More

    ಭಾರತೀಯರಿಗೆ ಅನುಕೂಲ ಆಗುವ ಉಪಕ್ರಮಗಳಿಗೆ ಅಮೆರಿಕದ ಹೊಸ ಅಧ್ಯಕ್ಷರ ಸಹಿ

    ವಾಷಿಂಗ್ಟನ್: ಅಮೆರಿಕದಲ್ಲಿ ಎಚ್1ಬಿ ವೀಸಾ ಮೇಲೆ ಉದ್ಯೋಗ ಮಾಡುತ್ತಿರುವವರ ಸಂಗಾತಿಗಳು, ಮಕ್ಕಳು ಪೌರತ್ವ ಪಡೆಯಲು ಅಡ್ಡಿಯಾಗಿದ್ದ ಡೊನಾಲ್ಡ್ ಟ್ರಂಪ್ ಆಡಳಿತದ ಹಲವು ಕಠಿಣ ವಲಸೆ ನೀತಿಗಳನ್ನು ರದ್ದುಪಡಿಸುವ ಮೂರು ಆದೇಶಗಳಿಗೆ ನೂತನ ಅಧ್ಯಕ್ಷ ಜೋ ಬೈಡೆನ್ ಮಂಗಳವಾರ ಸಹಿ ಹಾಕಿದ್ದಾರೆ. ಭಾರತೀಯರ ಸಹಿತ ವಿವಿಧ ದೇಶಗಳ ಸಾವಿರಾರು ಮಂದಿಗೆ ಇದರಿಂದ ಅನುಕೂಲ ಆಗಲಿದೆ.

    ವಲಸಿಗ ತಂದೆ-ತಾಯಿಯರಿಂದ ಮಕ್ಕಳನ್ನು ದೂರ ಮಾಡಿದ್ದ ಹಿಂದಿನ ಸರ್ಕಾರದ ನಾಚಿಕೆಗೇಡಿನ ಹಾಗೂ ಅನೈತಿಕ ಕ್ರಮಗಳನ್ನು ರದ್ದುಗೊಳಿಸುತ್ತಿದ್ದೇವೆ. ಆರೋಗ್ಯ ರಕ್ಷಣೆ, ನಿರ್ಮಾಣ, ಉತ್ಪಾದನೆ, ಸೇವೆ, ಕೃಷಿ ಮುಂತಾಗಿ ಪ್ರತಿಯೊಂದು ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಅಮೆರಿಕನ್ನರು ಮತ್ತವರ ಮಕ್ಕಳು ನಮ್ಮ ಆರ್ಥಿಕತೆಯ ಚೇತೋಹಾರಿ ಶಕ್ತಿಗಳಾಗಿದ್ದಾರೆ ಎಂದು ವಲಸಿಗರ ಮಹತ್ವವನ್ನು ಬೈಡೆನ್ ವರ್ಣಿಸಿದರು.

    ಈಗಾಗಲೇ ಹಲವು ಮಸೂದೆಗಳನ್ನು ಬೈಡೆನ್ ಆಡಳಿತ ಮುಂದಿಟ್ಟಿದೆ. ಅಮೆರಿಕದಲ್ಲಿ ಕಾಯಂ ಆಗಿ ನೆಲೆಸಲು ಅನುವಾಗುವ ಗ್ರೀನ್‌ಕಾರ್ಡ್ ಮೇಲೆ ಪ್ರತಿ ದೇಶಕ್ಕೆ ಇಂತಿಷ್ಟು ಎಂಬ ಕೋಟಾ ರದ್ದು ಮಾಡುವುದೂ ಆ ಪೈಕಿ ಒಂದಾಗಿದ್ದು ಸಾವಿರಾರು ಭಾರತೀಯರಿಗೆ ಅದರಿಂದ ಲಾಭವಾಗಲಿದೆ.

    ನಾನು ಹೊಸ ಕಾನೂನು ಮಾಡುತ್ತಿಲ್ಲ. ಕೆಟ್ಟ ನೀತಿಯನ್ನು ಬದಲಾಯಿಸುತ್ತಿದ್ದೇನೆ ಎಂದು ಶ್ವೇತಭವನದಲ್ಲಿ ಆದೇಶಗಳಿಗೆ ಸಹಿ ಮಾಡಿದ ನಂತರ ಬೈಡೆನ್ ಹೇಳಿದರು. ಸುರಕ್ಷಿತ, ಬಲಿಷ್ಠ ಹಾಗೂ ಹೆಚ್ಚು ಸಮೃದ್ಧ ಅಮೆರಿಕಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ. ಅಮೆರಿಕದ ಜೀವನದ ಕನಸು ಹೊತ್ತವರ ಹಿತ ರಕ್ಷಣೆ, ಮುಸ್ಲಿಮರ ಮೇಲಿನ ನಿರ್ಬಂಧ ನಿವಾರಣೆ ಹಾಗೂ ದೇಶದ ಗಡಿಗಳ ಉತ್ತಮ ನಿರ್ವಹಣೆ ಹಿನ್ನೆಲೆಯಲ್ಲಿ ಈ ಆದೇಶಗಳಿಗೆ ಸಹಿ ಹಾಕಿದ್ದಾಗಿ ಬೈಡೆನ್ ಹೇಳಿದರು.

    ಮದುವೆಯಾಗಲು ಹೆಣ್ಣಿಗೊಂದು ಗಂಡಿಗೊಂದು ವಯಸ್ಸೇಕೆ ? ಸುಪ್ರೀಂ ಕೋರ್ಟ್ ಮೆಟ್ಟಿಲೇರಿರುವ ವಕೀಲರು

    ಸ್ಯಾನಿಟೈಸರ್​ನ್ನು ಗಟಗಟನೆ ಕುಡಿದ ಅಧಿಕಾರಿ; ಅಯ್ಯಯ್ಯೋ ಹಾಗೆ ಮಾಡಬೇಡಿ ಎಂದ ಸಹೋದ್ಯೋಗಿಗಳು

    ವರ್ಷವಾದರೂ ಕೋರ್ಟ್‌ಗೆ ಅಲೆಯುತ್ತಿದ್ದಾರೆ ಪಾಕ್ ಪರ ಘೋಷಣೆ ಕೂಗಿದ ಕಾಶ್ಮೀರಿ ವಿದ್ಯಾರ್ಥಿಗಳು

    10ನೇ ತರಗತಿ ಪರೀಕ್ಷೆ ಬರೆಯಲಿದ್ದಾನೆ 11 ವರ್ಷದ ಪೋರ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts