More

    ಶ್ರದ್ಧಾ 35 ಪೀಸ್.. ನಾನು ನಿನ್ನನ್ನು 70 ತುಂಡು​ ಮಾಡುವೆ; ಅತ್ಯಾಚಾರ​ ಮಾಡಿ, ಮತಾಂತರಿಸಿ, ಜೊತೆಗಿಟ್ಟುಕೊಂಡವನ ಬೆದರಿಕೆ!

    ಮುಂಬೈ: ಶ್ರದ್ಧಾಳನ್ನು 35 ಪೀಸ್ ಮಾಡಲಾಗಿತ್ತು. ಆದರೆ ನೀನು ನಾನು ಹೇಳಿದಂತೆ ಕೇಳದಿದ್ದರೆ ನಿನ್ನನ್ನು 70 ಪೀಸ್ ಮಾಡುವೆ ಎಂಬುದಾಗಿ ವ್ಯಕ್ತಿಯೊಬ್ಬ ತನ್ನ ಜತೆಗೆ ಲಿವ್ ಇನ್ ರಿಲೇಷನ್​ನಲ್ಲಿ ಇದ್ದವಳನ್ನು ಬೆದರಿಸಿದ್ದು, ಆಕೆ ಈ ಸಂಬಂಧ ಪೊಲೀಸರಿಗೆ ದೂರು ನೀಡಿದ್ದಾಳೆ.

    ಅರ್ಷದ್ ಸಲಿಮ್ ಮಲಿಕ್ ಎಂಬಾತ ಈ ಬೆದರಿಕೆ ಹಾಕಿದ್ದು, ಆತನೊಂದಿಗೆ ಲಿವ್​-ಇನ್ ರಿಲೇಷನ್​ಷಿಪ್ ಹೊಂದಿರುವ ಮಹಿಳೆ ಮಹಾರಾಷ್ಟ್ರದ ಧುಲೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ಅಫ್ತಾಬ್​ ಶ್ರದ್ಧಾಳನ್ನು 35 ಪೀಸ್ ಮಾಡಿದ್ದ. ಆದರೆ ನಾನು ಹೇಳಿದಂತೆ ಕೇಳದಿದ್ದರೆ ನಿನ್ನನ್ನು ನಾನು 70 ಪೀಸ್ ಮಾಡುವೆ ಎಂದು ತನ್ನ ಸಂಗಾತಿ ಬೆದರಿಕೆ ಹಾಕಿದ್ದಾಗಿ ಆಕೆ ದೂರಿನಲ್ಲಿ ತಿಳಿಸಿದ್ದಾಳೆ.

    ದೂರು ನೀಡಿರುವ ಮಹಿಳೆಗೆ ಅರ್ಷಾದ್ ಜತೆ 2021ರ ಜುಲೈನಿಂದ ವಾಸಿಸುತ್ತಿದ್ದಾಳೆ. ಅದಕ್ಕೂ ಮೊದಲು ಆಕೆಗೆ ಒಂದು ಮದುವೆಯಾಗಿದ್ದು, ಪತಿ 2019ರಲ್ಲಿ ಅಪಘಾತದಲ್ಲಿ ಮೃತಪಟ್ಟಿದ್ದ. ಅಲ್ಲದೆ ಆ ದಾಂಪತ್ಯದಲ್ಲಿ 2017ರಲ್ಲಿ ಮಗುವಾಗಿದ್ದನ್ನೂ ಯುವತಿ ಪೊಲೀಸರಿಗೆ ತಿಳಿಸಿದ್ದಾಳೆ. ಆದರೆ ಶ್ರದ್ಧಾ ಕೇಸ್ ಬಳಿಕ ಅರ್ಷಾದ್ ತನಗೆ ನಿನ್ನನ್ನು 70 ತುಂಡು ಮಾಡುವುದಾಗಿ ಹೇಳಿ ಬೆದರಿಸುತ್ತಿರುತ್ತಾನೆ ಎಂದು ನ.29ರಂದು ಮಹಿಳೆ ದೂರು ನೀಡಿದ್ದಾಳೆ.

    ಸುಳ್ಳು ಹೇಳಿದ್ದ, ರೇಪ್ ಮಾಡಿದ್ದ, ಮತಾಂತರಿಸಿದ್ದ..

    ಅರ್ಷಾದ್ ಈ ಮಹಿಳೆಗೆ ಹೇಗೆಲ್ಲ ವಂಚಿಸಿದ್ದ ಎಂಬುದನ್ನು ಆಕೆ ಪೊಲೀಸರಿಗೆ ತಿಳಿಸಿದ್ದಾಳೆ. ಪತಿ ಮರಣದ ಬಳಿಕ ನನಗೆ ಹರ್ಷಲ್ ಮಾಲಿ ಎಂಬ ವ್ಯಕ್ತಿ ಪರಿಚಯವಾಗಿದ್ದ. ನಂತರ ಒಂದು ದಿನ ಧುಲೆನ ಲಲಿಂಗ್ ಗ್ರಾಮದ ಕಾಡಿನ ಪ್ರದೇಶಕ್ಕೆ ಕರೆದೊಯ್ದ ಆತ ನನ್ನ ಮೇಲೆ ಅತ್ಯಾಚಾರ ನಡೆಸಿದ್ದ. ಮಾತ್ರವಲ್ಲ, ಅದರ ವಿಡಿಯೋ ಇಟ್ಟುಕೊಂಡು ಬೆದರಿಸುತ್ತಿದ್ದ.

    ನಂತರ ಲಿವ್ ಇನ್ ರಿಲೇಷನ್​ಷಿಪ್​ಗೆ ಅಫಿಡವಿಟ್ ಮಾಡಿಸಲು 2021ರ ಜುಲೈನಲ್ಲಿ ಅಮಲ್ನೇರ್​ಗೆ ಹೋದಾಗ ಆತನ ಅಸಲಿ ಹೆಸರು ಹರ್ಷಲ್ ಮಾಲಿ ಅಲ್ಲ ಅರ್ಷದ್ ಸಲೀಮ್ ಮಲಿಕ್ ಎನ್ನುವುದು ಗೊತ್ತಾಯಿತು. ನಂತರ ಆತ ನನ್ನನ್ನು ಒಸ್ಮಾನಾಬಾದ್​ನ ಫ್ಲ್ಯಾಟ್​ಗೆ ಕರೆದೊಯ್ದ. ಬಳಿಕ ಒತ್ತಾಯಪೂರ್ವಕವಾಗಿ ಮತಾಂತರಗೊಳಿಸಿದ. ಮಾತ್ರವಲ್ಲ ತನ್ನ ಮೊದಲ ಪತಿಯಿಂದ ಪಡೆದ ಮಗುವನ್ನೂ ಮತಾಂತರಗೊಳಿಸಲು ಯತ್ನಿಸಿದ. ಅಷ್ಟೇ ಅಲ್ಲ, ಅರ್ಷದ್​ನ ತಂದೆ ಕೂಡ ನನ್ನ ಮೇಲೆ ಶೋಷಣೆ ನಡೆಸಿದ್ದಾರೆ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾಳೆ.

    ಇದಾಗಿ ನಾಲ್ಕು ತಿಂಗಳ ಬಳಿಕ ಆತ ನನ್ನನ್ನು ಧುಲೆಯ ವಿಟ್ಟಭಟ್ಟಿಯಲ್ಲಿನ ಮನೆಗೆ ಕರೆದೊಯ್ದ. ಆಗ ಆಗಸ್ಟ್ 26ರಂದು ನಮಗೊಂದು ಮಗುವಾಯಿತು. ಆ ನಂತರ ಆತನ ಕಿರುಕುಳ ಜಾಸ್ತಿಯಾಯಿತು. ಆತ ಹೇಳಿದಂತೆ ಕೇಳದ್ದಕ್ಕೆ ಒಮ್ಮೆ ಸೈಲೆನ್ಸರ್​ನಿಂದ ಸುಟ್ಟಿದ್ದಾಗಿಯೂ ಹೇಳಿರುವ ಆಕೆ, ಇತ್ತೀಚೆಗೆ ಶ್ರದ್ಧಾ ಪ್ರಕರಣದ ಬಳಿಕ, ಶ್ರದ್ಧಾಳನ್ನು 35 ಪೀಸ್ ಮಾಡಲಾಗಿತ್ತು, ನೀನು ನಾನು ಹೇಳಿದಂತೆ ಕೇಳದಿದ್ದರೆ 70 ಪೀಸ್ ಮಾಡುವೆ ಎಂದು ಹೆದರಿಸುತ್ತಿರುವುದಾಗಿ ದೂರಿನಲ್ಲಿ ತಿಳಿಸಿದ್ದಾಳೆ. ದೂರಿನ ಮೇರೆಗೆ ಪೊಲೀಸರು ಅರ್ಷದ್ ವಿರುದ್ಧ ಕೇಸು ದಾಖಲಿಸಿಕೊಂಡಿದ್ದಾರೆ.

    ಐಸಿಯುನಲ್ಲಿ ವೆಂಟಿಲೇಟರ್ ಶಬ್ದದಿಂದ ಕಿರಿಕಿರಿ ಆಗ್ತಿತ್ತು ಅಂತ ಆಫ್ ಮಾಡಿದ ವೃದ್ಧೆ; ಸಾವಿಗೀಡಾದ ರೋಗಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts