More

    ಪೂಚಂತೇ ಬರಹ ವಿಜ್ಞಾನದಷ್ಟೇ ನಿಖರ

    ಬಣಕಲ್: ಕೊಟ್ಟಿಗೆಹಾರದ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದಲ್ಲಿ ಮಂಗಳವಾರ ಆಯೋಜಿಸಿದ್ದ ನಕ್ಷತ್ರ ವೀಕ್ಷಣೆ ಜನರ ಮನಸೂರೆಗೊಂಡಿತು.

    ತೇಜಸ್ವಿ ಪ್ರತಿಷ್ಠಾನ ಮತ್ತು ಚಿಕ್ಕಮಗಳೂರಿನ ಜಿಲ್ಲಾ ವಿಜ್ಞಾನ ಕೇಂದ್ರದಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹಾಸನ, ಶಿವಮೊಗ್ಗ, ಬೆಂಗಳೂರು, ಚಿಕ್ಕಮಗಳೂರು, ಮಂಡ್ಯ ವಿವಿಧೆಡೆಯಿಂದ ಆಗಮಿಸಿದ್ದ ನೂರಾರು ವಿದ್ಯಾರ್ಥಿಗಳು, ಸಾರ್ವಜನಿಕರು ಆಕಾಶ ವೀಕ್ಷಣೆ ಮಾಡಿದರು.
    ಪ್ರತಿಷ್ಠಾನದ ಸದಸ್ಯ ಕಾರ್ಯದರ್ಶಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ. ಸಿ.ರಮೇಶ್ ಮಾತನಾಡಿ, ವೈಜ್ಞಾನಿಕ ಮನೋಭಾವದಿಂದ ಎಲ್ಲವನ್ನೂ ನೋಡುತಿದ್ದವರು ತೇಜಸ್ವಿ. ವಿಜ್ಞಾನಕ್ಕೆ ಇರುವ ನಿಖರತೆ ತೇಜಸ್ವಿ ಅವರ ಬರಹದಲ್ಲೂ ಇತ್ತು ಎಂದರು.
    ಪ್ರತಿಷ್ಠಾನದ ಟ್ರಸ್ಟಿ ಪ್ರದೀಪ್ ಕೆಂಜಿಗೆ ಮಾತನಾಡಿ, ಆಕಾಶ ವೀಕ್ಷಣೆಯಂತಹ ಕಾರ್ಯಕ್ರಮಗಳು ತೇಜಸ್ವಿ ಅವರ ಚಿಂತನೆಗೆ ಪೂರಕವಾಗಿದೆ. ವೈಜ್ಞಾನಿಕ ಮನೋಭಾವ ಮೂಡಿಸುವಲ್ಲಿ ಇಂತಹ ಕಾರ್ಯಕ್ರಮಗಳು ಪಾತ್ರ ಪ್ರಮುಖ ಎಂದು ಹೇಳಿದರು.
    ಮಂಡ್ಯ ಜಿಲ್ಲಾ ವಿಜ್ಞಾನ ವೇದಿಕೆಯ ಎಸ್.ಲೋಕೇಶ್ ಮತ್ತು ಸಿ.ಎಲ್.ನಂಜರಾಜ್ ಅವರು ಸುಮಾರು 50 ಆಕಾಶಕಾಯಗಳ ಕುರಿತು ವರ್ಣಮಯ ಚಿತ್ರಪಟಗಳೊಂದಿಗೆ ವಿವರಣೆ ನೀಡಿದರು. ಮೇಷ, ವೃಷಭ, ಮಿಥುನ, ಸಿಂಹ, ಮಹಾವ್ಯಾಧ, ವಿಜಯಸಾರಥಿ, ಆರಿದ್ರ, ರಿಗಲ್, ಲುಬ್ದಕ, ಕಪೆಲ್ಲಾ, ರೋಹಿಣಿ, ಏಡಿ ನಿಹಾರಿಕೆ, ಕೃತಿಕ ನಕ್ಷತ್ರ ಗುಚ್ಛ ಮುಂತಾದವುಗಳ ಬಗ್ಗೆ ಮಾಹಿತಿ ನೀಡಿದರು. ದೂರದರ್ಶಕದ ಮೂಲಕ ಗುರು ಗ್ರಹವನ್ನು ವೀಕ್ಷಿಸಲಾಯಿತು.
    ಚಿಕ್ಕಮಗಳೂರು ಜಿಲ್ಲಾ ವಿಜ್ಞಾನ ಕೇಂದ್ರದ ಅಧ್ಯಕ್ಷ ಸತ್ಯನಾರಾಯಣ, ಗೌರವಾಧ್ಯಕ್ಷ ಎ.ಎನ್.ಮಹೇಶ್, ಉಪಾಧ್ಯಕ್ಷ ಓಂಕಾರಪ್ಪ, ಟಿ.ಜಿ.ಕೆ ಅರಸ್, ಪ್ರತಿಷ್ಠಾನದ ಸಂಯೋಜಕ ನಂದೀಶ್ ಬಂಕೇನಹಳ್ಳಿ, ಸಿಬ್ಬಂದಿ ಸತೀಶ್ ತರುವೆ, ಸಂಗೀತಾ, ಕಲಾವಿದರಾದ ಸುರೇಶ್ಚಂದ್ರ ದತ್ತ, ವಸ್ತು ಸಂಗ್ರಹಕಾರ ಅಶೋಕ್, ಲೇಖಕ ಪೂರ್ಣೇಶ್ ಮತ್ತಾವರ, ಕೀಟ ತಜ್ಞ ಅವಿನಾಶ್ ಮೂಡಿಗೆರೆ, ಗಾಯಕ ಜಯಪಾಲ್ ಹೊಸಳ್ಳಿ ಹಾಗೂ ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts