More

    WPL ಆರಂಭಕ್ಕೂ ಮುನ್ನ ಆರ್​ಸಿಬಿಗೆ ಬಿಗ್​ ಶಾಕ್​; ಟೂರ್ನಿಯಿಂದ ಹೊರಬಿದ್ದ ಸ್ಟಾರ್ ಪ್ಲೇಯರ್

    ನವದೆಹಲಿ: ಎರಡನೇ ಆವೃತ್ತಿಯ ವುಮೆನ್ಸ್​ ಪ್ರೀಮಿಯರ್​ ಆರಂಭಕ್ಕೆ ದಿನಗಣನೆ ಶುರುವಾಗಿದ್ದು, ತಂಡಗಳು ಕಠಿಣ ತಯಾರಿಯನ್ನು ಆರಂಭಿಸಿವೆ. ವುಮೆನ್ಸ್​​ ಪ್ರೀಮಿಯರ್​ ಲೀಗ್​ನಲ್ಲಿ ಅತ್ಯಂತ ಪ್ರಸಿದ್ಧಿ ಪಡೆದಿರುವ ರಾಯಲ್​ ಚಾಲೆಂಜರ್ಸ್​ ಬೆಂಗಳೂರು (RCB) ದೊಡ್ಡ ಹೊಡೆತ ಒಂದು ಬಿದ್ದಿದೆ.

    ಟೂರ್ನಿ ಆರಂಭವಾಗುವುದಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿಯಿದ್ದು, ತಂಡದ ಸ್ಟಾರ್ ಬ್ಯಾಟರ್ ಎನಿಸಿಕೊಂಡಿದ್ದ ಇಂಗ್ಲೆಂಡ್ ಮಹಿಳಾ ತಂಡದ ನಾಯಕಿ ಹೀದರ್ ನೈಟ್ ಹಿಂದೆ ಸರಿದಿದ್ದು, ತಮ್ಮ ಹೆಸರನ್ನು ಹಿಂಪಡೆದಿದ್ದಾರೆ. ನೈಟ್​ ತಮ್ಮ ಹೆಸರನ್ನು ಹಿಂಪಡೆದಿರುವ ಕುರಿತು ಈವರೆಗೆ ನಿಖರ ಕಾರಣ ತಿಳಿದು ಬಂದಿಲ್ಲ.

    ಫೆಬ್ರವರಿ 23 ರಿಂದ ಪ್ರಾರಂಭವಾಗುವ ಮಹಿಳಾ ಪ್ರೀಮಿಯರ್ ಲೀಗ್​ನಿಂದ ಹೀದರ್ ನೈಟ್ ಯಾಕೆ ತಮ್ಮ ಹೆಸರನ್ನು ಹಿಂಪಡೆದಿದ್ದಾರೆ ಎಂಬುದಕ್ಕೆ ಆರ್​ಸಿಬಿ ಯಾವುದೇ ನಿರ್ದಿಷ್ಟ ಕಾರಣವನ್ನು ನೀಡಿಲ್ಲ. ಆದರೆ ಹೀದರ್​ ನೈಟ್​ರಂತೆಯೇ ಇಂಗ್ಲೆಂಡ್ ತಂಡದ ಇತರ ಮಹಿಳಾ ಆಟಗಾರ್ತಿಯರು ಕೂಡ ಮಹಿಳಾ ಪ್ರೀಮಿಯರ್ ಲೀಗ್​ನಿಂದ ತಮ್ಮ ಹೆಸರನ್ನು ಹಿಂಪಡೆಯುತ್ತಿರುವುದು ಎಲ್ಲರ ಅಚ್ಚರಿಗೆ ಕಾರಣವಾಗಿದೆ.

    ಕಾರಣ ಹೀಗಿದೆ

    ಮಾರ್ಚ್​ ತಿಂಗಳಲ್ಲಿ ಇಂಗ್ಲೆಂಡ್​ ಮಹಿಳಾ ತಂಡವು ನ್ಯೂಜಿಲೆಂಡ್​ ವಿರುದ್ಧ ಐದು ಪಂದ್ಯಗಳ ಟಿ20 ಸರಣಿ ಮತ್ತು ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡಬೇಕಾಗಿದೆ. ದ್ವಿಪಕ್ಷೀಯ ಸರಣಿಗೆ ಹೆಚ್ಚಿನ ಆಧ್ಯತೆ ನೀಡುವ ಸಲುವಾಗಿ ಹೀದರ್​ ನೈಟ್ ಮಹಿಳಾ ಪ್ರೀಮಿಯರ್ ಲೀಗ್​ನಿಂದ ಹಿಂದೆ ಸರಿದಿರುವ ಸಾಧ್ಯತೆಗಳಿವೆ.

    ಇದನ್ನೂ ಓದಿ: ವೈದ್ಯರ ಕೈಬರಹ ಅಷ್ಟು ಸುಲಭವಾಗಿ ಅರ್ಥವಾಗುವುದಿಲ್ಲ ಯಾಕೆ ಗೊತ್ತಾ?; ಕಾರಣ ಹೀಗಿದೆ

    ಸುದ್ದಿ ಮೂಲಗಳ ಪ್ರಕಾರ, ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ಡಬ್ಲ್ಯುಪಿಎಲ್‌ನಲ್ಲಿ ಭಾಗಿಯಾಗಿರುವ ಆಟಗಾರ್ತಿಯರಿಗೆ ಟಿ20 ಲೀಗ್ ಮುಗಿಯುವವರೆಗೆ ಭಾರತದಲ್ಲಿದ್ದರೆ, ನ್ಯೂಜಿಲೆಂಡ್‌ನಲ್ಲಿನ ಮೊದಲ ಮೂರು ಟಿ20 ಪಂದ್ಯಗಳಿಗೆ ಅವರ ಹೆಸರನ್ನು ಪರಿಗಣಿಸಲಾಗುವುದಿಲ್ಲ ಎಂದು ತನ್ನ ಆಟಗಾರ್ತಿಯರಿಗೆ ತಿಳಿಸಿರುವುದಾಗಿ ವರದಿಯಾಗಿದೆ.

    ಹೀಗಾಗಿಯೇ ಆಟಗಾರ್ತಿಯರು ಒಬ್ಬೋಬ್ಬರಾಗಿ ಲೀಗ್​ನಿಂದ ಹಿಂದೆ ಸರಿಯುತ್ತಿದ್ದಾರೆ. ಹೀದರ್ ನೈಟ್ ಹೊರತುಪಡಿಸಿ, ಯುಪಿ ವಾರಿಯರ್ಸ್‌ ಪರ ಆಡಬೇಕಿದ್ದ ಲಾರೆನ್ ಬೆಲ್ ಶುಕ್ರವಾರ ತನ್ನ ಹೆಸರನ್ನು ಡಬ್ಲ್ಯುಪಿಎಲ್‌ನಿಂದ ಹಿಂತೆಗೆದುಕೊಂಡಿದ್ದು, ನ್ಯೂಜಿಲೆಂಡ್ ಪ್ರವಾಸಕ್ಕೆ ತಯಾರಿ ನಡೆಸುವುದು ತನ್ನ ಆದ್ಯತೆಯಾಗಿದೆ ಎಂದು ತಿಳಿಸಿದ್ದಾರೆ.

    ಬದಲಿ ಆಟಗಾರ್ತಿ ನೇಮಕ

    ಇದೀಗ ಹೀದರ್​ ನೈಟ್ ಅವರ ಬದಲಿಯನ್ನು ಸಹ ಪ್ರಕಟಿಸಿರುವ ಆರ್​ಸಿಬಿ ದಕ್ಷಿಣ ಆಫ್ರಿಕಾದ ಆಲ್ ರೌಂಡರ್ ನಡಿನ್ ಡಿ ಕ್ಲರ್ಕ್ ಅವರನ್ನು ತಂಡಕ್ಕೆ ಆಯ್ಕೆ ಮಾಡಿದೆ. ಮಧ್ಯಮ ವೇಗದ ಬೌಲಿಂಗ್ ಮತ್ತು ಬಲಗೈ ಬ್ಯಾಟರ್ ಆಗಿರುವ ಡಿ ಕ್ಲರ್ಕ್ ದಕ್ಷಿಣ ಆಫ್ರಿಕಾ ಪರ 30 ಏಕದಿನ ಮತ್ತು 46 ಟಿ20 ಪಂದ್ಯಗಳನ್ನಾಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts