More

    ಬಿಎಂಟಿಸಿ ಬಸ್​ ಪ್ರಯಾಣ ದರ ಕಡಿತಕ್ಕೆ ಐಐಎಸ್ಸಿ ಶಿಫಾರಸು

    ಬೆಂಗಳೂರು: ಹತ್ತಿರದ ಮಾರ್ಗಗಳಲ್ಲಿ ಬಸ್​ ಪ್ರಯಾಣ ದರವನ್ನು ಬಿಎಂಟಿಸಿ ಕಡಿತಗೊಳಿಸಿದರೆ ಒಳಿತು ಎಂದು ಇಂಡಿಯನ್​ ಇನ್​ಸ್ಟಿಟ್ಯೂಟ್​ ಆಫ್​ ಸೈನ್ಸ್​ (ಐಐಎಸ್ಸಿ) ಎಂದು ವರದಿ ಸಿದ್ಧಪಡಿಸಿದೆ.

    ಪ್ರಯಾಣ ದರದ ವಿವರ:
    ದೂರ                   ಪ್ರಸ್ತುತ ದರ                 ಪ್ರಸ್ತಾಪಿತ ದರ
    2 ಕಿ.ಮೀ.                 5 ರೂ.                         7 ರೂ.
    4 ಕಿ.ಮೀ.                10 ರೂ.                        8 ರೂ.
    6 ಕಿ.ಮೀ.                15 ರೂ.                      10 ರೂ.
    8 ಕಿ.ಮೀ.                17 ರೂ.                      12 ರೂ.
    10 ಕಿ.ಮೀ.              19 ರೂ.                      15 ರೂ.
    12 ಕಿ.ಮೀ.              20 ರೂ.                      17 ರೂ.
    14 ಕಿ.ಮೀ.              20 ರೂ.                      18 ರೂ.
    16 ಕಿ.ಮೀ.              22 ರೂ.                      20 ರೂ.
    18 ಕಿ.ಮೀ.              22 ರೂ.                      22 ರೂ.
    20 ಕಿ.ಮೀ.              23 ರೂ.                      24 ರೂ.

    ಸಮೂಹ ಸಾರಿಗೆಗೆ ಪ್ರಯಾಣಿಕರ ಸಂಖ್ಯೆ ಹೆಚ್ಚಿಸುವ ಸಲುವಾಗಿ ರಾಜ್ಯ ಸರ್ಕಾರದ ಸೂಚನೆ ಮೇರೆಗೆ ಐಐಎಸ್ಸಿ ಬಿಎಂಟಿಸಿ ಬಸ್​ ಪ್ರಯಾಣ ದರ ಕಡಿತದ ಕುರಿತು ವರದಿ ಸಿದ್ಧಪಡಿಸಿದೆ. ಅದರಂತೆ ಮೊದಲೆರಡು ಕಿ.ಮೀ.ಗೆ 5 ರೂ. ತೆಗೆದುಕೊಳ್ಳುವ ಬಿಎಂಟಿಸಿ, 4 ಕಿ.ಮೀ.ಗೆ 10 ರೂ., 6 ಕಿ.ಮೀ.ಗೆ 15 ರೂ. ತೆಗೆದುಕೊಳ್ಳುತ್ತಿದೆ.

    ಅದರ ಬದಲು ಮೊದಲ 2 ಕಿ.ಮೀ.ಗೆ 7 ರೂ. ಮತ್ತು 4 ಕಿ.ಮೀ.ಗೆ 8 ರೂ., 6 ಕಿ.ಮೀ.ಗೆ 10 ರೂ. ತೆಗೆದುಕೊಳ್ಳಬಹುದು. ಅದರಿಂದ ಕಡಿಮೆ ದೂರ ಪ್ರಯಾಣಿಸುವವರ ಸಂಖ್ಯೆ ಹೆಚ್ಚಲಿದೆ ಎಂದು ವರದಿಯಲ್ಲಿ ಅಭಿಪ್ರಾಯಪಡಲಾಗಿದೆ. ಅದರ ಜತೆಗೆ ಬಸ್​ ಪ್ರಿಯಾರಿಟಿ ಲೇನ್​ ಮಾದರಿಯ ವ್ಯವಸ್ಥೆಯನ್ನು ಇನ್ನಷ್ಟು ಹೆಚ್ಚಿಸಿದರೆ, ಟ್ರಾಫಿಕ್​ನಲ್ಲಿ ಬಳಲುವವರು ಬಸ್​ ಸಂಚಾರದತ್ತ ವಾಲುತ್ತಾರೆ ಎಂದು ತಿಳಿಸಲಾಗಿದೆ.

    ಪ್ರಯಾಣ ದರದ ಕುರಿತು ಹೆಚ್ಚಿನ ಅಧ್ಯಯನ ನಡೆಸಲಾಗಿದೆ. ಬಿಎಂಟಿಸಿ ನಿಗಮ ಕಡಿಮೆ ಪ್ರಯಾಣ ದರವನ್ನು ಹೊಂದಿದ್ದರೂ, ಹತ್ತಿರದ ಮಾರ್ಗಗಳಿಗೆ ಹೆಚ್ಚಿನ ದರ ವಿಧಿಸುತ್ತಿದೆ ಎಂದು ತಿಳಿಸಲಾಗಿದೆ. ಈಗಿರುವ ಪ್ರಯಾಣ ದರವು ದೂರದ ಮಾರ್ಗಗಳಿಗೆ ಪ್ರಯಾಣಿಕರನ್ನು ಆಕಷಿರ್ಸುವಂತಹದ್ದಾಗಿದೆ. ಅದರ ಬದಲು ಹತ್ತಿರದ ಮಾರ್ಗಗಳಿಗೆ ಪ್ರಯಾಣಿಕರನ್ನು ಹೆಚ್ಚಿಸಬೇಕೆಂದರೆ ದರ ಕಡಿತಗೊಳಿಸಬೇಕು ಎಂದು ಹೇಳಲಾಗಿದೆ.

    ಭಿವಾಂಡಿಯಲ್ಲಿ 3 ಅಂತಸ್ತಿನ ಕಟ್ಟಡ ಕುಸಿತ; ಕನಿಷ್ಠ 8 ಸಾವು

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts