More

    ಮುಂಬೈನಲ್ಲಿ ಭಾರೀ ಮಳೆ: ಸುಶಾಂತ್​ ಪ್ರಕರಣದ ವಿಚಾರಣೆ ಮುಂದೂಡಿದ ಬಾಂಬೆ ಹೈಕೋರ್ಟ್​!

    ಸುಶಾಂತ್​ ಸಿಂಗ್​ ರಜಪೂತ್​ ಪ್ರಕರಣವನ್ನು ಸಿಬಿಐಗೆ ನೀಡುವಂತೆ ಕೋರಿ ಕಳೆದ ತಿಂಗಳು ಸುಪ್ರೀಂ ಕೋರ್ಟ್​ಗೆ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಜಾಗೊಂಡಿತ್ತು. ಅದಾದ ಬಳಿಕ ಇತ್ತೀಚೆಗಷ್ಟೇ ಪ್ರಕರಣದ ಗಂಭೀರತೆ ಅರಿತು ಸಿಬಿಐಗೆ ನೀಡಬೇಕೆಂದು ಮುಂಬೈ ಹೈಕೋರ್ಟ್​​ನಲ್ಲೂ ಪಿಐಎಲ್​ ಅರ್ಜಿ ದಾಖಲಾಗಿತ್ತು. ಇದೀಗ ಆ ಅರ್ಜಿಯ ವಿಚಾರಣೆಗೆ ಮಳೆ ಅಡ್ಡಿಯುಂಟು ಮಾಡಿದೆ.

    ಇದನ್ನೂ ಓದಿ: ಸುಶಾಂತ್​ ಸಿಂಗ್​ ಕೇಸ್​ ಸಿಬಿಐಗೆ: ಬಿಹಾರ ಸಿಎಂ ನಿತೀಶ್​ ಕುಮಾರ್ ಕಡೆಯಿಂದ ಶಿಫಾರಸು

    ಸದ್ಯ ಮುಂಬೈ ಸೇರಿ ಹಲವೆಡೆ ಭಾರೀ ಮಳೆ ಸುರಿಯುತ್ತಿದ್ದು, ನಗರದೆಲ್ಲೆಡೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಎಲ್ಲ ಅಂದುಕೊಂಡಂತೆ ಆಗಿದ್ದರೆ ಆ. 4ರಂದು ಸುಶಾಂತ್​ ಆತ್ಮಹತ್ಯೆ ಪ್ರಕರಣವನ್ನು ಸಿಬಿಐಗೆ ನೀಡಬೇಕೆಂದು ದಾಖಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಯಬೇಕಿತ್ತು. ಇದೀಗ ಅದಕ್ಕೆ ಕೊಕ್ಕೆ ಬಿದ್ದಿದೆ.
    ಮುಂಬೈ ನಗರದಾದ್ಯಂತ ಪ್ರವಾಹ ಭೀತಿ ಎದುರಾಗಿದ್ದು, ಈಗಾಗಲೇ ತಗ್ಗು ಪ್ರದೇಶಗಳಲ್ಲಿನ ಜನಜೀವನ ಅಸ್ಥವ್ಯಸ್ಥಗೊಂಡಿದೆ. ನಗರದಲ್ಲಿ ಸಂಚರಿಸುವ ರೈಲು ಸೇವೆಯನ್ನೂ ಸ್ಥಗಿತಗೊಳಿಸಲಾಗಿದೆ. ಹಾಗಾಗಿ ಸದ್ಯದ ಪ್ರಕಾರ ವಿಚಾರಣೆ ಯಾವಾಗ ನಡೆಯಲಿದೆ ಎಂಬ ಬಗ್ಗೆ ನಿಖರ ಮಾಹಿತಿ ಲಭ್ಯವಿಲ್ಲ.

    ಅಂದಹಾಗೆ, ಸುಪ್ರೀಂ ಕೋರ್ಟ್​ನಲ್ಲಿ ಅರ್ಜಿ ತಿರಸ್ಕ್ರತವಾದ ಬೆನ್ನಲ್ಲೇ, ಮುಂಬೈ ಕೋರ್ಟ್​ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆ ಮಾಡಿ, ಅವರಿಂದ ಯಾವ ಪ್ರತಿಕ್ರಿಯೆ ಬರುತ್ತದೆ ಎಂಬುದನ್ನು ನೋಡಿಕೊಂಡು ಮುಂದಿನ ನಿರ್ಧಾರಕ್ಕೆ ಬರಲಿದ್ದೇವೆ ಎಂದು ಸುಪ್ರೀಂನ ತ್ರಿವಳಿ ಸದಸ್ಯರ ಪೀಠ ತಿಳಿಸಿತ್ತು.

    ಇದನ್ನೂ ಓದಿ: ರಾಧಿಕಾ ಪಂಡಿತ್​ ಕೊಟ್ಟ ಸರ್​ಪ್ರೈಸ್​ ಇದು!

    ಇತ್ತ ಈಗಾಗಲೇ ಸುಶಾಂತ್​ ಆತ್ಮಹತ್ಯೆ ಪ್ರಕರಣವನ್ನು ಸಿಬಿಐಗೆ ನೀಡಬೇಕು ಎಂದು ತಂದೆ ಕೆಕೆ ಸಿಂಗ್​ ಪಾಟ್ನಾದ ರಾಜೀವ್​ ನಗರದ ಪೊಲೀಸ್​ ಠಾಣೆಯಲ್ಲಿ ರಿಯಾ ವಿರುದ್ಧದ ದೂರಿನಲ್ಲಿ ನಮೂದಿಸಿದ್ದರು. ಇದಾದ ಬಳಿಕ ಬಿಹಾರ ಪೊಲೀಸ್​ ತಂಡ ತನಿಖೆ ಚುರುಕುಗೊಳಿಸಿತ್ತು. ರಿಯಾ ಮತ್ತು ಸಾವಿನ ವಿಚಾರಣೆಗೆ ಮುಂಬೈಗೆ ಬಂದಿತ್ತು. ಆದರೆ, ಬಿಹಾರ ಪೊಲೀಸ್​ಗೆ ಮುಂಬೈ ಪೊಲೀಸರಿಂದ ಸಹಕಾರ ಸಿಕ್ಕಿರಲಿಲ್ಲ. ಇದೆಲ್ಲವನ್ನು ಗಮನಿಸಿ ಬಿಹಾರ ಮುಖ್ಯಮಂತ್ರಿ ನಿತೀಶ್​ ಕುಮಾರ್ ಪ್ರಕರಣದ ತನಿಖೆಯನ್ನು ಸಿಬಿಐಗೆ ನೀಡಲು ಶಿಫಾರಸು ಮಾಡಿದ್ದಾರೆ. (ಏಜೆನ್ಸೀಸ್​)

    ಇಂದು ಸಂಜೆ ಲೈವ್​ ಬರ್ತಿದ್ದಾರೆ ಪುನೀತ್​ ರಾಜಕುಮಾರ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts