More

    PHOTO | ಮಿಸ್​ ಯೂ ಬೀಚ್​ ಮತ್ತು ಬಿಕಿನಿ ಎನ್ನುತ್ತಿದ್ದಾರೆ ಬಾಲಿವುಡ್​ ಸುಂದರಿಯರು!

    ಬೇಸಿಗೆ ಇನ್ನೇನು ಮುಗಿಯುತ್ತ ಬಂತು. ಆದರೆ, ಬೇಸಿಗೆ ವೇಳೆ ಬೀಚ್​ನಲ್ಲಿ ಕಾಲ ಕಳೆಯುತ್ತಿದ್ದ ಅದೆಷ್ಟೋ ಸೆಲೆಬ್ರಿಟಿಗಳು ಈ ವರ್ಷ ಅದೆಲ್ಲವನ್ನು ಮಿಸ್​ ಮಾಡಿಕೊಳ್ಳುತ್ತಿದ್ದಾರೆ. ಅದ್ಯಾವ ಮಟ್ಟಿಗೆ ಅಂದರೆ, ಸೋಷಿಯಲ್​ ಮೀಡಿಯಾದಲ್ಲಿ ಬೀಚ್​ನಲ್ಲಿ ಕಳೆದ ಕ್ಷಣಗಳನ್ನು ಫೋಟೋ ಮೂಲಕ ಮತ್ತೆ ಶೇರ್​ ಮಾಡಿಕೊಂಡು ಮಿಸ್ಸಿಂಗ್​ ಎಂಬ ಅಡಿಬರಹದೊಂದಿಗೆ ಹಂಚಿಕೊಳ್ಳುತ್ತಿದ್ದಾರೆ.

    ಇದನ್ನೂ ಓದಿ: ಕ್ರೇಜಿಸ್ಟಾರ್ ರವಿಚಂದ್ರನ್​ ಹೆಸರಿನಲ್ಲಿ ನಕಲಿ ಟ್ವಿಟರ್​ ಖಾತೆ! 

    ಹೌದು, ಈ ಹೊತ್ತಲ್ಲಿ ಸಹಜವಾಗಿ ಬಹುತೇಕ ಬಾಲಿವುಡ್​ ಸೆಲೆಬ್ರಿಟಿಗಳು ವಿದೇಶಗಳಲ್ಲಿ ಪ್ರವಾಸದ ಮೂಡ್​ನಲ್ಲಿರುತ್ತಿದ್ದರು. ಬಿಕಿನಿ ಧರಿಸಿ ಬಗೆಬಗೆ ಫೋಟೋಗಳಿಗೆ ಪೋಸ್​ ನೀಡಿ ಸೋಷಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿ, ಅಭಿಮಾನಿಗಳ ಮನ ತಣಿಸುತ್ತಿದ್ದರು. ಆದರೆ, ಈ ವರ್ಷ ಆ ಎಂಜಾಯ್​ಮೆಂಟ್​ಗೆ ಕರೊನಾ ಅಡ್ಡಗಾಲು ಹಾಕಿದೆ. ಹೊರಗೆ ಕಾಲಿಡದಂತೆ ಮಾಡಿದೆ.

    ಇದನ್ನೂ ಓದಿ: ಟಿಕ್‌ಟಾಕ್‌ನಲ್ಲಿ ನಕಲಿ ಕರಿಷ್ಮಾ ಕಪೂರ್ ಹವಾ!

    ಬಾಲಿವುಡ್​ ನಟಿ ದಿಶಾ ಪಟಾಣಿ, ಬೀಚ್​ನಲ್ಲಿ ಬಿಕಿನಿಯಲ್ಲಿ ಕುಳಿತ ಭಂಗಿಯ ಹಳೇ ಫೋಟೋವೊಂದನ್ನು ಶೇರ್​ ಮಾಡಿ, ಬೀಚ್​ ಮಿಸ್​ ಮಾಡಿಕೊಳ್ಳುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಅದೇ ರೀತಿ ಇಲಿಯಾನ ಸಹ ಐ ಮಿಸ್​ ದಿ ಬೀಚ್​ ಎಂದಿದ್ದಾರೆ. ಸ್ಟೂಡೆಂಟ್ ಆಫ್​ ಇಯರ್ 2 ಸಿನಿಮಾ ಖ್ಯಾತಿಯ ತಾರಾ ಸುತಾರಿಯಾ ಬೀಚ್​ ಮೇಲೆ ಫೋಟೋ ಶೂಟ್ ಮಾಡುತ್ತಿರುವ ಕಳೆದ ವರ್ಷದ ಫೋಟೋ ಹಂಚಿಕೊಂಡು ಮಿಸ್ಸಿಂಗ್ ಎಂದಿದ್ದಾರೆ. ಇನ್ನು ನಟಿ ಹೀನಾ ಖಾನ್​ ನಾಲ್ಕೈದು ಫೋಟೋಗಳನ್ನು ಪೋಸ್ಟ್ ಮಾಡಿ, ‘ಬೀಚ್​ಗೆ ತೆರಳಲು ನನಗೆ ನನ್ನ ಲೈಸನ್ಸ್ ಮರಳಿ ನೀಡಿ’ ಎಂದಿದ್ದಾರೆ. ಅದೇ ರೀತಿ ರವೀನಾ ಟಂಡನ್ ಸಹ ಬೀಚ್​ ನೆನಪಾಗುತ್ತಿದೆ ಎಂದು ಇತ್ತೀಚೆಗಷ್ಟೇ ಹೇಳಿಕೊಂಡಿದ್ದರು. ಒಟ್ಟಿನಲ್ಲಿ ಕರೊನಾ ಹಿನ್ನೆಲೆಯಲ್ಲಿ ಸಿನಿಮಾ ಮಂದಿಗೆ ಕೆಲಸದ ಜತೆಗೆ ಅವರ ವೈಯಕ್ತಿಕ ಮನರಂಜನೆಗೂ ದೊಡ್ಡ ಹೊಡೆತ ಬಿದ್ದಿದೆ. (ಏಜೆನ್ಸೀಸ್​)

    ಪತಿ ಬದಲಿಗೆ ಬಾಯ್​ಫ್ರೆಂಡ್​ ನೆನಪಲ್ಲಿ ದೀಪಿಕಾ ಪಡುಕೋಣೆ!

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts