More

  ರೇವ್ ಪಾರ್ಟಿಯಲ್ಲಿ ಹಾವಿನ ವಿಷ ಬಳಕೆ: ಬಿಗ್​ಬಾಸ್ ಒಟಿಟಿ​ ವಿನ್ನರ್ ಎಲ್ವಿಸ್ ಯಾದವ್​​ ಅರೆಸ್ಟ್​​!

  ನವದೆಹಲಿ: ರೇವ್​ ಪಾರ್ಟಿಯಲ್ಲಿ ಹಾವಿನ ವಿಷ ಪ್ರಕರಣದಲ್ಲಿ ವಿವಾದಿತ ಯೂಟ್ಯೂಬರ್​ ಮತ್ತು ಬಿಗ್​ಬಾಸ್​ ಒಟಿಟಿ-2 ವಿನ್ನರ್ ಎಲ್ವಿಶ್​ ಯಾದವ್​ ಬಂಧನವಾಗಿದೆ. ನೋಯ್ಡಾ ಪೊಲೀಸರು ಶನಿವಾರ ಬಂಧಿಸಿದ್ದು, ಭಾನುವಾರ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ.

  ಎಲ್ವಿಶ್​ ಯಾದವ್​ ಬಂಧನವನ್ನು ನೋಯ್ಡಾ ಡಿಸಿಪಿ ವಿದ್ಯಾ ಸಾಗರ್ ಮಿಶ್ರಾ ಅವರು ಖಚಿತಪಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ ಎಲ್ವಿಶ್​ನನ್ನು ಪೊಲೀಸರು ನ್ಯಾಯಾಲಯಕ್ಕೆ ಕರೆದೊಯ್ಯುತ್ತಿರುವುದನ್ನು ಕಾಣಬಹುದು. ಅಲ್ಲದೆ, ತನ್ನ ಸುತ್ತಮುತ್ತಲು ಇರುವವರ ಜತೆ ಎಲ್ವಿಶ್​ ಮಾತನಾಡುತ್ತಿರುವ ದೃಶ್ಯವೂ ವಿಡಿಯೋದಲ್ಲಿದೆ.

  ಗುರುಗ್ರಾಮ್​ ಮತ್ತು ನೋಯ್ಡಾದಲ್ಲಿ ನಡೆಯುವ ರೇವ್​ ಪಾರ್ಟಿಗಳಿಗೆ ಹಾವಿನ ವಿಷ ಪೂರೈಕೆ ಮಾಡಲಾಗುತ್ತಿದೆ ಎಂಬ ಆರೋಪ ಎಲ್ವಿಶ್​ ಯಾದವ್​ ವಿರುದ್ಧ ಕೇಳಿಬಂದ ಬೆನ್ನಲ್ಲೇ ಕಳೆದ ವರ್ಷ ಆತನ ವಿಚಾರಣೆಯನ್ನು ಮಾಡಲಾಗಿತ್ತು. ಅಲ್ಲದೆ, ಎಲ್ವಿಶ್​ ಸೇರಿದಂತೆ ಒಟ್ಟು ಆರು ಮಂದಿಯ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.

  ರೇವ್​ ಪಾರ್ಟಿಗಳ ಮೇಲೆ ನಡೆದ ದಾಳಿಯ ವೇಳೆ ಸಂಗ್ರಹಿಸಲಾದ ಸ್ಯಾಂಪಲ್​ಗಳಲ್ಲಿ ಹಾವಿನ ವಿಷ ಇರುವುದು ವಿಧಿ ವಿಜ್ಞಾನ ಪ್ರಯೋಗಾಲಯ (ಎಫ್​ಎಸ್​ಎಲ್​) ಪರೀಕ್ಷೆಯಲ್ಲಿ ಪತ್ತೆಯಾಗಿರುವುದರಿಂದ ಎಲ್ವಿಶ್​ ವಿರುದ್ಧ ಪ್ರಕರಣ ಮತ್ತಷ್ಟು ಬಲವಾಗುವ ಸಾಧ್ಯತೆ ಇದೆ. ಆದರೆ, ತನ್ನ ಮೇಲಿನ ಆರೋಪವನ್ನು ಎಲ್ವಿಶ್​, ಅಲ್ಲಗೆಳೆದಿದ್ದಾರೆ. ಈ ಪ್ರಕರಣದಲ್ಲಿ ನಾನು ತಪ್ಪಿತಸ್ಥನೆಂದು ಸಾಬೀತಾದರೆ ಬೆತ್ತಲಾಗಿ ಕ್ಯಾಮೆರಾ ಮುಂದೆ ಡ್ಯಾನ್ಸ್ ಮಾಡುವುದಾಗಿ ಹೇಳಿದ್ದಾರೆ.

  ಪೊಲೀಸರು ತನ್ನ ಮೇಲೆ ತಪ್ಪು ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿರುವ ಎಲ್ವಿಶ್​, ನೋಯ್ಡಾದಲ್ಲಿ ರೇವ್​ ಪಾರ್ಟಿ ನಡೆದಂತ ಸಮಯದಲ್ಲಿ ನಾನು ಮುಂಬೈನಲ್ಲಿದ್ದೆ ಎಂದು ಎಲ್ವಿಶ್​ ಹೇಳಿದ್ದಾರೆ. ಬಂಧನದ ಬಗ್ಗೆ ಪೊಲೀಸರು ಇನ್ನೂ ಸಂಪೂರ್ಣ ವಿವರಗಳನ್ನು ಹಂಚಿಕೊಳ್ಳಬೇಕಾಗಿದೆ. ಎಲ್ವಿಶ್ ತಂಡವು ಇನ್ನೂ ಈ ವರದಿಗಳಿಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. (ಏಜೆನ್ಸೀಸ್​)

  ಅದು ಬೇಕು ಅನಿಸಿದಾಗ ಮದುವೆ ಆಗುತ್ತೇನೆ! ಖ್ಯಾತ ನಟಿ ಕೌಶಲ್ಯ ಓಪನ್​ ಟಾಕ್​

  ಒಂದು ಕಾಲದ ಸ್ಟಾರ್​ ನಟಿ ಇಂದು ಹೊಟ್ಟೆಪಾಡಿಗಾಗಿ ಸಾಬೂನು ಮಾರುತ್ತಿದ್ದಾರೆ! ಈಕೆ ಕನ್ನಡದಲ್ಲಿ ನಟಿಸಿದ್ದಾರೆ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts