More

    ಮುಗಿದ ಬಿಗ್ ಬಾಸ್ ಆಟ, ಮನೆಯಲ್ಲಿಯೇ ನೋಟ

    ಬೆಂಗಳೂರು: 71 ದಿನಗಳ ಕಾಲ ಹಲವು ಏರಿಳಿತಗಳು, ನೆನಪುಗಳಿಗೆ ಸಾಕ್ಷಿಯಾಗಿದ್ದ ಬಿಗ್​ಬಾಸ್ ಸೀಸನ್ 8 ಕರೊನಾ ಲಾಕ್​ಡೌನ್ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದೆ. ಭಾನುವಾರವೇ ಚಿತ್ರೀಕರಣ ಮುಗಿದರೂ, ಅದರ ಸಂಚಿಕೆಗಳು ಮುಂದಿನ ನಾಲ್ಕು ದಿನ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗಲಿದೆ.

    ಹೀಗಿರುವಾಗಲೇ ಹಲವು ವಿಶೇಷತೆಗೆ ಈ ಸಲದ ಬಿಗ್​ಬಾಸ್ ಸಾಕ್ಷಿಯಾಗುತ್ತಿದೆ. ಈಗಾಗಲೇ ಎಲ್ಲ ಸ್ಪರ್ಧಿಗಳು ನಿರಾತಂಕವಾಗಿ ಮನೆ ಸೇರಿದ್ದಾರೆ. ಮನೆಯಲ್ಲಿಯೇ ಟಿವಿಯಲ್ಲಿ ಪ್ರಸಾರವಾಗುವ ಏಪಿಸೋಡ್​ಗಳನ್ನು ನೋಡುವ ಅವಕಾಶ ಅವರೆಲ್ಲರಿಗೂ ಸಿಕ್ಕಿದೆ. ಈ ಹಿಂದೆ ಎಲಿಮಿನೇಟ್ ಆದವರಿಗಷ್ಟೇ ಇಂಥ ಅವಕಾಶವಿತ್ತು.

    ಇದೀಗ ಶೋ ರದ್ದಾಗಿದ್ದರಿಂದ ಕೊನೇ ದಿನದ ವಿಶೇಷತೆಗಳು ಮುಂದಿನ ಮೂರು ದಿನ ಪ್ರಸಾರವಾಗುವುದರಿಂದ ಅವರ ಸಂಚಿಕೆಗಳನ್ನು ಅವರೇ ನೋಡುವ ಭಾಗ್ಯ ಸಿಕ್ಕಿದೆ. ಬೆನ್ನ ಹಿಂದೆ ಯಾರು ಏನಂದ್ರು ಎಂಬುದು ಒಂದಡೆಯಾದರೆ, ಭಾವುಕ ಗಳಿಗೆಯ ಸವಿನೆನಪುಗಳೂ ಬಾಕಿ ಉಳಿದ ಶೋನಲ್ಲಿ ಪ್ರಸಾರವಾಗಲಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts