More

    ಮಕ್ಕಳ ಹಠಕ್ಕೆ ಮಣಿದು ಬೈಕ್, ಮೊಬೈಲ್ ಕೊಡಿಸುವ ಪೋಷಕರು ಈ ಸ್ಟೋರಿ ನೋಡ್ಲೇಬೇಕು..!

    ಬೆಂಗಳೂರು: ಮಕ್ಕಳ ಹಠಕ್ಕೆ ಮಣಿದು ಸಾಲ ಮಾಡಿ ಮಕ್ಕಳಿಗೆ ಬೈಕ್, ಹೆಣ್ಣು ಮಕ್ಕಳಿಗೆ ಮೊಬೈಲ್ ಕೊಡಿಸುವ ಪೋಷಕರು ಈ ಸ್ಟೋರಿ ನೋಡಲೇಬೇಕು. ಆನ್​ಲೈನ್​ ಜಮಾನದಲ್ಲಿ ಸ್ವಲ ಯಾಮಾರಿದರೂ ನಿಮ್ಮ ಮಕ್ಕಳು ಕೈಮೀರುವುದು ಖಚಿತ ಎನ್ನುವುದಕ್ಕೆ ಈ ಸ್ಟೋರಿ ಒಂದು ತಾಜಾ ಉದಾಹರಣೆಯಾಗಿದೆ.

    ಇತ್ತೀಚಿನ ದಿನಗಳಲ್ಲಿ ಮಕ್ಕಳು ಹೆಚ್ಚಾಗಿ ವ್ಹೀಲಿಂಗ್ ಕ್ರೇಜ್ ಮರುಳಾಗುತ್ತಿದ್ದಾರೆ. ಸಿನಿಮಾ ಶೈಲಿಯಲ್ಲಿ ಹುಡುಗಿಯರನ್ನು ಇಂಪ್ರೆಸ್ ಮಾಡಲು ಮುಖ್ಯ ರಸ್ತೆಗಳಲ್ಲಿ ವ್ಹೀಲಿಂಗ್​ ಮಾಡಲು ಮುಂದಾಗುತ್ತಿದ್ದಾರೆ. ಈ ಬಗ್ಗೆ ಪಾಲಕರು ಎಚ್ಚರವಹಿಸುವುದು ಸೂಕ್ತ. ಇಲ್ಲವಾದಲ್ಲಿ ನಿಮ್ಮ ಮಕ್ಕಳು ನಿಮ್ಮ ಕೈತಪ್ಪಿ ಹೋಗುವುದುರಲ್ಲಿ ಸಂಶಯವೇ ಇಲ್ಲ.

    ತಾಜಾ ಉದಾಹರಣೆ ಎಂಬಂತೆ ಮಾರ್ಕೆಟ್ ಪ್ಲೇಓವರ್ ಮೇಲೆ 21 ವರ್ಷದ ಜೈಕರ್ ಎಂಬಾತ ವ್ಹೀಲಿಂಗ್ ಮಾಡಿದ್ದು, ಅದರ ವಿಡಿಯೋವನ್ನು ತನ್ನ ಸ್ನೇಹಿತೆಗೆ ಕಳುಹಿಸಿ, ಬಿಲ್ಡಪ್​ ತೆಗೆದುಕೊಂಡಿದ್ದಾನೆ. ಜೈಕರ್​ ಅದೃಷ್ಟ ಕೆಟ್ಟಿತ್ತೇನೋ ವ್ಹೀಲಿಂಗ್ ಮಾಡುವಾಗ ಬ್ಯಾಟರಾಯನಪುರ ಸಂಚಾರಿ ಇನ್ಸ್​ಪೆಕ್ಟರ್​ ಗಿರಿರಾಜ್​ ಕೈಗೆ ಜೈಕರ್​ ಲಾಕ್​ ಆಗಿದ್ದಾನೆ.

    ಇದನ್ನೂ ಓದಿರಿ: ಕಿಕ್ಕಿರಿದ ಬಸ್​ನಲ್ಲಿ ಸಿಲುಕಿ ಉಸಿರುಗಟ್ಟಿ ವಿದ್ಯಾರ್ಥಿನಿಯರು ಅಸ್ವಸ್ಥ: ಸಾರಿಗೆ ಸಚಿವರ ತವರಲ್ಲೇ ಘಟನೆ!

    ಒಂದು ಕಡೆದ ಹುಡುಗಿಯನ್ನು ಇಂಪ್ರೆಸ್ ಮಾಡಲು ಫ್ಲೈಓವರ್ ಮೇಲೆ ಜೈಕರ್​ ವ್ಹೀಲಿಂಗ್​ ಮಾಡಿ ಸಿಕ್ಕಿಬಿದ್ದಿದ್ದರೆ, ಮತ್ತೊಂದು ಕಡೆ ನಿಖಿಲ್​ ಎಂಬಾತ ಫೇಸ್​ಬುಕ್ ಮತ್ತು ವಾಟ್ಸ್​ಆ್ಯಪ್​ ಸ್ಟೇಟಸ್ ಹಾಕಲು ಡೆಡ್ಲಿ ಬೈಕ್ ಸ್ಟಂಟ್ ಮಾಡಿ​ ಸಿಕ್ಕಿಬಿದ್ದಿದ್ದಾನೆ. ಡ್ಯೂಕ್​ ಬೈಕ್​ನಲ್ಲಿ ಸ್ಟಂಟ್​ ಮಾಡುವುದರ ಜತೆಗೆ ಮಚ್ಚು ಹಿಡಿದ ಪೋಸ್​ ನೀಡಿದ್ದಾರೆ.

    ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಬ್ಯಾಟರಾಯನಪುರ ಪೊಲೀಸರು ಇಬ್ಬರು ಯುವಕರನ್ನು ಬಂಧಿಸಿದ್ದು, ವಿಚಾರಣೆಗೆ ಒಳಪಡಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

    ಕಿದ್ವಾಯಿ-ನಿಮ್ಹಾನ್ಸ್ ಮಾದರಿ ಇನ್ನಷ್ಟು ಆಸ್ಪತ್ರೆ; ರಾಜ್ಯದಲ್ಲಿ ವಲಯವಾರು ಕೇಂದ್ರಗಳ ಆರಂಭಕ್ಕೆ ಸಿಎಂ ನಿರ್ಧಾರ

    ಸ್ಫೋಟಕಗಳ ಜತೆ ಹುಡುಗಾಟ; ಎಚ್ಚೆತ್ತುಕೊಳ್ಳದ ಸರ್ಕಾರ, ಶಿವಮೊಗ್ಗ ಬಳಿಕ ಚಿಕ್ಕಬಳ್ಳಾಪುರದಲ್ಲೂ ದುರಂತ..

    ಒಂದೇ ಜಾಗದಲ್ಲಿ ನೂರಾರು ಕುರಿಗಳ ಸಾವು; ಸಾವಿನ ನಿಖರ ಕಾರಣವಿನ್ನೂ ನಿಗೂಢ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts