More

    ತೇಜಸ್ವಿ, ತೇಜ್ ಪ್ರತಾಪ್ ಭವಿಷ್ಯ ಇಂದು ನಿರ್ಧಾರ: ಬಿಹಾರದಲ್ಲಿ 2ನೇ ಹಂತದ ಮತದಾನ

    ಪಟನಾ: ಬಿಹಾರ ವಿಧಾನಸಭೆ ಚುನಾವಣೆಯ ಎರಡನೇ ಹಂತದ ಚುನಾವಣೆ ಶುರುವಾಗಿದ್ದು, 17 ಜಿಲ್ಲೆಗಳ 94 ಕ್ಷೇತ್ರಗಳಲ್ಲಿ ಇಂದು ಬೆಳಗ್ಗೆಯೇ ಮತದಾನ ಆರಂಭವಾಗಿದೆ. ಆರ್​ಜೆಡಿ ನಾಯಕ, ಮುಖ್ಯಮಂತ್ರಿ ಅಭ್ಯರ್ಥಿ ತೇಜಸ್ವಿ ಯಾದವ್ ಹಾಗೂ ಅವರ ಸಹೋದರ ತೇಜ್ ಪ್ರತಾಪ್ ಅವರ ರಾಜಕೀಯ ಭವಿಷ್ಯ ಇಂದೇ ಮತಪೆಟ್ಟಿಗೆ ಸೇರಲಿದೆ. ಬೆಳಗ್ಗೆ ಬೇಗನೇ ಮತಗಟ್ಟೆಗೆ ಆಗಮಿಸಿದ ಮುಖ್ಯಮಂತ್ರಿ ನಿತೀಶ್ ಕುಮಾರ್, ಉಪಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ, ಎಲ್​ಜೆಪಿ ನಾಯಕ ಚಿರಾಗ್ ಪಾಸ್ವಾನ್​, ಆರ್​ಜೆಡಿ ನಾಯಕ ತೇಜಸ್ವಿ ಯಾದವ್, ತೇಜಪ್ರತಾಪ್​ ​ ಮತ್ತು ಅವರ ತಾಯಿ ರಾಬ್ಡಿ ದೇವಿ ಮತಚಲಾಯಿಸಿದರು.

    ಎರಡನೇ ಹಂತದ ಚುನಾವಣೆಯಲ್ಲಿ ಒಟ್ಟು 1,463 ಅಭ್ಯರ್ಥಿಗಳಿದ್ದಾರೆ. ಆರ್​ಜೆಡಿ 38 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದು, ಕಾಂಗ್ರೆಸ್ 24, ಎಡ ಪಕ್ಷಗಳು 14, ಬಿಜೆಪಿ 46, ಜೆಡಿಯು 43 ಹಾಗೂ ವಿಐಪಿ 5 ಕ್ಷೇತ್ರಗಳಲ್ಲಿ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ವೈಶಾಲಿ ಜಿಲ್ಲೆಯ ರಘೋಪುರ್ ಕ್ಷೇತ್ರದಿಂದ ತೇಜಸ್ವಿ ಯಾದವ್ ಸ್ಪರ್ಧಿಸಿದ್ದು, ಅವರಿಗೆ ಪ್ರಬಲ ಎದುರಾಳಿಯಾಗಿ ಬಿಜೆಪಿಯಿಂದ ಸತೀಶ್ ಕುಮಾರ್ ಕಣದಲ್ಲಿದ್ದಾರೆ. ರಘೋಪುರ್ ಕ್ಷೇತ್ರದಲ್ಲಿ ಒಟ್ಟು 14 ಅಭ್ಯರ್ಥಿಗಳು ಸ್ಪರ್ಧೆಗಿಳಿದಿದ್ದಾರೆ.

    ಇದನ್ನೂ ಓದಿ: ಆಶ್ಚರ್ಯ ಚಿಹ್ನೆಯನ್ನು ಖಾಲಿ ಮಾಡುವ ನೀಲಿ ತಿಮಿಂಗಲಗಳು!!!

    ಸಮಷ್ಟಿಪುರ ಜಿಲ್ಲೆಯ ಹಸನ್​ಪುರ್ ಕ್ಷೇತ್ರದಿಂದ ತೇಜ್ ಪ್ರತಾಪ್ ಯಾದವ್ ಕಣಕ್ಕಿಳಿದಿದ್ದು, ಅವರಿಗೆ ಪ್ರತಿಸ್ಪರ್ಧಿಯಾಗಿ ಎರಡು ಬಾರಿ ಶಾಸಕರಾಗಿರುವ ಜೆಡಿಯುನ ರಾಜ್ ಕುಮಾರ್ ಕಣದಲ್ಲಿದ್ದಾರೆ. ಪರ್ಸಾ ಕ್ಷೇತ್ರದಲ್ಲಿ ತೇಜ್ ಪ್ರಯಾಪ್ ಅವರ ಮಾವ, ಆರ್​ಜೆಡಿಯಿಂದ ಜೆಡಿಯುಗೆ ಸೇರ್ಪಡೆಯಾಗಿರುವ ಚಂದ್ರಿಕಾ ರಾಯ್ ಸ್ಪರ್ಧೆಗಿಳಿದಿದ್ದಾರೆ. ಅವರ ಎದುರಾಳಿಯಾಗಿ ಆರ್​ಜೆಡಿಯಿಂದ ಚೊಟ್ಟೆ ಲಾಲ್ ಇದ್ದಾರೆ. (ಏಜೆನ್ಸೀಸ್)

    ಎರಡು ಕ್ಷೇತ್ರಗಳ ಉಪಚುನಾವಣೆ: ಮಂದಗತಿಯಲ್ಲಿ ಶುರುವಾಗಿದೆ ಮತದಾನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts