More

    ದಾಖಲೆ ಮನೆ ಕರ ವಸೂಲಿ

    ರಬಕವಿ-ಬನಹಟ್ಟಿ: ಕಳೆದ 2023-24ನೇ ಸಾಲಿನಲ್ಲಿ ರಬಕವಿ-ಬನಹಟ್ಟಿ ನಗರಸಭೆಯಲ್ಲಿನ ಮನೆ ಕರ ವಸೂಲಾತಿಯಲ್ಲಿ ಶೇ.855ಕ್ಕಿಂತಲೂ ಹೆಚ್ಚಿನ ಒಟ್ಟು 3.5 ಕೋಟಿ ರೂಗಳಷ್ಟು ಕರ ವಸೂಲಿ ಮಾಡುವ ಮೂಲಕ ದಾಖಲೆ ಮಾಡಿದೆ ಎಂದು ಪೌರಾಯುಕ್ತ ಜಗದೀಶ ಈಟಿ ತಿಳಿಸಿದರು.

    ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾರ್ವಜನಿಕರ ಸಹಕಾರದಿಂದ ಈ ರೀತಿ ಕರ ವಸೂಲಾತಿಗೆ ಅನುಕೂಲವಾಗಿದೆ. ಮನೆ ಮನೆಗೆ ತೆರಳಿ ಕರ ವಸೂಲಿ ಬಗ್ಗೆ ಮನವರಿಕೆ ಮಾಡಿದ್ದಲ್ಲದೆ, ಜನತೆ ಸ್ವಯಂ ಪ್ರೇರಿತವಾಗಿ ನಗರಸಭೆಗೆ ಬಂದು ಕರ ತುಂಬಿರುವುದಕ್ಕೆ ಸಂತಸವೆನಿಸುತ್ತದೆ ಎಂದರು.

    ಪ್ರಸಕ್ತ ವರ್ಷದ ಸಾಲಿನ ಆರ್ಥಿಕ ವರ್ಷದ ಮಾರುಕಟ್ಟೆ ಮಾರ್ಗಸೂಚಿಯಂತೆ ಬೆಲೆ ಪರಿಷ್ಕರಣೆ ಮಾಡಿರುವ ನಗರಸಭೆ ಸದರಿ ದರಗಳ ಆಧಾರದ ಮೇರೆಗೆ ಆಸ್ತಿ ತೆರಿಗೆಯನ್ನು 2024-25ನೇ ಸಾಲಿನದ್ದು ಏಪ್ರಿಲ್ ತಿಂಗಳೊಳಗಾಗಿ ನಗರಸಭೆಗೆ ಭರಣಾ ಮಾಡಿದ್ದಲ್ಲಿ ಶೇ.5 ರಷ್ಟು ವಿನಾಯಿತಿಯನ್ನು ಸಾರ್ವಜನಿಕರ ಅನುಕೂಲಕ್ಕಾಗಿ ಕಲ್ಪಿಸಲಾಗಿದೆ ಎಂದು ಪೌರಾಯುಕ್ತರು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts