More

    ತೆಲಂಗಾಣದ TRS ಸರ್ಕಾರ ಉರುಳಿಸುವ ಯತ್ನ: ಶಾಸಕರಿಗೆ 100 ಕೋಟಿ ರೂ. ಆಫರ್​, ಸಿಕ್ಕಿಬಿದ್ದ ನಾಲ್ವರು

    ಹೈದರಾಬಾದ್​: ತೆಲಂಗಾಣದ ಆಡಳಿತಾರೂಢ ತೆಲಂಗಾಣ ರಾಷ್ಟ್ರ ಸಮಿತಿ ಪಕ್ಷದ ನಾಲ್ವರು ಶಾಸಕರನ್ನು ಖರೀದಿಸುವ ಪ್ರಯತ್ನ ವಿಫಲವಾಗಿದ್ದು, ಶಾಸಕರೇ ನೀಡಿದ ಸುಳಿವಿನ ಮೇರೆಗೆ ದಾಳಿ ನಡೆಸಿ, ಮೂವರು ಆರೋಪಿಗಳನ್ನು ಫಾರ್ಮ್​ ಹೌಸ್ ಒಂದರಲ್ಲಿ ತೆಲಂಗಾಣ ಪೊಲೀಸರು ಬಂಧಿಸಿದ್ದಾರೆ.

    ತೆಲಂಗಾಣ ರಾಷ್ಟ್ರೀಯ ಸಮಿತಿ ಸರ್ಕಾರವನ್ನು ದುರ್ಬಲಗೊಳಿಸುವ ಪ್ರಯತ್ನ ಇದಾಗಿದ್ದು, ಕುದುರೆ ವ್ಯಾಪರಕ್ಕೆ ಗುರಿಯಾಗಿದ್ದ ನಾಲ್ವರು ಶಾಸಕರಲ್ಲಿ ಪ್ರಮುಖ ಶಾಸಕರೊಬ್ಬರಿಗೆ 100 ಕೋಟಿ ರೂಪಾಯಿಗು ಅಧಿಕ ಹಣದ ಆಮಿಷವೊಡ್ಡಿದ್ದರು ಎನ್ನಲಾಗಿದೆ. ಉಳಿದ ಶಾಸಕರಿಗೆ ತಲಾ 50 ಕೋಟಿ ರೂಪಾಯಿ ಆಸೆ ಹುಟ್ಟಿಸಿದ್ದರು ಎಂದು ಸೈಬರಾಬಾದ್​ ಪೊಲೀಸ್ ಮುಖ್ಯಸ್ಥ ಸ್ಟೆಫೆನ್​ ರವೀಂದ್ರ ಅವರು ಮಾಹಿತಿ ನೀಡಿದ್ದಾರೆ. ​

    ಅಜೀಜ್​ ನಗರದ ಫಾರ್ಮ್​ಹೌಸ್​ನಲ್ಲಿ ನಿನ್ನೆ (ಅ.26) ಸಂಜೆ ನಡೆದ ಶೋಧ ಕಾರ್ಯದ ಸಮಯದಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದರು. ಶಾಸಕರು ನಮಗೆ ಕರೆ ಮಾಡಿ, ಪಕ್ಷ ಬದಲಿಸಲು ಹಣದ ಆಮಿಷವೊಡ್ಡುತ್ತಿದ್ದಾರೆ ಎಂದು ಹೇಳಿದರು. ತಕ್ಷಣ ಕಾರ್ಯಪ್ರವೃತ್ತರಾದ ನಮ್ಮ ಪೊಲೀಸರು ದಾಳಿ ನಡೆಸಿದಾಗ ಮೂವರು ಸೆರೆಸಿಕ್ಕಿದ್ದಾರೆ. ಬಂಧಿತರು ನಕಲಿ ಗುರುತಿ ಚೀಟಿಯೊಂದಿಗೆ ಹೈದರಾಬಾದ್​ ಪ್ರವೇಶಿಸಿದ್ದಾರೆಂದು ತಿಳಿದುಬಂದಿದೆ ಎಂದು ರವೀಂದ್ರನ್​ ತಿಳಿಸಿದರು.

    ಬಂಧಿತರನ್ನು ಹರಿಯಾಣ ಮೂಲದ ಪೂಜಾರಿ ಸತೀಶ್​ ಶರ್ಮಾ ಅಲಿಯಾಸ್​ ರಾಮ್​ ಚಂದ್ರ ಭಾರತಿ, ತಿರುಪತಿ ಮೂಲದ ಸಂತ ಡಿ. ಸಿಂಹಯಾಜಿ ಮತ್ತು ಓರ್ವ ಉದ್ಯಮಿ ನಂದಕುಮಾರ್​ ಎಂದು ಗುರುತಿಸಲಾಗಿದೆ. ತಾಂಡೂರು ಶಾಸಕ ಪೈಲಟ್ ರೋಹಿತ್ ರೆಡ್ಡಿ ಅವರ ಫಾರ್ಮ್‌ಹೌಸ್‌ನಲ್ಲಿ ಡೀಲ್ ನಡೆದಿದ್ದು, ರೋಹಿತ್​ ರೆಡ್ಡಿ ಅವರನ್ನು ಸಹ ದೂರುದಾರ ಎಂದು ಉಲ್ಲೇಖಿಸಲಾಗಿದೆ.

    ಅಂದಹಾಗೆ 2019 ರಿಂದಲೂ ಬಿಜೆಪಿಯು ತೆಲಂಗಾಣದಲ್ಲಿ “ಆಪರೇಷನ್ ಕಮಲ” ವನ್ನು ಪ್ರಾರಂಭಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಲಾಗುತ್ತಿದೆ. ದಕ್ಷಿಣದಲ್ಲಿ ಅಧಿಕಾರದಲ್ಲಿ ಇರದೇ ಇರುವ ರಾಜ್ಯಗಳಲ್ಲಿ ಪಕ್ಷವನ್ನು ಬಲಗೊಳಿಸಲು ಬಿಜೆಪಿ ಅಡ್ಡದಾರಿ ಹಿಡಿಯುತ್ತಿದೆ ಎಂದು ಆರೋಪಿಸಲಾಗಿದೆ. ಈ ವರ್ಷದ ಆರಂಭದಲ್ಲಿ ಬಿಜೆಪಿ ಬೆಂಬಲಿತ ಏಕನಾಥ್ ಶಿಂಧೆ ಅವರ ಬಂಡಾಯ ಗುಂಪು ಮಹಾರಾಷ್ಟ್ರದಲ್ಲಿ ಉದ್ಧವ್ ಠಾಕ್ರೆ ಸರ್ಕಾರವನ್ನು ಉರುಳಿಸಿದ್ದೇ ಇದಕ್ಕೆ ಸಾಕ್ಷಿ ಎಂದು ಬಿಜೆಪಿ ವಿರುದ್ಧ ಆರೋಪ ಮಾಡಿದ್ದಾರೆ. ಕಳೆದ ಆಗಸ್ಟ್‌ನಲ್ಲಿ ಟಿಆರ್‌ಎಸ್‌ನ ಸುಮಾರು 18 ಶಾಸಕರು ಶೀಘ್ರದಲ್ಲೇ ಬಿಜೆಪಿಗೆ ಸೇರಲಿದ್ದಾರೆ ಎಂದು ಬಿಜೆಪಿ ನಾಯಕರೊಬ್ಬರು ಹೇಳಿಕೊಂಡಿದ್ದರು.

    ಇತ್ತೀಚೆಗೆ ದೆಹಲಿ ಸಿಎಂ ಅರವಿಂದ್​ ಕೇಜ್ರಿವಾಲ್​ ಕೂಡ ಬಿಜೆಪಿ ವಿರುದ್ಧ ಹರಿಹಾಯ್ದಿದ್ದರು. ದೆಹಲಿ ಹಾಗೂ ಪಂಜಾಬ್​ನಲ್ಲಿ ಬಿಜೆಪಿಯು ಶಾಸಕರನ್ನು ಖರೀದಿಸುವ ಪ್ರಯತ್ನ ಮಾಡುತ್ತಿದೆ ಎಂದು ಆರೋಪಿಸಿದ್ದರು.

    ತೆಲಂಗಾಣ ಬಿಜೆಪಿ ನಾಯಕರಾದ ಡಿಕೆ ಅರುಣಾ ಮತ್ತು ನಿಜಾಮಾಬಾದ್‌ನ ಬಿಜೆಪಿ ಸಂಸದ ಡಿ.ಅರವಿಂದ್ ಅವರು ಟಿಆರ್​ಎಸ್​ ಆರೋಪವನ್ನು ಅಲ್ಲಗೆಳೆದಿದ್ದು, ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಮತ್ತು ಅವರ ಪಕ್ಷವು ಮುನುಗೋಡೆ ಗಮನವನ್ನು ಬೇರೆಡೆ ಸೆಳೆಯಲು “ಕುದುರೆ ವ್ಯಾಪಾರ” ನಾಟಕವನ್ನು ಆಯೋಜಿಸಿದೆ ಎಂದು ಟೀಕಿಸಿದ್ದಾರೆ. ಮುನುಗೊಡೆ ಕ್ಷೇತ್ರವನ್ನು ಕಳೆದುಕೊಳ್ಳುವ ಭೀತಿ ಚಂದ್ರಶೇಖರ್​ ಅವರಿಗೆ ಎದುರಾಗಿದೆ. ಹೀಗಾಗಿ ಈ ನಾಟಕ ಮಾಡುತ್ತಿದ್ದಾರೆ ಎಂದು ಬಿಜೆಪಿ ನಾಯಕ ವಿವೇಕ್​ ವೆಂಕಟಸ್ವಾಮಿ ಆರೋಪಿಸಿದ್ದಾರೆ. (ಏಜೆನ್ಸೀಸ್​)

    ಮಕ್ಕಳ ಮುಂದೆ ಬೆತ್ತಲಾಗಿ ಛೀಮಾರಿ ಹಾಕಿಸಿಕೊಂಡಿದ್ದ ರೆಹಾನಾಳ ವಿರುದ್ಧ ತಾಯಿಯಿಂದಲೇ ದೂರು ದಾಖಲು!

    ನಟಿ ನಯನತಾರ ಬಾಡಿಗೆ ತಾಯ್ತನ ಪ್ರಕರಣ: ತಮಿಳುನಾಡು ಸರ್ಕಾರದ ತನಿಖೆಯಲ್ಲಿ ಮಹತ್ವದ ಮಾಹಿತಿ ಬಯಲು

    ಸುನಕ್​ರನ್ನು ಕಿಡ್ನಾಪ್ ಮಾಡಿ ಕೊಹಿನೂರ್​ ಕದಿಯುವ ಮಾಸ್ಟರ್​ಪ್ಲಾನ್​ ವೈರಲ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts