More

    ಮಗಳಿಗೆ ವ್ಯಾಪಾರದಲ್ಲಿ ಇಂಟ್ರೆಸ್ಟ್​ ಇಲ್ಲ ಅಂತ ಬಿಸ್ಲೆರಿ ಕಂಪೆನಿಯನ್ನೇ ಮಾರಲಿದ್ದಾರಾ.?!

    ನವದೆಹಲಿ: ಟಾಟಾ ಕನ್ಸ್ಯೂಮರ್ಸ್​ ಅಂದಾಜು 6,000-7,000 ಕೋಟಿ ರೂ. ಬೆಲೆ ಬಾಳುವ ಭಾರತದ ಅತಿದೊಡ್ಡ ಕುಡಿಯುವ ನೀರಿನ ಕಂಪನಿ ಬಿಸ್ಲೇರಿಯನ್ನು ಖರೀದಿಸಿಕೊಳ್ಳಲು ಮುಂದಾಗಿದೆ. ಈ ಹಿಂದೆ ಬಿಸ್ಲೆರಿ ಸಂಸ್ಥೆಯ ಅಧ್ಯಕ್ಷ ರಮೇಶ್ ಚೌಹಾಣ್ ತಂಪು ಪಾನೀಯ ಬ್ರಾಂಡ್‌ಗಳಾದ ಥಮ್ಸ್ಅಪ್, ಗೋಲ್ಡ್​ಸ್ಪಾಟ್ ಮತ್ತು ಲಿಮ್ಕಾವನ್ನು ಬ್ರ್ಯಾಂಡ್​ಗಳನ್ನು ಕೋಕಾ-ಕೋಲಾಗೆ ಮಾರಾಟ ಮಾಡಿದ್ದರು. ಇದಾದ ಮೂರು ದಶಕಗಳ ನಂತರ ಬಿಸ್ಲೆರಿ ಸಂಸ್ಥೆಯನ್ನು ಟಾಟಾ ಕನ್ಸ್ಯೂಮರ್ಸ್​ಗೆ ಮಾರಲಿದ್ದಾರೆ.

    ಸದ್ಯಕ್ಕೆ ಒಪ್ಪಂದದ ಭಾಗವಾಗಿ ಎರಡು ವರ್ಷಗಳ ಕಾಲ ರಮೇಶ್​ ಚೌಹಾಣ್​ ನೇತೃತ್ವದ ಮ್ಯಾನೇಜ್​ಮೆಂಟ್​ ಮುಂದುವರಿಯಲಿದೆ. ರಮೇಶ್​ ಚೌಹಾಣ್​ಗೆ ಆರೋಗ್ಯ ಸಮಸ್ಯೆಗಳೂ ಇವೆ. ಹೀಗಾಗಿ ಅವರಿಂದಲೂ ಕಂಪೆನಿಯನ್ನು ನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ವಿಚಿತ್ರದ ಸಂಗತಿ ಏನೆಂದರೆ ಅವರ ಮಗಳು ಜಯಂತಿಗೆ ವ್ಯಾಪಾರದಲ್ಲಿ ಆಸಕ್ತಿ ಇಲ್ಲವಂತೆ! ಸುಮಾರು 7000 ಕೋಟಿ ರೂ. ಬೆಲೆ ಬಾಳುವ ಕಂಪೆನಿಗೆ ಉತ್ತರಾಧಿಕಾರಿ ಇಲ್ಲದ ಕಾರಣ ರಮೇಶ್​ ಚೌಹಾಣ್​ ಬಿಸ್ಲೆರಿಯನ್ನು ಮಾರಾಟ ಮಾಡಲು ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ.

    ‘ಬಿಸ್ಲೆರಿ ಕಂಪೆನಿಯ ಮಾರಾಟ ಕಷ್ಟಕರ ನಿರ್ಧಾರವಾಗಿದೆ’ ಎಂದು ಅವರು ಹೇಳಿದ್ದರು. ಆದರೆ ಅವರ ದೃಷ್ಟಿಯಲ್ಲಿ ಬಿಸ್ಲರಿ ಕಂಪೆನಿ ಟಾಟಾ ಗ್ರೂಪ್​ನ ಅಡಿಯಲ್ಲಿ ಉತ್ತಮ ಭವಿಷ್ಯ ಹೊಂದಿದೆ, ಹೀಗಾಗಿ ಟಾಟಾ ಕನ್ಸ್ಯೂಮರ್ಸ್​ಗೆ ಮಾರಾಟ ಮಾಡಲು ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts