More

    ದೇಹದ ವಿವಿಧ ಭಾಗದಲ್ಲಿರುವ ಮಚ್ಚೆ ಹಿಂದಿನ ರಹಸ್ಯವೇನು? ಇಲ್ಲಿದೆ ಕುತೂಹಲಕಾರಿ ಮಾಹಿತಿ..!

    ನವದೆಹಲಿ: ಹುಟ್ಟಿದಾಗಿನಿಂದ ಕೆಲವರಿಗೆ ದೇಹದಲ್ಲಿ ಗುರುತುಗಳು ಇರುವುದನ್ನು ಕಂಡಿದ್ದೇವೆ. ಅದನ್ನು ಮಚ್ಚೆ ಎಂತಲೂ ಕರೆಯುತ್ತಾರೆ. ಹುಟ್ಟಿನಿಂದಲೇ ಬರುವ ಮಚ್ಚೆಯು ಪ್ರತಿಯೊಬ್ಬರ ದೇಹದಲ್ಲೂ ವಿಭಿನ್ನವಾಗಿರುತ್ತವೆ. ವಿಜ್ಞಾನ ಇಂತಹ ಮಚ್ಚೆಗಳನ್ನು ನಂಬುವುದಿಲ್ಲ. ಆದರೆ, ಜ್ಯೋತಿಷ್ಯದಲ್ಲಿ ಮಚ್ಚೆಯ ಆಧಾರದ ಮೇಲೆ ವ್ಯಕ್ತಿಯ ವ್ಯಕ್ತಿತ್ವ ಮತ್ತು ರಹಸ್ಯಗಳನ್ನು ಬಹಿರಂಗಪಡಿಸಲಾಗುತ್ತದೆ. ಅಲ್ಲದೆ, ವ್ಯಕ್ತಿಯ ಭವಿಷ್ಯದ ಬಗೆಗಿನ ಮಾಹಿತಿಯನ್ನು ಮಚ್ಚೆ ನೀಡುತ್ತದೆ.

    ಇಂತಹ ಮಚ್ಚೆಗಳು ಕೆಲವರಿಗೆ ಅದೃಷ್ಟ ತಂದರೆ, ಕೆಲವರಿಗೆ ದುರಾದೃಷ್ಟಕರ ಎಂದು ಜ್ಯೋತಿಷ್ಯದಲ್ಲಿ ನಂಬಲಾಗಿದೆ. ಹಾಗದರೆ ಹುಟ್ಟು ಮಚ್ಚೆ ಏನು ಹೇಳುತ್ತದೆ.

    ಕಾಲಿನಲ್ಲಿರುವ ಮಚ್ಚೆ
    ಇಂತಹ ಜನರು ತುಂಬಾ ಅದೃಷ್ಟವಂತೆ ಮತ್ತು ಅವರ ಪ್ರತಿಭೆಗೆ ಒಂದು ಸಂಕೇತನಾಮವಿದೆ. ಆದರೆ, ಇಂತವರು ಸರಿಯಾದ ಸಮಯದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳುವಲ್ಲಿ ಕೊಂಚ ದುರ್ಬಲರಂತೆ.

    ಎಡ ಅಥವಾ ಬಲ ಭುಜದಲ್ಲಿನ ಮಚ್ಚೆ
    ಎಡ ಭುಜದ ಮೇಲೆ ಮಚ್ಚೆ ಹೊಂದಿರುವ ವ್ಯಕ್ತಿಗಳು ಜೀವನದಲ್ಲಿ ತುಂಬಾ ಸಮಸ್ಯೆಯನ್ನು ಎದುರಿಸುತ್ತಾರೆ ಮತ್ತು ಬಲ ಭುಜದಲ್ಲಿ ಮಚ್ಚೆ ಇರುವ ವ್ಯಕ್ತಿಗಳು ಜೀವನದಲ್ಲಿ ನೆಮ್ಮದಿಯನ್ನು ಹೊಂದಿರುತ್ತಾರಂತೆ.

    ಎಡ ಎದೆ ಭಾಗದ ಕೆಳಗಿನ ಮಚ್ಚೆ
    ನೀವೇನಾದರೂ ಎಡ ಭಾಗದ ಎದೆಯ ಕೆಳ ಭಾಗದಲ್ಲಿ ಮಚ್ಚೆಯನ್ನು ಹೊಂದಿದ್ದರೆ ನೀವು ತುಂಬಾ ಅದೃಷ್ಟಶಾಲಿಗಳಂತೆ. ಅದೇ ಮಚ್ಚೆ ಏನಾದರೂ ಬಲ ಭಾಗದ ಎದೆಯ ಕೆಳಗಡೆ ಇದ್ದರೆ ನಿಮಗೆ ಸಂತೋಷ ಮರೀಚಿಕೆಯಂತೆ.

    ಕೈ ಮತ್ತು ಬೆರಳುಗಳಲ್ಲಿನ ಮಚ್ಚೆ
    ಕೈ ಮತ್ತು ಬೆರಳುಗಳ ಮೇಲೆ ಮಚ್ಚೆ ಇದ್ದರೆ ಅಂತಹ ಜನ ತಮ್ಮ ಶ್ರಮಕ್ಕೆ ತಕ್ಕಂತೆ ಕೈತುಂಬಾ ಹಣವನ್ನುಜ ಸಂಪಾದಿಸುತ್ತಾರೆ ಮತ್ತು ಎಲ್ಲದರಲ್ಲೂ ಯಶಸ್ಸು ಸಾಧಿಸುತ್ತಾರೆ.

    ಹೊಕ್ಕುಳ ಬಳಿಯ ಮಚ್ಚ
    ನಿಮ್ಮ ಹೊಕ್ಕಳಿನ ಸುತ್ತ ಎಲ್ಲಾದರು ಮಚ್ಚೆ ಇದ್ದರೆ ನೀವು ನಿಜಕ್ಕೂ ಅದೃಷ್ಟಶಾಲಿ ಮತ್ತು ಎಲ್ಲರಿಂದ ಉತ್ತಮ ಬೆಂಬಲವನ್ನು ಗಳಿಸುತ್ತೀರಂತೆ.

    ಬಲ ಮತ್ತ ಎಡ ಕೆನ್ನೆಯಲ್ಲಿನ ಮಚ್ಚೆ
    ಬಲ ಅಥವಾ ಎಡ ಭಾಗದ ಕೆನ್ನೆಯಲ್ಲಿ ಮಚ್ಚೆಯನ್ನು ಹೊಂದಿರುವವರು ಸದಾ ಖುಷಿಯಾಗಿರುತ್ತಾರಂತೆ. ಆದರೆ, ಅನೇಕ ಸಮಸ್ಯೆಗಳನ್ನು ಸಹ ಎದುರಿಸುತ್ತಾರಂತೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts