More

    ಮನಸ್ಸು ಶುದ್ಧವಾಗಿದ್ದರೆ ಉತ್ತಮ ಸಾಹಿತ್ಯ ರಚನೆ

    ಶೃಂಗೇರಿ: ಮನಸ್ಸು ಪರಿಶುದ್ಧಗೊಳ್ಳಬೇಕು. ಅಂತರಾಳ ಮಿನುಗಿದಾಗ ಮಾತ್ರ ಅತ್ಯುತ್ತಮ ಸಾಹಿತ್ಯ ಸೃಷ್ಟಿ ಸಾಧ್ಯ ಎಂದು ಲೇಖಕಿ ಜಯಶ್ರೀ ಗಣೇಶ್ ತಿಳಿಸಿದರು.

    ಭಾನುವಾರ ತಾಲೂಕು ಕಸಾಪ ಮತ್ತು ಮಹಿಳಾ ಘಟಕದಿಂದ ಆಯೋಜಿಸಿದ್ದ ಮಹಿಳಾ ದಿನಾಚರಣೆ ಮತ್ತು ಎಸ್.ವಿ.ರಾಮಚಂದ್ರ ಭಟ್ ದತ್ತಿ ಉಪನ್ಯಾಸದಲ್ಲಿ ಸಾಹಿತ್ಯದಲ್ಲಿ ಮಹಿಳೆಯರ ಚಿಂತನೆ-ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯ ಸ್ಥಾನ ವಿಷಯದ ಕುರಿತು ಮಾತನಾಡಿದರು.
    ಭಾರತ ಅನಾದಿ ಕಾಲದಿಂದ ಜಗದ್ಗುರು ಸ್ಥಾನದಲ್ಲಿತ್ತು. ಪುರಾಣಗಳ ಕಾಲದ ಗಾರ್ಗಿ, ಮೈತ್ರೇಯಿ ರಚಿಸಿದ ಅದ್ಭುತ ಸಾಹಿತ್ಯ ಹಿಂದು ಸಂಸ್ಕ್ಕೃತಿಗೆ ಪೂರಕವಾಗಿತ್ತು. 12ನೇ ಶತಮಾನದಲ್ಲಿ ವಚನಗಳನ್ನು ರಚಿಸಿದ ಅಕ್ಕಮಹಾದೇವಿ ಅವರ ಸಾಹಿತ್ಯ ಇಂದಿಗೂ ಪ್ರಚಲಿತದಲ್ಲಿದೆ. ಸಾಹಿತ್ಯ ಎಂದರೆ ಒಳಗಣ್ಣಿನ ದೃಷ್ಟಿತ್ವ. ನಮ್ಮೊಳಗಿನ ಅಹಂಭಾವಿಕೆ ದೂರದೂಡಿ ಎಲ್ಲರನ್ನೂ ಸಮಾನ ದೃಷ್ಟಿಯಿಂದ ನೋಡಿದಾಗ ಮಾತ್ರ ಅನುಭಾವದ ದಿವ್ಯತೆ ಬೆಳಗಲು ಸಾಧ್ಯ ಎಂದರು.
    ಸರಳ, ಪ್ರಾಮಾಣಿಕ, ಸತ್ಯದ ಹಾದಿಯಲ್ಲಿ ಮುನ್ನಡೆದಾಗ ಮಾತ್ರ ಒಳ್ಳೆಯ ಮನಸ್ಸು ಅರಳುತ್ತದೆ. ನಮ್ಮೊಳಗಿನ ಅಂಕು-ಡೊಂಕುಗಳನ್ನು ತೊರೆದಾಗ ಮಾತ್ರ ಜ್ಞಾನ ಬೆಳಗುತ್ತದೆ. ಚಿಂತನೆ, ಜ್ಞಾನ, ಆಧ್ಯಾತ್ಮಿಕ, ಸಂಸ್ಕಾರ ಮಹಿಳೆಯರ ಅಂತಃಸತ್ವದಲ್ಲಿ ನಿರಂತರ ಬೆಳಗಬೇಕು. ನಮ್ಮ ಕರ್ತವ್ಯಗಳನ್ನು ಫಲಾಫೇಕ್ಷೆ ಇಲ್ಲದೆ ಮಾಡಿದಾಗ ಮಾತ್ರ ವಿವೇಚನೆಗಳು ಮೂಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.
    ತೆಕ್ಕೂರು ಹಿರಿಯ ಆರೋಗ್ಯ ಸಹಾಯಕಿ ಯಶೋದಾ ಗೋಪಾಲ್ ಅವರನ್ನು ಸನ್ಮಾನಿಸಯಿತು. ಮಹಿಳಾ ದಿನಾಚರಣೆ ಪ್ರಯುಕ್ತ ಚುಕ್ಕಿ ಮತ್ತು ಎಳೆ ರಂಗವಲ್ಲಿ ಸ್ಪರ್ಧೆ, ಭಜನಾ ಹಾಗೂ ಸಂಗೀತ ಕುರ್ಚಿ ಸ್ಪರ್ಧೆ ಆಯೋಜಿಸಲಾಗಿತ್ತು. ವಿಜೇತರಿಗೆ ದಾನಿಗಳಾದ ಗೀತಾ ಭೀಡೆ ಬಹುಮಾನ ವಿತರಣೆ ಮಾಡಿದರು. ಅದೃಷ್ಟ ಚೀಟಿ ಮೂಲಕ ವರ್ಷದ ಅದೃಷ್ಟವಂತ ಮಹಿಳೆಯಾಗಿ ಸುಧಾ ಶೃಂಗೇರಿ ಆಯ್ಕೆಗೊಂಡರು.
    ತಾಲೂಕು ಕಸಾಪ ಅಧ್ಯಕ್ಷ ಎಚ್.ಎಸ್.ಸುಬ್ರಹ್ಮಣ್ಯ, ಮಾಜಿ ಅಧ್ಯಕ್ಷರಾದ ಶೈಲಜಾ ರತ್ನಾಕರ ಹೆಗಡೆ, ಬಿ.ಎಲ್.ರವಿಕುಮಾರ್, ಕಸಬಾ ಹೋಬಳಿ ಅಧ್ಯಕ್ಷ ದಿನೇಶ್ ಅಂಗುರ್ಡಿ, ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ನೇತ್ರಾವತಿ ವಿನಯ್‌ಕುಮಾರ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts