More

    ಸಿನಿಮಾದಲ್ಲಿ ಹೂಡಿಕೆ ಮಾಡಿ, ವಾರಕ್ಕೊಮ್ಮೆ ಶೇಕಡ 70ಕ್ಕೂ ಹೆಚ್ಚು ಆದಾಯಗಳಿಸಿ ಎನ್ನುತ್ತಿದ್ದ ಪತಿ, ಪತ್ನಿ!

    ನವದೆಹಲಿ: ಹೂಡಿಕೆಗೆ ಹೆಚ್ಚಿನ ಲಾಭ ತಂದುಕೊಡುತ್ತೇನೆಂದು ಕೋಟ್ಯಂತರ ರೂ. ವಂಚಿಸಿದ ಬಾಲಿವುಡ್ ನಿರ್ಮಾಪಕ ಈಗ ಪೊಲೀಸರ ಅತಿಥಿಯಾಗಿದ್ದಾನೆ.

    ಮನರಂಜನಾ ಉದ್ಯಮದಲ್ಲಿ ಹೂಡಿಕೆಗೆ ಹೆಚ್ಚಿನ ಆದಾಯದ ತಂದುಕೊಡುವುದಾಗಿ ಆಮಿಷವೊಡ್ಡಿ ನೂರಾರು ಜನರನ್ನು ವಂಚಿಸಿದ ಆರೋಪದ ಮೇಲೆ ಬಾಲಿವುಡ್ ಚಲನಚಿತ್ರ ನಿರ್ಮಾಪಕನೋರ್ವನನ್ನು ದೆಹಲಿ ಪೊಲೀಸ್ ಸಂಸ್ಥೆಯ ಆರ್ಥಿಕ ಅಪರಾಧ ವಿಭಾಗದ ಪೊಲೀಸರು (ಇಒಡಬ್ಲ್ಯೂ) ಬಂಧಿಸಿದ್ದಾರೆ.
    ಚಂದ್ರಕಾಂತ್ ಶರ್ಮಾ ಆರೋಪಿ. ಆತ ಸಿನೆಮಿರ್ಚಿ ಪ್ರೊಡಕ್ಷನ್ಸ್ ಅಡಿ ಯೋಜನೆಗಳಲ್ಲಿ ಮಾಡಿದ ಹೂಡಿಕೆಯ ಮೇಲೆ ವಾರಕ್ಕೊಮ್ಮೆ ಶೇಕಡಾ 70 ಕ್ಕಿಂತ ಹೆಚ್ಚಿನ ಆದಾಯವನ್ನು ನೀಡುವುದಾಗಿ ಹೂಡಿಕೆದಾರರಿಗೆ ಆಮಿಷ ಒಡ್ಡಿದ್ದ.

    ಇದನ್ನೂ ಓದಿ: ಕರೊನಾ ನೆಗಡಿಗಿಂತಲೂ ಡಮ್ಮಿನಾ?: ಆಸ್ಪತ್ರೆಯಲ್ಲೇ ಸಾವಿನ ಸಂಖ್ಯೆ ಹೆಚ್ಚೆಂದು ಡಾ. ಬಿಸ್ವರೂಪ್​ ಹೇಳಿದ್ದೇಕೆ?

    ಹೂಡಿಕೆದಾರರನ್ನು ಆಕರ್ಷಿಸುವ ಸಲುವಾಗಿ ಆರೋಪಿ ಮತ್ತು ಆತನ ಹೆಂಡತಿ ಬಾಲಿವುಡ್‌ನ ಪ್ರಸಿದ್ಧ ವ್ಯಕ್ತಿಗಳೊಂದಿಗೆ ಫೋಟೋ ತೆಗೆಸಿಕೊಂಡು ಪ್ರಚಾರಾಂದೋಲನವನ್ನೇ ಮಾಡಿದ್ದಾರೆ ಜಂಟಿ ಸಿಪಿ (ಇಒಡಬ್ಲು) ಒ. ಪಿ. ಮಿಶ್ರಾ ತಿಳಿಸಿದ್ದಾರೆ. ಶರ್ಮಾ ದಂಪತಿ “ಲಸ್ಟ್ ವಾಲಾ ಲವ್” ಮತ್ತು “ದಿ ಗ್ರೇಟ್ ಇಂಡಿಯನ್ ಕ್ಯಾಸಿನೊ” ಎಂಬ ಎರಡು ಚಲನಚಿತ್ರಗಳನ್ನು ನಿರ್ಮಿಸಿದ್ದು, ಅವಿನ್ನೂ ಬಿಡುಗಡೆ ಭಾಗ್ಯ ಕಂಡಿಲ್ಲ.
    88 ಹೂಡಿಕೆದಾರರು ದೂರು ಸಲ್ಲಿಸಿದ ನಂತರ ಪೊಲೀಸರು ಕ್ರಮ ಕೈಗೊಂಡಿದ್ದು. ಒಮ್ಮೆ ಮರು ಪಾವತಿಸಿದ ಬಳಿಕ ಶರ್ಮಾ ಮತ್ತೆ ಸಂಪರ್ಕಕ್ಕೆ ಸಿಕ್ಕಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ. ಏಮ್ಸ್ ಸಿಬ್ಬಂದಿಯೊಬ್ಬರು ಶರ್ಮಾ ಅವರ ಹೂಡಿಕೆ ಯೋಜನೆಗೆ ಆಮಿಷ ಒಡ್ಡಿದ್ದಾರೆ ಎಂದು ಕೆಲವು ದೂರುದಾರರು ಹೇಳಿದ್ದಾರೆ. ಪೊಲೀಸರು ಎಫ್‌ಐಆರ್ ದಾಖಲಿಸಿ ಪ್ರಕರಣದಲ್ಲಿ ತನಿಖೆ ಆರಂಭಿಸಿದ್ದಾರೆ.

    ಇದನ್ನೂ ಓದಿ: ವಿರೋಧದ ನಡುವೆಯೂ ಆಕೆಯನ್ನು ಮದುವೆಯಾದವ ಆರು ತಿಂಗಳ ಬಳಿಕ ಕೊಲೆಯಾದ.. ನಡೆದದ್ದೇನು?

    ತನಿಖೆಯ ವೇಳೆ, ಆರೋಪಿ ತನ್ನ ಮೋಸದ ಹೂಡಿಕೆ ಯೋಜನೆಯಿಂದ ಜನರನ್ನು ಮೋಸಗೊಳಿಸುತ್ತಿದ್ದಾನೆ. ಆತ ಕೆಲವು ಹೂಡಿಕೆದಾರರಿಗೆ ಸಾವಿನ ಬೆದರಿಕೆಯನ್ನೂ ಒಡ್ಡಿದ್ದಾನೆ, ಪ್ರೊಡಕ್ಷನ್ ಹೌಸ್‌ಗೆ ಹೊಸ ಹೂಡಿಕೆದಾರರನ್ನು ಪರಿಚಯಿಸಲು ಶೇ, 5 ಪ್ರೋತ್ಸಾಹ ಧನ ನೀಡುತ್ತಿದ್ದಾನೆ ಎಂದೆಲ್ಲ ತಿಳಿದುಬಂದಿದೆ. ಆತ ಆಗಾಗ್ಗೆ ತನ್ನ ಫೋನ್ ಸಂಖ್ಯೆಯನ್ನು ಬದಲಾಯಿಸುತ್ತಿದ್ದ ಮತ್ತು ಕರೆ ಮಾಡಲು ದೆಹಲಿಯಂತಹ ದೂರದ ನಗರಗಳಿಗೆ ಹೋಗುತ್ತಿದ್ದ. ಆತನನ್ನು ತೀವ್ರ ಬೆನ್ನಟ್ಟಿದ ಪೊಲೀಸರು ಚಂಡೀಗಢದಲ್ಲಿ ಬಂಧಿಸಿದ್ದಾರೆ.
    ಪೊಲೀಸರು ಶರ್ಮಾನನ್ನು ಐದು ದಿನಗಳ ಕಸ್ಟಡಿಯಲ್ಲಿರಿಸಿಕೊಂಡಿದ್ದಾರೆ. ಆತನ ಹೆಂಡತಿಗೂ ವಿಚಾರಣೆ ನಡೆಸಲಾಗುತ್ತಿದೆ. ಆರೋಪಿ ಹೂಡಿದ ಮೋಸದ ಜಾಲದಲ್ಲಿ ಅಂದಾಜು ಸಾವಿರ ಜನ ಹೂಡಿಕೆದಾರರು ಇರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ. ಈತನ ಮೋಸದ ಜಾಲಕ್ಕೆ ಸಿಲುಕಿದ ಹೆಚ್ಚಿನ ಜನ ದೂರನ್ನು ದಾಖಲಿಸದ ಕಾರಣ ನಿಖರವಾದ ಅಂಕಿ ಅಂಶ ಸಿಕ್ಕಿಲ್ಲ.

    ರಾಮಭಕ್ತರ ಮೇಲೆ ಮುಲಾಯಂ ಸರ್ಕಾರದಿಂದ ನಡೆದಿತ್ತು ಗುಂಡಿನ ಸುರಿಮಳೆ: ಭೂಮಿಪೂಜೆಗೆ ಕುಟುಂಬಸ್ಥರಿಗೆ ಆಹ್ವಾನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts