More

    ಮಹಾತ್ಮರ ಆದರ್ಶಗಳಿಂದ ಪರಿವರ್ತನೆಯಾಗಲಿ

    ಕಲಕೇರಿ: ಸಂತರು, ಮಹಾತ್ಮರ ವಚನಗಳನ್ನು ತಿಳಿದುಕೊಳ್ಳುವುದರ ಜತೆಗೆ ನಿರಂತರ ಕಾಯಕ ಯೋಗಿಗಳಾಗಬೇಕು. ನಕಾರಾತ್ಮಕ ಪರಿವರ್ತನೆಯ ಬದಲು ಮಹಾತ್ಮರ ಆಚರಣೆಯ ಮೂಲಕ ಸಕಾರಾತ್ಮಕ ಪರಿವರ್ತನೆಯಾಗಬೇಕು ಎಂದು ಕಲಕೇರಿ ಗುರುಮರುಳಾರಾಧ್ಯರ ಹಿರೇಮಠದ ಸಿದ್ಧರಾಮ ಶಿವಾಚಾರ್ಯರು ಹೇಳಿದರು.

    ಸ್ಥಳೀಯ ಶ್ರೀಗುರು ವೀರಘಂಟೈ ಮಡಿವಾಳೇಶ್ವರ ದೇವಸ್ಥಾನ ಆವರಣದಲ್ಲಿ ಬುಧವಾರ ಸಂಜೆ ಏರ್ಪಡಿಸಿದ್ದ ಶಿವಯೋಗಿ ಸಿದ್ಧರಾಮೇಶ್ವರರ 852ನೇ ಜಯಂತಿ ಹಾಗೂ ಭವಾನಿ ಕಂಪ್ಯೂಟರ್ ತರಬೇತಿ ಸಂಸ್ಥೆಯ 20ನೇ ವಾರ್ಷಿಕೋತ್ಸವ, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಕರುನಾಡ ರತ್ನ ಪ್ರಶಸ್ತಿ ಪ್ರದಾನ ಮತ್ತು ಬಾಲ ಪ್ರತಿಭಾ ಪುರಸ್ಕಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

    ಸಂತರ ಶರಣರ ಜಯಂತಿಗಳು ನಮ್ಮ ಮನೋರಂಜನೆಯ ಜಾತ್ರೆಗಳಾಗಿ ಪರಿವರ್ತನೆಯಾಗದಿರಲಿ. ಜಯಂತಿ ಆಚರಣೆ ಜತೆಗೆ ಅವರ ತತ್ವ ಮತ್ತು ಆದರ್ಶಗಳನ್ನು ಅಳವಡಿಸಿಕೊಂಡು ಅನುಷ್ಠಾನಕ್ಕೆ ತಂದಾಗ ಮಾತ್ರ ಆಚರಣೆಗಳು ಸಾರ್ಥಕವಾಗುತ್ತವೆ ಎಂದರು.

    ದಲಿತ ವಿದ್ಯಾರ್ಥಿ ಪರಿಷತ್ತಿನ ರಾಜ್ಯಾಧ್ಯಕ್ಷ ಶ್ರೀನಾಥ ಪೂಜಾರಿ, ಎಐಸಿಸಿ ಸದಸ್ಯೆ ಶ್ರೀದೇವಿ ಉತ್ಲಾಸರ ಮಾತನಾಡಿ, 12ನೇ ಶತಮಾನದ ಶ್ರೇಷ್ಠ ವಚನಕಾರರಲ್ಲಿ ಒಬ್ಬರಾದ ಶಿವಯೋಗಿ ಸಿದ್ಧರಾಮೇಶ್ವರರು ಕಪಿಲ ಸಿದ್ಧರಾಮೇಶ್ವರ ಎಂಬ ಅಂಕಿತನಾಮದಿಂದ ಅನೇಕ ವಚನಗಳನ್ನು ಬರೆದರು. ಕಾಯಕವೇ ಕೈಲಾಸವೆಂಬ ಸಿದ್ಧಾಂತವನ್ನು ನಂಬಿದ್ದರು. ಕೆರೆ, ಬಾವಿಗಳನ್ನು ನಿರ್ಮಿಸಿ ಪ್ರಾಣಿ, ಪಕ್ಷಿ, ಮಾನವರಿಗೆ ನೀರಿನ ಮಹತ್ವವನ್ನು ತಿಳಿಸಿದರು ಎಂದರು.

    ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಶಿಕ್ಷಕ ಎಂ.ಎಲ್. ವಡ್ಡರ, ಈರಣ್ಣ ಝಳಕಿ, ಜಯಶ್ರೀ ನಾಡಗೌಡ, ಪರವೀನಭಾನು ಮುಜಾವರ್, ಸಾಯಿರಾಜ್ ತೋರವಿ, ಶ್ರೀಶೈಲ ಹಂಗರಗಿ, ಗೋಪಾಲ ಇಂಚಗೇರಿ, ಗೋಪಾಲ ಹೂಗಾರ ಅವರಿಗೆ ಕರುನಾಡ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. 2024ನೇ ಸಾಲಿನ ಲಿಟಲ್ ಕಂಪ್ಯೂಟರ್ ಪ್ರಶಸ್ತಿಯನ್ನು ಪ್ರೀತಿ ಅಶೋಕ ಕಾದಳ್ಳಿ ಅವರಿಗೆ ನೀಡಿ ಗೌರವಿಸಲಾಯಿತು.

    ಸಚಿನ್‌ಗೌಡ ಪಾಟೀಲ ಕುದರಿಸಾಲೋಡಗಿ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಸಂತೋಷಗೌಡ ದೊಡ್ಡಮನಿ ಉದ್ಘಾಟಿಸಿದರು. ಗ್ರಾಪಂ ಅಧ್ಯಕ್ಷ ರಾಜಹ್ಮದ್ ಸಿರಸಗಿ, ಸಿದ್ದಬಾ ಬಂಡಿವಡ್ಡರ, ಈರಮ್ಮ ಪಾಟೀಲ, ಲಕ್ಕಪ್ಪ ಬಡಿಗೇರ, ಶಾಂತಗೌಡ ಪಾಟೀಲ, ಎಂ.ಪಿ. ನಧಾಪ್, ಪ್ರವೀಣ ಜಗಶೆಟ್ಟಿ, ಮಡಿವಾಳಪ್ಪ ದೊಡಮನಿ, ಬಾಬು ವಡ್ಡರ, ಮಡಿವಾಳಪ್ಪ ಭೋವಿ, ಪರಶುರಾಮ ವಡ್ಡರ, ವೆಂಕಟೇಶ ಮೋಪಗಾರ, ವಿಜಯಾ ಮೇಟಿ ಇತರರಿದ್ದರು. ಸಂಸ್ಥೆಯ ಅಧ್ಯಕ್ಷ ಹಣಮಂತ ವಡ್ಡರ ಸ್ವಾಗತಿಸಿದರು. ಮೆಹಮೂದ ಬಾಗಲಕೋಟ ನಿರೂಪಿಸಿದರು. ಸುಧಾಕರ ಅಡಕಿ ವಂದಿಸಿದರು. ಜಾನಪದ ಹಾಡುಗಾರ ಸೂರ್ಯಕಾಂತ, ಬಾಳು ಬೆಳಗುಂದಿ ಅವರು ಜಾನಪದ ಗೀತೆ ಹಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts