More

    ಟಿವಿಗೇ ಅಕ್ಷತೆ ಹಾಕಿ ಮಗ-ಸೊಸೆಗೆ ಆಶೀರ್ವದಿಸಿದ ತಂದೆ-ತಾಯಿ!

    ಬೆಂಗಳೂರು: ಕರೊನಾ ಲಾಕ್​ಡೌನ್​ ಎಫೆಕ್ಟ್​ ಹೇಗಿದೆ ಅಂದ್ರೆ ಮಕ್ಕಳ ಮದುವೆಗೆ ಸ್ವತಃ ತಂದೆ-ತಾಯಿ ಖುದ್ದು ಭಾಗವಹಿಸದಂತಾಗಿದೆ. ಇತ್ತೀಚೆಗೆ ಗುರುಗ್ರಾಮ್​ನಲ್ಲಿ ಬೆಂಗಳೂರು ಮೂಲದ ಪೈಲಟ್​ವೊಬ್ಬರ ವಿವಾಹ ನಡೆಯಿತು. ಅಲ್ಲಿಗೆ ಹೋಗಲು ಆಗದ ವರನ ಪಾಲಕರು ವಿಡಿಯೋ ಕಾಲ್​ನಲ್ಲೇ ಮಗ-ಸೊಸೆಗೆ ಆರತಿ ಮಾಡಿ ಬೆಂಗಳೂರಿನ ಮನೆ ತುಂಬಿಸಿಕೊಂಡಿದ್ದರು. ಇಂತಹದ್ದೇ ಮತ್ತೊಂದು ಮದುವೆಗೆ ರಾಜಧಾನಿ ಬುಧವಾರ ಸಾಕ್ಷಿಯಾಯಿತು.

    ಇದನ್ನೂ ಓದಿ ಕರೊನಾ ಗೆದ್ದ 113 ವರ್ಷದ ಅಜ್ಜಿ ..!

    ಶಿವಮೊಗ್ಗ ಜಿಲ್ಲೆ ಹೊಸೂರು ತಾಲೂಕಿನ ಕೋಡೂರು ಜಯಲಕ್ಷ್ಮೀ ಮತ್ತು ಲಕ್ಷ್ಮೀನಾರಾಯಣ ಜೋಯ್ಸ್​ ಅವರ ಪುತ್ರ ಕೆ.ಎಲ್​. ಶಿವಶ್ಚಂದ್ರ ಜೋಯ್ಸ್ ಜತೆ ಶೈಲಜಾ ಮತ್ತು ಚಂದ್ರಶೇಖರ್​ ಪುತ್ರಿ ಸಿ. ಕಾವ್ಯಾ ಮದುವೆ ನಿಶ್ಚಯವಾಗಿತ್ತು. ಮೇ 13 ರಂದು ಬೆಂಗಳೂರಿನ ಬಸವನಗುಡಿಯ ‘ಶ್ರೀ ಚಂದ್ರಶೇಖರಭಾರತೀ ಕಲ್ಯಾಣ’ ಮಂಟಪದಲ್ಲಿ ಇವರ ಮದುವೆ ನೆರವೇರಿಸಲು ಎರಡೂ ಕುಟುಂಬದ ಗುರುಹಿರಿಯರು ನಿರ್ಧರಿಸಿದ್ದರು. ಅದರಂತೆ ಲಗ್ನ ಪತ್ರಿಕೆಯೂ ಪ್ರಿಂಟ್​ ಆಗಿತ್ತು.

    ಟಿವಿಗೇ ಅಕ್ಷತೆ ಹಾಕಿ ಮಗ-ಸೊಸೆಗೆ ಆಶೀರ್ವದಿಸಿದ ತಂದೆ-ತಾಯಿ!
    ಮಗನ ಮದುವೆಯನ್ನು ಮನೆಯಲ್ಲೇ ಕುಳಿತು ವಿಡಿಯೋ ಕಾಲ್ ಮೂಲಕ ಕಣ್ತುಂಬಿಕೊಳ್ಳುತ್ತಿರುವ ಕೋಡೂರಿನ ಜಯಲಕ್ಷ್ಮೀ ಮತ್ತು ಲಕ್ಷ್ಮೀನಾರಾಯಣ ಜೋಯ್ಸ್​ .

    ಎಲ್ಲೆಡೆ ಲಾಕ್​ಡೌನ್​ ಛಾಯೆ ಆವರಿಸಿದ್ದರಿಂದ ಪೂರ್ವ ನಿಗದಿಯ ಮದುವೆ ಸ್ಥಳ ಬದಲಾಯಿತು. ನಿಗದಿತ ದಿನಾಂಕದಂದೇ ಬೆಂಗಳೂರಿನಲ್ಲಿ ವಧುವಿನ ಸೋದರ ಮಾವನ ಮನೆಯಲ್ಲಿ ಶಿವಶ್ಚಂದ್ರ ಮತ್ತು ಶೈಲಜಾ ಮದುವೆ ಸರಳವಾಗಿ ನೆರವೇರಿತು.

    ಈ ಮದುವೆಗೆ ಖುದ್ದು ಹಾಜರಿರದ ವರನ ತಂದೆ-ತಾಯಿ ಶಿವಮೊಗ್ಗದಲ್ಲಿ ತಮ್ಮ ಮನೆಯಲ್ಲೇ ಕುಳಿತು ವಾಟ್ಸ್ಆ್ಯಪ್​ ವಿಡಿಯೋ ಕಾಲ್​ನಲ್ಲೇ ಮಗನ ಮದುವೆ ಸಂಭ್ರಮ ಕಣ್ತುಂಬಿಕೊಂಡರು. ವಿಡಿಯೋ ಕನೆಕ್ಟ್​ ಮಾಡಿದ್ದ ಟಿವಿಗೇ ಅಕ್ಷತೆ ಹಾಕಿ ಮಗ-ಸೊಸೆಯನ್ನು ಆಶೀರ್ವದಿಸಿದರು. ಈ ಮದುವೆಗೆ ಬೆಂಗಳೂರಿನಲ್ಲೇ ಇರುವ ವರನ ಅಕ್ಕ ಮತ್ತು ಭಾವ ಸಾಕ್ಷಿಯಾದರು. ಎರಡೂ ಕುಟುಂಬದ ಕಡೆಯಿಂದ ಒಟ್ಟಾರೆ 35 ಜನರು ಮಾತ್ರ ಮದುವೆಯಲ್ಲಿ ಪಾಲ್ಗೊಂಡಿದ್ದರು.

    ಇದನ್ನೂ ಓದಿ ನಿಖಿಲ್ ಮದುವೆಗೆ ನೀಡಿದ್ದ ವಾಹನ ಪಾಸ್​ಗಳೆಷ್ಟು?

    ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಈ ಮದುವೆಯಲ್ಲಿ ವರನ ತಂದೆ-ತಾಯಿ ಸೇರಿ ಎರಡೂ ಕಡೆಯ ಸಂಬಂಧಿಕರು, ಸ್ನೇಹಿತರು ಪಾಲ್ಗೊಳ್ಳುತ್ತಿದ್ದರು. ಮೇ 15ರಂದು ವರನ ಸ್ವಗ್ರಾಮ ಹೊಸನಗರ ತಾಲೂಕು ಕೋಡೂರಿನ ಶ್ರೀ ಶಂಕರೇಶ್ವರ ದೇವಸ್ಥಾನ ಆವರಣದಲ್ಲಿ ಆರತಕ್ಷತೆ ಕೂಡ ನಡೆಯುತ್ತಿತ್ತು. ಇದೆಲ್ಲಕ್ಕೂ ಲಾಕ್​ಡೌನ್​ ಬ್ರೇಕ್​ ಹಾಕಿದೆ.

    ಮಗನ ಮದುವೆಯಲ್ಲಿ ಖುದ್ದು ಪಾಲ್ಗೊಳ್ಳಲು ಆಗಲಿಲ್ಲ ಎಂದು ತುಂಬಾ ದುಃಖ ಆಯ್ತು. ಕರೊನಾ ಪರಿಸ್ಥಿತಿ ಅರಿತು ಸಮಾಧಾನ ಮಾಡಿಕೊಂಡಿದ್ದೇವೆ. ಮಗ-ಸೊಸೆಗೆ ನಾವಿದ್ದ ಜಾಗದಿಂದಲೇ ಆಶೀರ್ವದಿಸಿದ್ದೇವೆ. ಅವರ ದಾಂಪತ್ಯ ಸುಖಕರವಾಗಿರಲಿ. ದೇವರು ಆಯುಷ್, ಆರೋಗ್ಯ ಕೊಟ್ಟು ಕಾಪಾಡಲಿ ಎಂದು ವರನ ತಂದೆ ಲಕ್ಷ್ಮೀನಾರಾಯಣ ಜೋಯ್ಸ್​ ಹೇಳಿದರು.

    ಇದನ್ನೂ ಓದಿ  ಗುರುಗ್ರಾಮ್​ನಲ್ಲಿ ಮದುವೆ, ಬೆಂಗಳೂರಿಂದ ವಿಡಿಯೋ ಕಾಲ್​ನಲ್ಲೇ ಸೊಸೆಯನ್ನು ಮನೆ ತುಂಬಿಸಿಕೊಂಡ ಅತ್ತೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts