More

    ಡಿ. 5ರಂದು ರಾತ್ರಿ 8 ಗಂಟೆಗೆ ನನ್ನ ತಾಯಿ ಸಾಯಲಿದ್ದಾರೆ! ಶಿಕ್ಷಕನ ಲೀವ್​ ಲೆಟರ್​ ನೋಡಿ ಮುಖ್ಯಶಿಕ್ಷಕರಿಗೆ ಶಾಕ್​

    ಪಟನಾ: ಬಿಹಾರದ ಶಿಕ್ಷಕರು ರಜೆ ಕೋರಿ ಮುಖ್ಯಶಿಕ್ಷಕರಿಗೆ ಬರೆದಿರುವ ರಜೆ ಪತ್ರ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್​ ಆಗುತ್ತಿದೆ. ನನಗೆ ಹೊಟ್ಟೆ ನೋವು, ತಲೆ ನೋವು, ಜ್ವರ ಅಂತಾ ಕಾರಣ ನೀಡಿ ರಜೆ ತೆಗೆದುಕೊಳ್ಳುವುದನ್ನು ನೋಡಿದ್ದೇವೆ. ಇನ್ನು ಕೆಲವರು ನಮ್ಮ ಮನೆಯ ಸದಸ್ಯರೊಬ್ಬರು ತೀರಿ ಹೋಗಿದ್ದಾರೆ ಎಂದು ಸುಳ್ಳು ಹೇಳಿ ರಜೆ ಮಾಡುವವರೂ ಇದ್ದಾರೆ. ಆದರೆ, ಬಿಹಾರದ ಈ ಶಿಕ್ಷಕ ರಜೆ ಪತ್ರದಲ್ಲಿ ನೀಡಿರುವ ಕಾರಣ ಎಲ್ಲರ ಹುಬ್ಬೇರಿಸಿದೆ.

    ಅಂದಹಾಗೆ ಬಿಹಾರದ ಮುಂಗೇರ್, ಭಾಗಲ್ಪುರ್​ ಮತ್ತು ಬಂಕಾ ಜಿಲ್ಲೆಗಳಲ್ಲಿ ಶಿಕ್ಷಕರು ತಮ್ಮ ಕ್ಯಾಶುಯಲ್ ರಜೆಯ ಬೇಡಿಕೆ ಇಟ್ಟಿರುವ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಹೊಸ ಆದೇಶ ಹೊರಡಿಸಿದೆ. ಅದರ ಪ್ರಕಾರ ರಜೆ ಪಡೆಯುವ ಶಿಕ್ಷಕರು 3 ದಿನ ಮುಂಚಿತವಾಗಿಯೇ ಕ್ಯಾಶುಯಲ್ ರಜೆಗೆ ಅರ್ಜಿ ಸಲ್ಲಿಸಬೇಕು ಎಂದು ಸೂಚನೆ ನೀಡಲಾಗಿದೆ. ಅರ್ಜಿ ಸಲ್ಲಿಸದಿದ್ದರೆ ರಜೆಯನ್ನು ರದ್ದು ಮಾಡಲಾಗುವುದು ಎಂದಿದ್ದಾರೆ.

    ಇದೀಗ ರಜೆ ಪಡೆಯುವ ಶಿಕ್ಷಕರು ಅದಕ್ಕೆ ಸೂಕ್ತ ಕಾರಣಗಳನ್ನು ಸಹ ನೀಡಬೇಕಾಗಿದೆ. ಆದರೆ, ಶಿಕ್ಷಕರೊಬ್ಬರು ನೀಡಿರುವ ಕಾರಣ ಎಲ್ಲರನ್ನು ಆಘಾತಕ್ಕೆ ದೂಡಿದೆ. ಅಂಥದ್ದೇನಿದೆ ಆ ಪತ್ರದಲ್ಲಿ ಅಂತಾ ನೀವು ಯೋಚಿಸುತ್ತಿದ್ದೀರಾ? ಮುಂದೆ ಓದಿ.. ಡಿಸೆಂಬರ್​ 5ರಂದು ರಾತ್ರಿ 8 ಗಂಟೆಗೆ ನಮ್ಮ ತಾಯಿ ಮೃತಪಡಲಿದ್ದಾರೆ. ಹೀಗಾಗಿ ನನಗೆ 6 ಮತ್ತು 7ನೇ ತಾರೀಖು ತಾಯಿಯ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಲು ರಜೆ ಬೇಕು ಎಂದು ಕೇಳಿದ್ದಾರೆ.

    ಸಾಯುವ ಮೊದಲೇ ಎಲ್ಲದಾರೂ ರಜೆ ಕೋರುವುದುಂಟ. ಇಂತಹ ಪ್ರಕರಣ ಬಹುಶಃ ಇದೇ ಮೊದಲು ಅನಿಸುತ್ತದೆ. ನಮ್ಮ ಮನೆಯ ಸದಸ್ಯರೊಬ್ಬರು ಸತ್ತಿದ್ದಾರೆ, ರಜೆ ಕೊಡಿ ಎಂದು ಕೇಳುವುದನ್ನು ನೋಡಿದ್ದೇವೆ. ಆದರೆ, ಸಾಯಲಿದ್ದಾರೆ ರಜೆ ಕೊಡಿ ಎಂದು ಕೇಳುವುದು ಅಸಹಜ ಎನಿಸದೇ ಇರದು. ಅಂದಹಾಗೆ ಈ ಪತ್ರ ಬರೆದಿರುವುದು ಶಿಕ್ಷಕ ಅಜಯ್​ ಕುಮಾರ್​ ಎಂಬುವರು.

    ಮತ್ತೊಬ್ಬ ಶಿಕ್ಷಕನ ರಜೆ ಪತ್ರ ಕೂಡ ವೈರಲ್​ ಆಗಿದೆ. ಅದರಲ್ಲಿ ಆತ ಡಿಸೆಂಬರ್ 4 ರಿಂದ ಡಿಸೆಂಬರ್ 5 ರವರೆಗೆ ಅನಾರೋಗ್ಯದಿಂದ ಬಳಲುತ್ತೇನೆ, ಇದರಿಂದಾಗಿ ಶಾಲೆಗೆ ಬರಲು ಸಾಧ್ಯವಿಲ್ಲ ಎಂದು ಬರೆದಿದ್ದಾರೆ. (ಏಜೆನ್ಸೀಸ್​)

    ರವಿವರ್ಮ ಆಕ್ಷನ್​ನಲ್ಲಿ ವಿಜಯಾನಂದ; ವಿಂಗ್ ಕಮಾಂಡರ್ ಅಭಿನಂದನ್ ವೆಬ್​ಸರಣಿಯಲ್ಲಿ ಕನ್ನಡಿಗನ ಕಮಾಲ್

    ಸೋಪು ಹಾಕಿ ಕಾಳಿಂಗ ಸರ್ಪಕ್ಕೆ ಸ್ನಾನ! ಮಹಿಳೆಯರು ಪುರುಷರಿಗಿಂತ ದೀರ್ಘ ಕಾಲ ಬದುಕಲು ಇದೇ ಕಾರಣವಂತೆ

    ಶಾಸಕ ಎಸ್.ಆರ್.ವಿಶ್ವನಾಥ್ ವಿಚಾರಕ್ಕೆ ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತೆಯರ ನಡುವೆ ಜಡೆ ಜಗಳ!

    ಬಾಲ್ಯಕ್ಕೆ ಸ್ಮಾರ್ಟ್​ಫೋನ್ ಕೊಳ್ಳಿ: ವಿಡಿಯೋ, ಗೇಮಿಂಗ್, ಸೋಷಿಯಲ್ ಮೀಡಿಯಾ ವ್ಯಸನ; ಶೇ.47 ಮಕ್ಕಳಲ್ಲಿ ಗೀಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts