More

    ಬರಹದಲ್ಲಿ ಕೌಶಲ ಇರಲಿ

    ಸಾಗರ: ಅಕ್ಷರ ಬಲ್ಲ ಪ್ರತಿಯೊಬ್ಬರೂ ಬರಹದ ಸಾಮರ್ಥ್ಯವುಳ್ಳವರೇ. ಆದರೆ ಬರಹದಲ್ಲಿ ಕೌಶಲವುಳ್ಳವ ಮಾತ್ರ ಓದುಗರ ಮನ ಮುಟ್ಟಬಲ್ಲ ಎಂದು ಹಿರಿಯ ಪತ್ರಕರ್ತ ರಮೇಶ್ ಹೆಗಡೆ ಗುಂಡೂಮನೆ ಹೇಳಿದರು.
    ನಗರದ ಶ್ರೀ ರಾಘವೇಶ್ವರ ಸಭಾಭವನದಲ್ಲಿ ಭಾನುವಾರ ಏರ್ಪಡಿಸಿದ್ದ ಬರಹ ಕೌಶಲ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
    ಓದುಗರ ನೆನಪಲ್ಲಿ ಎಲ್ಲ ಬರಹಗಾರರೂ ಉಳಿಯುತ್ತಾರೆ ಎಂದೇನೂ ಇಲ್ಲ. ಮನಸ್ಸಿಗೆ ಮುಟ್ಟುವ, ತಟ್ಟುವ ಬರಹವನ್ನು ಯಾರು ಕೊಡಬಲ್ಲರೋ ಅಂಥವರು ಮಾತ್ರ ಸದಾ ನೆನಪಿನಲ್ಲಿ ಉಳಿಯುತ್ತಾರೆ. ಸಾಹಿತ್ಯ ಕ್ಷೇತ್ರದಲ್ಲಿ ಹೀಗೆ ನೆನಪು ಉಳಿಸಿದವರ ನೂರಾರು ಉದಾಹರಣೆಗಳನ್ನು ಕೊಡಬಹುದು ಮತ್ತು ಅಂತಹ ಬರಹವೂ ಸಾರ್ವಕಾಲಿಕವಾಗಿ ಇಷ್ಟವಾಗುವುದು ಎಂದರು.
    ಸಾಹಿತಿ, ಪತ್ರಕರ್ತ ಅಥವಾ ಕವಿಯೇ ಆಗಿರಲಿ, ಅವರು ಅಕ್ಷರದಲ್ಲಿ ಬಳಸುವ ಕೌಶಲವೇ ಜನಪ್ರಿಯತೆ ತಂದುಕೊಡಲಿದೆ. ಹಾಗಾಗಿಯೇ ಬರಹ ಕೌಶಲ ಎನ್ನುವುದು ಬರಹದ ಆಸಕ್ತಿಯುಳ್ಳ ಪ್ರತಿಯೊಬ್ಬರಿಗೂ ಮಹತ್ವದ್ದು ಎಂದು ಹೇಳಿದರು.

    ಸಾಗರ ಹವ್ಯಕ ಮಂಡಲದ ಅಧ್ಯಕ್ಷ ವಿ.ಎಸ್.ಮುರಳಿ ಹೊಸ್ಮನೆ, ಹವ್ಯಕ ಮಹಾಮಂಡಲದ ಪ್ರಾಂತ ಕಾರ್ಯದರ್ಶಿ ರುಕ್ಮಾವತಿ ರಾಮಚಂದ್ರ, ಮಂಡಲದ ಕಾರ್ಯದರ್ಶಿ ಶ್ರೀನಾಥ್ ಸಾರಂಗ ಇತರರಿದ್ದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts