More

    ರವಿವರ್ಮ ಆಕ್ಷನ್​ನಲ್ಲಿ ವಿಜಯಾನಂದ; ವಿಂಗ್ ಕಮಾಂಡರ್ ಅಭಿನಂದನ್ ವೆಬ್​ಸರಣಿಯಲ್ಲಿ ಕನ್ನಡಿಗನ ಕಮಾಲ್

    ಬೆಂಗಳೂರು: ಡಾ. ವಿಜಯ ಸಂಕೇಶ್ವರ ಜೀವನಾಧಾರಿತ ‘ವಿಜಯಾನಂದ’ ಚಿತ್ರವು ಪ್ರಾರಂಭದಿಂದಲೂ ಒಂದಲ್ಲಾ ಒಂದು ಕಾರಣಕ್ಕೆ ಸದ್ದು ಮಾಡುತ್ತಿದೆ. ಈಗಾಗಲೇ ಟೀಸರ್, ಹಾಡು, ಟ್ರೇಲರ್ ಯೂಟ್ಯೂಬ್​ನಲ್ಲಿ ವೈರಲ್ ಆಗಿದ್ದು, ಐದು ಭಾಷೆಗಳಿಂದ ಮೂರು ಕೋಟಿಗೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಕನ್ನಡಿಗರೇ ನಿರ್ವಿುಸಿರುವ ಕನ್ನಡದ ಸಾಧಕನ ಕುರಿತ ಈ ಪ್ಯಾನ್ ಇಂಡಿಯಾ ಬಯೋಪಿಕ್ ಬಗ್ಗೆ ವಿಶ್ವಾದ್ಯಂತ ಜನರ ಕುತೂಹಲ ಗರಿಗೆದರಿದೆ. ಟ್ರೇಲರ್ ಬಿಡುಗಡೆಯಾದ ಬಳಿಕ ಅದರಲ್ಲಿನ ಆಕ್ಷನ್ ಮತ್ತು ಥ್ರಿಲ್ಲಿಂಗ್ ಸನ್ನಿವೇಶಗಳು ಸಿನಿಪ್ರಿಯರಲ್ಲಿ ಮತ್ತಷ್ಟು ಕುತೂಹಲ ಹೆಚ್ಚಿಸಿದೆ. ಕನ್ನಡ ಸೇರಿದಂತೆ ಹಿಂದಿ, ತೆಲುಗು, ತಮಿಳಿನ ದೊಡ್ಡ ಸ್ಟಾರ್ ನಟರ ಹಲವು ಹಿಟ್ ಚಿತ್ರಗಳಿಗೆ ಸಾಹಸ ನಿರ್ದೇಶನ ಮಾಡಿರುವ ಹೆಸರಾಂತ ಆಕ್ಷನ್ ಡೈರೆಕ್ಟರ್ ಡಾ. ರವಿವರ್ಮ ‘ವಿಜಯಾನಂದ’ ಚಿತ್ರದ ಸಾಹಸ ಸನ್ನಿವೇಶಗಳನ್ನು ನಿರ್ದೇಶಿಸಿದ್ದಾರೆ.

    ‘ಕನ್ನಡದ ಒಬ್ಬ ಲೆಜೆಂಡ್ ಬಯೋಪಿಕ್​ನಲ್ಲಿ ಕೆಲಸ ಮಾಡಿದ್ದು ನನ್ನ ಅದೃಷ್ಟವೇ ಸರಿ. ಒಂದು ಫೈಟ್ ಮತ್ತು ಎರಡು ಥ್ರಿಲ್ಲಿಂಗ್ ಆಕ್ಷನ್ ಸನ್ನಿವೇಶಗಳನ್ನು ನಿರ್ದೇಶಿಸಿದ್ದೇನೆ. 12 ದಿನಗಳ ಕಾಲ ಚಿತ್ರೀಕರಣ ಮಾಡಿದೆವು. ಸಾಮಾನ್ಯವಾದ ಸಿನಿಮಾಗಳಲ್ಲಿ ಫೈಟ್​ಗಳನ್ನು ನಾವು ಹೇಗೆ ಬೇಕಾದರೂ ಪ್ಲಾ್ಯನ್ ಮಾಡಬಹುದು. ಆದರೆ ನೈಜ ಘಟನೆಯಾಧಾರಿತ ಚಿತ್ರಗಳಲ್ಲಿ ನೈಜತೆಗೆ ಹತ್ತಿರವಾದ ಆಕ್ಷನ್ ಸನ್ನಿವೇಶಗಳನ್ನು ಸಂಯೋಜಿಸುವುದು ಸವಾಲಾಗಿತ್ತು’ ಎಂದು ತಮ್ಮ ಅನುಭವ ಹಂಚಿಕೊಳ್ಳುತ್ತಾರೆ. ಇನ್ನು ‘ವಿಜಯಾನಂದ’ ಚಿತ್ರದ ಬಗ್ಗೆ ಅವರು, ‘ಡಾ. ವಿಜಯ ಸಂಕೇಶ್ವರ ಸರ್ ಶ್ರಮಜೀವಿ. ಅದೆಷ್ಟೋ ಹೋರಾಟಗಳನ್ನು ನಡೆಸಿ, ಕಷ್ಟಗಳನ್ನು ದಾಟಿ ಇವತ್ತು ದಂತಕಥೆಯಂತೆ ಹೆಮ್ಮರವಾಗಿ ಬೆಳೆದು ನಿಂತಿದ್ದಾರೆ. ಸಚಿನ್ ತೆಂಡುಲ್ಕರ್, ಮಹೇಂದ್ರ ಸಿಂಗ್ ಧೋನಿ ಬಯೋಪಿಕ್​ಗಳ ಬಳಿಕ ಈಗ ‘ವಿಜಯಾನಂದ’ ಚಿತ್ರದಲ್ಲಿ

    ಡಾ. ವಿಜಯ ಸಂಕೇಶ್ವರ ಸರ್ ಯಶೋಗಾಥೆ ನೋಡಿ ಇಂದಿನ ಯುವಪೀಳಿಗೆ ಜೀವನದ ಪಾಠ ಕಲಿಯಬಹುದು. ಏನಾದರೂ ಸಾಧಿಸಲೇಬೇಕೆಂಬ ಛಲ ಸಿಗುತ್ತದೆ. ಈ ಚಿತ್ರದಲ್ಲಿ ಅವಕಾಶ ನೀಡಿದ ನಿರ್ವಪಕರಾದ ಡಾ. ಆನಂದ ಸಂಕೇಶ್ವರ ಸರ್, ನಿರ್ದೇಶಕಿ ರಿಷಿಕಾ ಶರ್ವಗೆ ಧನ್ಯವಾದಗಳು’ ಎನ್ನುತ್ತಾರೆ ರವಿವರ್ಮ. ‘ವಿಜಯಾನಂದ’ ಚಿತ್ರದ ಬಿಡುಗಡೆಗೆ ಎದುರು ನೋಡುತ್ತಿರುವ ಡಾ. ರವಿವರ್ಮ ಸದ್ಯ, ಏರ್​ಸ್ಟ್ರೈಕ್​ನ ಹೀರೋ ವಿಂಗ್ ಕಮಾಂಡರ್ ಅಭಿನಂದನ್ ಜೀವನಾಧಾರಿತ ಹಿಂದಿ ವೆಬ್​ಸರಣಿ ಹಾಗೂ ಬಾಲಿವುಡ್​ನ ಸನ್ನಿ ಡಿಯೋಲ್ ಅಭಿನಯದ ‘ಗದರ್ 2’ ಮತ್ತು ‘ಬಾಪ್’ ಚಿತ್ರಗಳಲ್ಲಿ ಸಾಹಸ ನಿರ್ದೇಶನ ಮಾಡುತ್ತಿದ್ದಾರೆ.

    ಐಸಿಯುನಲ್ಲಿ ವೆಂಟಿಲೇಟರ್ ಶಬ್ದದಿಂದ ಕಿರಿಕಿರಿ ಆಗ್ತಿತ್ತು ಅಂತ ಆಫ್ ಮಾಡಿದ ವೃದ್ಧೆ; ಸಾವಿಗೀಡಾದ ರೋಗಿ

    ಶ್ರದ್ಧಾ 35 ಪೀಸ್.. ನಾನು ನಿನ್ನನ್ನು 70 ತುಂಡು​ ಮಾಡುವೆ; ಅತ್ಯಾಚಾರ​ ಮಾಡಿ, ಮತಾಂತರಿಸಿ, ಜೊತೆಗಿಟ್ಟುಕೊಂಡವನ ಬೆದರಿಕೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts