More

    ತೇಜಸ್ವಿ ಕೃತಿಗಳಲ್ಲಿ ಕಾಲಘಟ್ಟಗಳ ದರ್ಶನ

    ಶೃಂಗೇರಿ: ತೇಜಸ್ವಿ ತಮ್ಮ ಕೃತಿಗಳಲ್ಲಿ ಕಾಲಘಟ್ಟಗಳ ದರ್ಶನ ಮಾಡಿಸಿದ್ದಾರೆೆ. ಅನುಭವದ ನೆಲೆಯಲ್ಲಿ ಬದುಕನ್ನು ಗ್ರಹಿಸಿದವರು ಮತ್ತು ಅನುಭವಗಳನ್ನು ಅಕ್ಷರವಾಗಿಸಿದವರು ತೇಜಸ್ವಿ ಎಂದು ಸಾಹಿತಿ ಎಚ್.ಎಂ.ನಾಗರಾಜ್ ಕಲ್ಕಟ್ಟೆ ಹೇಳಿದರು.
    ಮೆಣಸೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ತೇಜಸ್ವಿ ಸಾಹಿತ್ಯಯಾನ ಯುವಸ್ಪಂದನ ಕಾರ್ಯಕ್ರಮದಲ್ಲಿ ಅಬಚೂರಿನ ಪೋಸ್ಟಾಫೀಸು ಕೃತಿಯ ಕುರಿತು ಉಪನ್ಯಾಸ ನೀಡಿ, ಅಬಚೂರಿನ ಪೋಸ್ಟಾಫೀಸು ಕಥೆೆಯಲ್ಲಿ ಗ್ರಾಮ ಜೀವನದ ನಿರೂಪಣೆ ಮನಮುಟ್ಟುವಂತೆ ಮೂಡಿ ಬಂದಿದೆ. ಹಳ್ಳಿಯ ಮೇಲೆ ಆಧುನಿಕತೆಯ ಪ್ರಭಾವ ಹೇಗಿತ್ತು ಎಂಬುದನ್ನು ಈ ಕೃತಿಯಲ್ಲಿ ಕಾಣಬಹುದು ಎಂದರು.
    ಕಾಲೇಜಿನ ಪ್ರಾಚಾರ್ಯೆ ಭಾರತೀ ಮಾತನಾಡಿ, ತೇಜಸ್ವಿ ಪ್ರತಿಷ್ಟಾನ ಯುವಕರು, ವಿದ್ಯಾರ್ಥಿಗಳಲ್ಲಿ ತೇಜಸ್ವಿ ಅವರ ಬದುಕು, ಬರಹ, ಚಿಂತನೆಗಳನ್ನು ತಲುಪಿಸಲು ಕಾಲೇಜುಗಳಲ್ಲಿ ಇಂತಹ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದರು.
    ಕನ್ನಡ ಪ್ರಾಧ್ಯಾಪಕ ಮರಿಸ್ವಾಮಿ ಮಾತನಾಡಿ, ಕುತೂಹಲದಿಂದ ತನ್ನ ಸುತ್ತಲಿನ ಪರಿಸರ ಗ್ರಹಿಸುತ್ತಿದ್ದ ತೇಜಸ್ವಿ ಅವರು ನಿತ್ಯ ಬದುಕಿನ ಸಾಮಾನ್ಯ ಸಂಗತಿಗಳ ವಿಶಿಷ್ಟ ವಿವರಗಳನ್ನು ತಮ್ಮ ಕೃತಿಗಳಲ್ಲಿ ತಂದವರು ಎಂದರು. ತೇಜಸ್ವಿ ಕೃತಿಗಳ ಕುರಿತು ಸಂವಾದ ಮತ್ತು ಸಾಕ್ಷ್ಯಚಿತ್ರ ಪ್ರದರ್ಶನ ನಡೆಯಿತು. ಪ್ರಾಧ್ಯಾಪಕರಾದ ಸರಸ್ವತಿ ಹೆಗ್ಗಡೆ, ಆಶಾ, ತೇಜಸ್ವಿ ಪ್ರತಿಷ್ಠಾನದ ಸಂಯೋಜಕ ನಂದೀಶ್ ಬಂಕೇನಹಳ್ಳಿ, ಸಿಬ್ಬಂದಿ ಸತೀಶ್, ಸಂಗೀತಾ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts