ಒಂದೇ ಜಾಗದಲ್ಲಿ ನೂರಾರು ಕುರಿಗಳ ಸಾವು; ಸಾವಿನ ನಿಖರ ಕಾರಣವಿನ್ನೂ ನಿಗೂಢ!

ಚಿಕ್ಕಮಗಳೂರು: ಒಂದೇ ಜಾಗದಲ್ಲಿ ನೂರಾರು ಕುರಿಗಳು ಸತ್ತು ಬಿದ್ದಿರುವುದು ಕುತೂಹಲ ಕೆರಳಿಸುವ ಜತೆಗೆ ಆತಂಕವನ್ನೂ ಮೂಡಿಸಿದೆ. ಮತ್ತೊಂದೆಡೆ ಸಾಯುತ್ತಿರುವ ಕುರಿಗಳ ಸಂಖ್ಯೆ ಹೆಚ್ಚುತ್ತಿರುವುದು ಕೂಡ ಸ್ಥಳೀಯರಲ್ಲಿ ಚಿಂತೆಯನ್ನು ಉಂಟು ಮಾಡಿದೆ. ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಎರೆಹಳ್ಳಿಯಲ್ಲಿ ಒಂದೇ ಜಾಗದಲ್ಲಿ 120 ಕುರಿಗಳು ಸಾವಿಗೀಡಾಗಿವೆ. ಈ ನಡುವೆ ಮತ್ತಷ್ಟು ಕುರಿಗಳು ಸಾವಿಗೀಡಾಗುತ್ತಿವೆ. ಶಿರಾ-ಹಿರಿಯೂರಿನಿಂದ ಬಂದಿರುವ ಈ ಕುರಿಗಳ ಹಿಂಡು ನಿನ್ನೆ ಸಂಜೆಯ ಮಳೆಯಲ್ಲಿ ನೆನೆದು ಅಸ್ವಸ್ಥಗೊಂಡು ಸಾವಿಗೀಡಾಗಿವೆ ಎಂಬ ಶಂಕಿಸಲಾಗಿದ್ದರೂ ಇವುಗಳ ಸಾವಿನ ಕುರಿತ ಕಾರಣವಿನ್ನೂ ನಿಗೂಢವಾಗಿಯೇ … Continue reading ಒಂದೇ ಜಾಗದಲ್ಲಿ ನೂರಾರು ಕುರಿಗಳ ಸಾವು; ಸಾವಿನ ನಿಖರ ಕಾರಣವಿನ್ನೂ ನಿಗೂಢ!