More

    ದೇಶ, ಹಿಂದುತ್ವ ರಕ್ಷಣೆಗಾಗಿ ಬಿಜೆಪಿ ಅಗತ್ಯ

    ರಬಕವಿ-ಬನಹಟ್ಟಿ: ದೇಶದ ನೆರೆ ಹೊರೆ ರಾಷ್ಟ್ರಗಳು ದೇಶವನ್ನು ಅಸ್ಥಿರಗೊಳಿಸುವ ಹುನ್ನಾರ ನಡೆಸುತ್ತಿವೆ. ಆದ್ದರಿಂದ ಸುಭದ್ರವಾದ, ದೇಶ ಮತ್ತು ಹಿಂದುತ್ವ ರಕ್ಷಣೆಗಾಗಿ ಭಾರತೀಯ ಜನತಾ ಪಕ್ಷ ಅಗತ್ಯವಾಗಿದೆ ಎಂದು ಶಾಸಕ ಸಿದ್ದು ಸವದಿ ತಿಳಿಸಿದರು.

    ಶನಿವಾರ ಬನಹಟ್ಟಿಯ ಬಿಜೆಪಿ ಪಕ್ಷದ ಕಾರ್ಯಾಲಯದಲ್ಲಿ ನಡೆದ ಬಿಜೆಪಿ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾರತ ಮಾತೆ, ಪಂಡಿತ ದೀನದಯಾಳ ಶರ್ಮಾ ಮತ್ತು ಶಾಮಪ್ರಸಾದ ಮುಖರ್ಜಿಯವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು.

    ಪಕ್ಷದ ಕಾರ್ಯಕರ್ತರು ಪಕ್ಷದ ಮಹಾನ್ ನಾಯಕರಾದ ಪಂಡಿತ ದೀನದಯಾಳ ಶರ್ಮಾ, ಶಾಮಪ್ರಸಾದ ಮುಖರ್ಜಿ, ಅಟಲಬಿಹಾರಿ ವಾಜಪೇಯಿ, ಲಾಲಕೃಷ್ಣ ದ್ವಾಣಿ ಸೇರಿದಂತೆ ಅನೇಕ ಮುಖಂಡರ ಪಕ್ಷ ನಿಷ್ಠೆಯನ್ನು ತಮ್ಮಲ್ಲಿ ಅಳವಡಿಕೊಳ್ಳಬೇಕು. ಪಕ್ಷದ ಸೇವೆಯೊಂದಿಗೆ ದೇಶದ ಸೇವೆಗೆ ಮುಂದಾಗಬೇಕು ಎಂದು ಶಾಸಕ ಸವದಿ ತಿಳಿಸಿದರು.

    ಬಿಜೆಪಿ ನಗರ ಘಟಕದ ಅಧ್ಯಕ್ಷ ಶ್ರೀಶೈಲ ಬೀಳಗಿ ಮಾತನಾಡಿ, ಬಿಜೆಪಿ ಸಂಸ್ಥಾಪನಾ ದಿನವು ಪಕ್ಷ ಮತ್ತು ಅದರ ಸದಸ್ಯರು ಒಗ್ಗೂಡಲು ಮತ್ತು ಭಾರತೀಯ ಜನತಾ ಪಕ್ಷದ ತತ್ವಗಳು, ಸಿದ್ಧಾಂತಗಳು ಮತ್ತು ಪರಿವರ್ತಕ ಕೊಡುಗೆಗಳನ್ನು ಪ್ರತಿಬಿಂಬಿಸಲು ಮಹತ್ವದ ಸಮಯವಾಗಿದೆ. ಇದು ಪಕ್ಷದ ಆದರ್ಶಗಳಿಗೆ ಬದ್ಧತೆಯ ಆಚರಣೆ, ಪ್ರತಿಬಿಂಬ ಮತ್ತು ನವೀಕರಣದ ದಿನವಾಗಿದೆ. ದೇಶವು ಬಿಜೆಪಿಯ 44 ನೇ ಸಂಸ್ಥಾಪನಾ ದಿನವನ್ನು ಆಚರಿಸುತ್ತಿರುವಾಗ, ಪಕ್ಷದ ಒಳಗೊಳ್ಳುವ ಮತ್ತು ಸಮದ್ಧ ಭವಿಷ್ಯಕ್ಕಾಗಿ ರಾಷ್ಟ್ರವು ತನ್ನ ಬದ್ಧತೆಯನ್ನು ಪುನರುಚ್ಚರಿಸುತ್ತದೆ ಎಂದರು.

    ಈ ಸಂದರ್ಭದಲ್ಲಿ ಮುಖಂಡರಾದ ಧರೆಪ್ಪ ಉಳ್ಳಾಗಡ್ಡಿ, ಸುರೇಶ ಅಕ್ಕಿವಾಟ, ಬಾಬಾಗೌಡ ಪಾಟೀಲ, ಬಸವರಾಜ ಭದ್ರನ್ನವರ, ಜಿ.ಎಸ್. ಗೊಂಬಿ, ಮಹಾಂತೇಶ ಹಿಟ್ಟಿನಮಠ, ಪುಂಡಲೀಕ ಪಾಲಭಾಂವಿ, ಶಿವಾನಂದ ಬುದ್ನಿ, ಶಿವಾನಂದ ಕಾಗಿ, ರವಿ ಕೊರ್ತಿ, ದುರ್ಗವ್ವ ಹರಿಜನ, ಚಿದಾನಂದ ಹೊರಟ್ಟಿ, ರವಿ ಕರಲಟ್ಟಿ, ಪ್ರವೀಣ ಧಬಾಡಿ, ಸುರೇಶ ಅವಕ್ಕನವರ, ಆನಂದ ಕಂಪು, ಭೀಮಶಿ ಪಾಟೀಲ ಸೇರಿದಂತೆ ಅನೇಕರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts