೂ ನಾನು ನೋಡಿಲ್ಲ ಎಂದರು.
    ಈ ದೇಶದ ಚುನಾವಣೆ ನಡೆಯುವಂತಹ ಸಂದರ್ಭದಲ್ಲಿ ಯಾರು ಆಡಳಿತ ಪಕ್ಷದ ಚುಕ್ಕಾಣಿ ಹಿಡಿಯುತ್ತಾರೆ ಎನ್ನುವುದು ಮುಖ್ಯ. ಇದು ರಾಜ್ಯದ ಅಲ್ಲ. ಚುನಾವಣೆ ದೇಶದ ಚುನಾವಣೆಯಾಗಿದೆ. ಈ ಚುನಾವಣೆ ಫಲಿತಾಂಶ ರಾಜ್ಯ ಮೇಲೂ ಆಗುತ್ತದೆ. ದೇಶ ಸುಭದ್ರವಾಗಿದ್ದರೆ, ರಾಜ್ಯ ಸುಭದ್ರವಾಗಿರುತ್ತದೆ. ರಾಜ್ಯ ಸುಭದ್ರವಾಗಿದ್ದರೆ ನಮ್ಮ ಹಳ್ಳಿ ಸುಭದ್ರವಾಗಿರುತ್ತವೆ. ಇಡೀ ದೇಶದಲ್ಲಿ ವಿಶ್ವದಲ್ಲಿ ಪ್ರಖ್ಯಾತ ಆಗಿರುವಂತಹ ನಾಯಕರು ಅಂದರೆ, ಅದು ನರೇಂದ್ರ ಮೋದಿಯವರು. ಭಯೋತ್ಪಾದನೆ ಮುಕ್ತ ಭಾರತವನ್ನು ಮೋದಿ ಮಾಡಿದ್ದಾರೆ ಎಂದರು.
    ರಾಹುಲ್‌ ಗಾಂಧಿ ನಮ್ಮ ಪ್ರಧಾನಮಂತ್ರಿ ಅಭ್ಯರ್ಥಿ ಎಂದು, ಕೆಲವರು ಹೇಳಿದರೆ, ಇನ್ನು ಕೆಲವರು ಮಲ್ಲಿಕಾರ್ಜುನ ಖರ್ಗೆ ಎನ್ನುತ್ತಾರೆ. ಇವರಿಗೆ ಸರಿಯಾದ ಅಭ್ಯರ್ಥಿ ಯಾರಾಗಬೇಕೆಂಬ ನಿರ್ಣಯವೇ ಕಾಂಗ್ರೆಸಿನಲ್ಲಿ ಇಲ್ಲ. ಗ್ಯಾರೆಂಟಿಗಳೆಲ್ಲಾ ನಶಿಸಿಹೋಗಿವೆ. ಗ್ಯಾರಂಟಿಗಾಗಿ ಅಲೆದು ಅಲೆದು ಜನ ಸಾಕಾಗಿದ್ದಾರೆ. ಗ್ಯಾರೆಂಟಿಗೆ ಅಲೆದು ಗೃಹಲಕ್ಷ್ಮೀಯರ ಚಪ್ಪಲಿ ಸವೆಯುತ್ತಿವೆ. ಬರಗೆಟ್ಟ ಗ್ಯಾರೆಂಟಿ ಇದು. ಸಿಎಂ ಸಿದ್ದರಾಮಯ್ಯ ಹತ್ತು ಕೆ.ಜಿ ಅಕ್ಕಿ ಕೊಡುತ್ತೇನೆ ಎಂದಿದ್ದರು ಒಂದು ಕಾಳು ಅಕ್ಕಿಕೂಡ ಕೊಡಲು ಸಾಧ್ಯವಾಗಲಿಲ್ಲ. ಈಗ ಕೊಡುತ್ತಿರುವ ಐದು ಕೆಜಿ ಅಕ್ಕಿಯೂ ಕೇಂದ್ರದ ನರೇಂದ್ರ ಮೋದಿಯವರು ಕೊಡುತ್ತಿದ್ದಾರೆ ಎಂದರು.
    ಪ್ರಚಾರ ಸಂದರ್ಭದಲ್ಲಿ ಮಾಜಿ ಸಚಿವ ಸಿ.ಸಿ. ಪಾಟೀಲ್ ಹಾಜರಿದ್ದರು.

    ಡೊಳ್ಳು ಬಾರಿಸಿದ ಬೊಮ್ಮಾಯಿ
    ಇಂದು ಗದಗನ ಕುರ್ತಕೋಟಿಯಲ್ಲಿ ಚುನಾವಣಾ ಪ್ರಚಾರ ಕಾರ್ಯ ಆರಂಭಿಸಿದ ಬಸವರಾಜ ಬೊಮ್ಮಾಯಿಯವರು ಮೆರವಣಿಗೆಯಲ್ಲಿ ಜಾನಪದ ಕಲಾವಿದರೊಂದಿಗೆ ಡೊಳ್ಳು ಬಾರಿಸಿ ಸಂಭ್ರಮ ಪಟ್ಟರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts