More

    ರಾಜಸ್ಥಾನ ಸಿಎಂ ಆಯ್ಕೆ ಮಂಗಳವಾರ: ರೇಸ್​ನಲ್ಲಿ ವಸುಂಧರಾ ರಾಜೇ, ಬಾಲಕನಾಥ್, ಶೇಖಾವತ್​, ಮೇಘವಾಲ್​, ವೈಷ್ಣವ್​

    ಜೈಪುರ: ರಾಜಸ್ಥಾನದಲ್ಲಿ ನೂತನವಾಗಿ ಆಯ್ಕೆಯಾಗಿರುವ ಬಿಜೆಪಿ ಶಾಸಕರು ಮಂಗಳವಾರ ಜೈಪುರದಲ್ಲಿ ಸಭೆ ಸೇರಿ ರಾಜ್ಯದ ಮುಂದಿನ ಮುಖ್ಯಮಂತ್ರಿಯನ್ನು ಔಪಚಾರಿಕವಾಗಿ ಆಯ್ಕೆ ಮಾಡಲಿದ್ದಾರೆ ಎಂದು ಪಕ್ಷದ ಮುಖಂಡರು ತಿಳಿಸಿದ್ದಾರೆ. ಮಾಜಿ ಸಿಎಂ ವಸುಂಧರಾ ರಾಜೇ, ಕೇಂದ್ರ ಸಚಿವರಾದ ಅರ್ಜುನ್ ರಾಮ್ ಮೇಘವಾಲ್, ಗಜೇಂದ್ರ ಸಿಂಗ್ ಶೇಖಾವತ್ ಮತ್ತು ಅಶ್ವಿನಿ ವೈಷ್ಣವ್ ಮೊದಲಾದ ನಾಯಕರು ಸಿಎಂ ರೇಸ್​ನಲ್ಲಿದ್ದಾರೆ.

    ಶಾಸಕಾಂಗ ಪಕ್ಷದ ಸಭೆಯ ಕುರಿತು ಸೋಮವಾರ ಶಾಸಕರಿಗೆ ಮಾಹಿತಿ ನೀಡಲಾಗಿದೆ. ಬಿಜೆಪಿಯ ಕೇಂದ್ರ ನಾಯಕತ್ವವು ಈ ಸಭೆಯಲ್ಲಿ ನೂತನ ಸಿಎಂ ಆಯ್ಕೆ ಮಾಡಲಿದೆ. ರಕ್ಷಣಾ ಸಚಿವ ರಾಜನಾಥ್ ಸಿಂಗ್, ಸರೋಜ್ ಪಾಂಡೆ ಮತ್ತು ವಿನೋದ್ ತಾವ್ಡೆ ಅವರನ್ನು ಪಕ್ಷವು ವೀಕ್ಷಕರನ್ನಾಗಿ ನೇಮಿಸಿದೆ.

    ಶಾಸಕಾಂಗ ಪಕ್ಷದ ಸಭೆಗೆ ನೇಮಕಗೊಂಡ ಕೇಂದ್ರ ವೀಕ್ಷಕರು ಮಂಗಳವಾರ ಜೈಪುರಕ್ಕೆ ಬಂದು ಬೆಳಗ್ಗೆ ಶಾಸಕರ ಜತೆ ಮಾತುಕತೆ ನಡೆಸಲಿದ್ದಾರೆ ಎಂದು ಬಿಜೆಪಿ ಶಾಸಕ ಜೋಗೇಶ್ವರ್ ಗಾರ್ಗ್ ತಿಳಿಸಿದ್ದಾರೆ. ಊಟದ ನಂತರ, ಔಪಚಾರಿಕ ಸಭೆ ನಡೆಯಲಿದ್ದು, ಇದರಲ್ಲಿ ಶಾಸಕರು ಶಾಸಕಾಂಗ ಪಕ್ಷದ ನಾಯಕ ಅಥವಾ ನಿಯೋಜಿತ ಮುಖ್ಯಮಂತ್ರಿಯನ್ನು ಆಯ್ಕೆ ಮಾಡುತ್ತಾರೆ.

    ಶಾಸಕಾಂಗ ಪಕ್ಷದ ಸಭೆಯ ಬಗ್ಗೆ ಶಾಸಕರಿಗೆ ಮಾಹಿತಿ ನೀಡಲಾಗಿದೆ ಎಂದು ಶಾಸಕ ಕಿರೋಡಿ ಲಾಲ್ ಮೀನಾ ತಿಳಿಸಿದ್ಧಾರೆ. ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೇ ಅವರನ್ನು ಸೋಮವಾರ ಅವರ ಮನೆಯಲ್ಲಿ ಕೆಲ ಶಾಸಕರು ಭೇಟಿ ಮಾಡಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, ಫಲಿತಾಂಶದ ನಂತರ 17 ಶಾಸಕರು ಅವರನ್ನು ಭೇಟಿ ಮಾಡಿದ್ದಾರೆ. ಇದನ್ನು ಲಾಬಿ ಎಂದು ನೋಡಬಾರದು ಎಂದಿದ್ದಾರೆ.

    ಪಕ್ಷದ ಕೇಂದ್ರ ನಾಯಕತ್ವವು ಮುಂದಿನ ಮುಖ್ಯಮಂತ್ರಿಯಾಗಿ ಯಾರನ್ನು ಆಯ್ಕೆ ಮಾಡುತ್ತದೆ ಎಂಬ ಊಹಾಪೋಹಗಳ ಮಧ್ಯೆ ಹಲವಾರು ಶಾಸಕರು ಇತ್ತೀಚಿನ ದಿನಗಳಲ್ಲಿ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜಾ ಅವರನ್ನು ಭೇಟಿ ಮಾಡಿದ್ದಾರೆ. ಅಲ್ಲದೆ, ವಸುಂಧರಾ ರಾಜೇ ಕೂಡ ದೆಹಲಿಯಲ್ಲಿ ಪಕ್ಷದ ಕೆಲ ನಾಯಕರನ್ನು ಭೇಟಿಯಾಗಿದ್ದಾರೆ.

    ನವೆಂಬರ್‌ನಲ್ಲಿ ಚುನಾವಣೆ 199 ಸ್ಥಾನಗಳಿಗೆ ಜರುಗಿದ ಬಿಜೆಪಿ 115 ಸ್ಥಾನಗಳನ್ನು ಗೆದ್ದಿದೆ. ಒಂದು ಕ್ಷೇತ್ರದಲ್ಲಿ ಮತದಾನವನ್ನು ಮುಂದೂಡಲಾಗಿದೆ.

    ಹೊಸ ಕ್ರಿಮಿನಲ್ ಕಾನೂನುಗಳಲ್ಲಿ ಸಲಿಂಗಕಾಮ, ವ್ಯಭಿಚಾರ: ಸಮಿತಿಯ ಸಲಹೆಗಳಿಗೆ ಪ್ರಧಾನಿ, ಕೇಂದ್ರ ಕ್ಯಾಬಿನೆಟ್​ ಅಸಮ್ಮತಿ

    ಮಧ್ಯಪ್ರದೇಶ ನೂತನ ಸಿಎಂ ಮೋಹನ್​ ಯಾದವ್​; ಜಗದೀಶ್ ದಿಯೋರಾ, ರಾಜೇಶ್ ಶುಕ್ಲಾ ಡಿಸಿಎಂ; ನರೇಂದ್ರ ಸಿಂಗ್ ತೋಮರ್ ಸ್ಪೀಕರ್​

    ಮಧ್ಯಪ್ರದೇಶದ ಸಿಎಂ ಯಾರು? ಭೋಪಾಲ್​ನಲ್ಲಿ ಶಾಸಕರ ಸಭೆ ನಡೆಸುತ್ತಿದ್ದಾರೆ ಕೇಂದ್ರ ವೀಕ್ಷಕರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts