ರಬಕವಿ-ಬನಹಟ್ಟಿ: ಬಾಗಲಕೋಟೆ ಲೋಕಸಭೆ ಮತಕ್ಷೇತ್ರದ ಅಭಿವೃದ್ಧಿಗಾಗಿ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಿದ್ದೇನೆ. ಮುಂದಿನ ದಿನಗಳಲ್ಲಿ ಕ್ಷೇತ್ರ ಹಾಗೂ ಭಾರತದ ಅಭಿವೃದ್ಧಿಗಾಗಿ ಮತ್ತೊಮ್ಮೆ ನರೇಂದ್ರ ಮೋದಿ ಅವರನ್ನು ಪ್ರಧಾನಿಯನ್ನಾಗಿಸಲು ಎಲ್ಲರೂ ಶ್ರಮಿಸಬೇಕಿದೆ ಎಂದು ಬಾಗಲಕೋಟೆ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪಿ.ಸಿ. ಗದ್ದಿಗೌಡರ ತಿಳಿಸಿದರು.
ಅವಳಿ ನಗರದ ರಾಂಪುರ ದಾನೇಶ್ವರ ಸಮುದಾಯ ಭವನದಲ್ಲಿ ಗುರುವಾರ ಸಂಜೆ ನಡೆದ ಬಿಜೆಪಿ ಬೂತ್‌ಮಟ್ಟದ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಶಾಸಕ ಸಿದ್ದು ಸವದಿ ಮಾತನಾಡಿ, ದೇಶ, ಧರ್ಮ, ಮಹಿಳೆಯರು ಮತ್ತು ದೇಶದ ಗಡಿಗಳು ಸುಭದ್ರವಾಗಿ ಉಳಿಯಬೇಕಾದರೆ ನಾವೆಲ್ಲರೂ ಮುಂದಿನ ದಿನಗಳಲ್ಲಿ ಪಕ್ಷದ ಅಭಿವೃದ್ಧಿಗಾಗಿ ಸೈನಿಕರಂತೆ ಹಗಲಿರುಳು ಶ್ರಮಿಸಬೇಕಾಗಿದೆ. ದೇಶವನ್ನು ಇಸ್ಲಾಂ ರಾಷ್ಟ್ರವನ್ನಾಗಿಸಲು ಹೊರಟಿರುವ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಬೇಕೇ? ಎಂಬುದನ್ನು ಮತದಾರರು ಚಿಂತನೆ ಮಾಡಬೇಕು. ಸುಳ್ಳು ಕಾಂಗ್ರೆಸ್ ಪಕ್ಷದ ಮನೆ ದೇವರು. ಈ ಬಾರಿಯ ಚುನಾವಣೆಯಲ್ಲಿ ತೇರದಾಳ ಮತಕ್ಷೇತ್ರದಿಂದ ಬಿಜೆಪಿಗೆ 40 ಸಾವಿರದಷ್ಟು ಮತಗಳ ಮುನ್ನಡೆ ನೀಡಲು ನಾವೆಲ್ಲರೂ ಪ್ರಯತ್ನಿಸಬೇಕು ಎಂದರು.
ಜಮಖಂಡಿ ಶಾಸಕ ಜಗದೀಶ ಗುಡಗುಂಟಿ, ವೀಕ್ಷಕ ಜಗದೀಶ ಹಿರೇಮನಿ, ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ಮಾತನಾಡಿದರು.
ಜಿ.ಎಸ್. ನ್ಯಾಮಗೌಡ, ಡಿ.ಆರ್. ಪಾಟೀಲ, ಪುಂಡಲೀಕ ಪಾಲಭಾವಿ, ಧರೆಪ್ಪ ಉಳ್ಳಾಗಡ್ಡಿ, ಶ್ರೀಶೈಲ ಬೀಳಗಿ, ಸುರೇಶ ಅಕ್ಕಿವಾಟ, ಮನೋಹರ ಶಿರೋಳ, ಸವಿತಾ ಹೊಸೂರ, ಪವಿತ್ರಾ ತುಕ್ಕನವರ, ಸುರೇಶ ಚಿಂಡಕ, ಸಿದ್ದನಗೌಡ ಪಾಟೀಲ, ಪ್ರಭು ಹಟ್ಟಿ, ಪ್ರಭು ಬಿಳ್ಳೂರ, ಆನಂದ ಕಂಪು, ಜಿ.ಎಸ್. ಗೊಂಬಿ, ಈರಣ್ಣ ಚಿಂಚಖಂಡಿ, ಅಶೋಕ ರಾವಳ ಇತರರಿದ್ದರು.