More

    ರಕ್ತದಾನದಿಂದ ಇನ್ನೊಂದು ಜೀವ ಉಳಿಸಲು ಸಾಧ್ಯ

    ನಿಪ್ಪಾಣಿ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆಯವರ 51ನೇ ಜನ್ಮದಿನದ ಅಂಗವಾಗಿ ಬಿಜೆಪಿ ಸ್ಥಳೀಯ ಘಟಕ ಹಾಗೂ ಮೇಸ್ತ್ರಿಗಲ್ಲಿ ತರುಣ ಮಂಡಳ ಇವರ ಸಂಯುಕ್ತಾಶ್ರಯದಲ್ಲಿ ಗುರುವಾರ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು.

    ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆ ಚೇರ್ಮನ್ ಚಂದ್ರಕಾಂತ ಕೋಠಿವಾಲೆ ಶಿಬಿರ ಉದ್ಘಾಟಿಸಿ ಮಾತನಾಡಿ, ರಕ್ತದಾನವು ಶ್ರೇಷ್ಠದಾನವಾಗಿದೆ. ರಕ್ತದಾನದಿಂದ ಅನೇಕರಿಗೆ ಜೀವದಾನ ಸಿಕ್ಕಿದೆ. ಅದರಿಂದ ಆರೋಗ್ಯಕ್ಕೂ ಒಳ್ಳೆಯದು. ಸಚಿವೆ ಜೊಲ್ಲೆಯವರ ಜನ್ಮದಿನದ ಅಂಗವಾಗಿ ಯುವವರ್ಗ ಇಂತಹ ಶಿಬಿರಗಳಿಗೆ ಮುಂದಾಗಿದ್ದು ನಿಜಕ್ಕೂ ಶ್ಲಾಘನೀಯ ಎಂದರು. ನಗರಸಭೆ ಅಧ್ಯಕ್ಷ ಜಯವಂತ ಭಾಟಲೆ ಮಾತನಾಡಿ, ತಾಲೂಕಿನ ಸಮಗ್ರ ಅಭಿವೃದ್ಧಿಯ ಹರಿಕಾರರಾದ ಸಚಿವೆ ಶಶಿಕಲಾ ಜೊಲ್ಲೆಯವರ ಕಾರ್ಯವೈಖರಿಯೇ ವಿಭಿನ್ನವಾಗಿದೆ ಎಂದರು.

    ತಾತ್ಯಾಸಾಹೇಬ ನಾಯಿಕ ಮಾತನಾಡಿದರು. 51 ಯುವಕರು ರಕ್ತದಾನ ಮಾಡಿದರು. ಮಹಾತ್ಮ ಬಸವೇಶ್ವರ ಸಹಕಾರಿ ಸಂಸ್ಥೆಯ ಚೇರ್ಮನ್ ಸುರೇಶ ಶೆಟ್ಟಿ, ರಾಜ ಪಠಾಣ, ಶ್ರೀಮಂಧರ ದೇಸಾಯಿ, ಸುಭಾಷ ಕದಂ, ಅಮಿತ ರಣದಿವೆ, ನಗರಸಭೆ ಸದಸ್ಯ ರಾಜು ಗುಂಡೇಶಾ, ಸಂತೋಷ ಸಾಂಗಾವಕರ, ಸೋನಾಲಿ ಉಪಾಧ್ಯೆ, ಸುಭಾಷ ಶಹಾ, ಮೊದಲಾದವರು ಉಪಸ್ಥಿತರಿದ್ದರು. ಎಪಿಎಂಸಿ ಸದಸ್ಯ ಬಂಡಾ ಘೋರ್ಪಡೆ ಸ್ವಾಗತಿಸಿದರು. ಬಿಜೆಪಿ ಸ್ಥಳೀಯ ಘಟಕದ ಅಧ್ಯಕ್ಷ ಪ್ರಣವ ಮಾನವಿ ವಂದಿಸಿದರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts