More

    ನಮ್ಮ ಫ್ಲಿಕ್ಸ್ ಓಟಿಟಿಯಲ್ಲಿ ಡಿ.25ಕ್ಕೆ ‘ಭೂಮಿಕಾ’ ಸಿನಿಮಾ ಬಿಡುಗಡೆ

    ಬೆಂಗಳೂರು: ಲಾಕ್​ಡೌನ್​ ನಂತರ ಕೆಲವು ಕನ್ನಡ ಚಿತ್ರಗಳು ಓಟಿಟಿಗಳಲ್ಲಿ ಬಿಡುಗಡೆಯಾಗುತ್ತಿವೆ ಮತ್ತು ಆ ಸಾಲಿಗೆ ಈಗ ‘ಭೂಮಿಕಾ’ ಎಂಬ ಹೊಸ ಚಿತ್ರವು ಸೇರಿದೆ. ಕನ್ನಡ ಮತ್ತು ತುಳು ಭಾಷೆಗಳಲ್ಲಿ ನಿರ್ಮಾಣವಾಗಿರುವ ಈ ಚಿತ್ರವು ಡಿಸೆಂಬರ್​ 25ರಂದು ನಮ್ಮ ಫ್ಲಿಕ್ಸ್​ ಓವರ್​ ದಿ ಟಾಪ್​​ನಲ್ಲಿ (ಓಟಿಟಿ) ಬಿಡುಗಡೆಯಾಗುತ್ತಿದೆ.

    ವಿಶೇಷವೆಂದರೆ, ಈ ಚಿತ್ರವನ್ನು ಜನಪ್ರಿಯ ಛಾಯಾಗ್ರಾಹಕ ಪಿ.ಕೆ.ಎಚ್​. ದಾಸ್​ ನಿರ್ದೇಶನ ಮಾಡಿದ್ದಾರೆ. ಈ ಹಿಂದೆ, ವಿಜಯ್​ ರಾಘವೇಂದ್ರ ನಿರ್ದೇಶನದ ‘ಜಾನಿ’ ಚಿತ್ರವನ್ನು ನಿರ್ದೇಶಿಸಿದ್ದ ಅವರು, ಇದೀಗ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ.

    ಇದನ್ನೂ ಓದಿ: ಮತ್ತೊಂದು ಚಿತ್ರ ಒಪ್ಪಿಕೊಂಡ ಶಶಿಕುಮಾರ್ ಪುತ್ರ …

    ಬೆಸ್ತರ ಹುಡುಗಿಯ ಜೀವನದಲ್ಲಿ ನಡೆಯುವ ಏರಿಳಿತದ ಕಥೆ ಇರುವ ಈ ಚಿತ್ರವನ್ನು ಮಂಗಳೂರು ಸುತ್ತಮುತ್ತ ಸುಮಾರು 28 ದಿನಗಳ ಕಾಲ ಚಿತ್ರೀಕರಣ ಮಾಡಲಾಗಿದೆ.

    ಈ ಚಿತ್ರವನ್ನು ನಿರ್ಮಿಸುತ್ತಿರುವ ನರೇಂದ್ರ ನಾಯಕ್​ ವೃತ್ತಿಯಲ್ಲಿ ಡಾಕ್ಟರ್​ ಆಗಿದ್ದು, ಸಿನಿಮಾ ಅವರ ಪ್ಯಾಶನ್​ ಅಂತೆ. ಈ ಚಿತ್ರ ನಿರ್ಮಿಸಿದ್ದ ಕುರಿತು ಮಾತನಾಡುವ ಅವರು, ‘ನಾನು ಈ ಹಿಂದೆ ಹಲವು ಸಿನಿಮಾ ಮಾಡಿದ್ದೆ. ವಜ್ರಮುಖಿ ಮಾಡುವಾಗ ದಾಸ್ ಅವರ ಪರಿಚಯವಾಯ್ತು. ಈ ಕಥೆ ಹೇಳಿದಾಗ ಇಷ್ಡವಾಯ್ತು. ಇದೀಗ ಸಿನಿಮಾ ರೆಡಿಯಾಗಿದೆ ಎಂದರು.

    ಇದನ್ನೂ ಓದಿ: ‘ಎಂಆರ್’ ನಿಲ್ಲುವುದಿಲ್ಲ … ಚಿತ್ರ ಮುಂದುವರೆಸಲು ರವಿ ಶ್ರೀವತ್ಸ ನಿರ್ಧಾರ

    ಈ ಹಿಂದೆ ನಮ್ಮ ಫ್ಲಿಕ್ಸ್​ ಓಟಿಟಿಯಲ್ಲಿ ‘ಭ್ರಮೆ’ ಮತ್ತು ‘ತನಿಖೆ’ ಎಂಬ ಹೊಸ ಚಿತ್ರಗಳು ಬಿಡುಗಡೆಯಾಗಿದ್ದವು. ಇದೀಗ, ‘ಭೂಮಿಕಾ’ ಸಹ ಬಿಡುಗಡೆಯಾಗುತ್ತಿದೆ. ಈ ಪೈಕಿ ‘ಭ್ರಮೆ’ ಚಿತ್ರದ 10 ಸಾವಿರ ಟಿಕೆಟ್​ ಮಾರಾಟವಾದರೆ, ‘ತನಿಖೆ’ಗೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿತ್ತಂತೆ. ಈಗ ‘ಭೂಮಿಕಾ’ ಚಿತ್ರವನ್ನು ಜನ ಹೇಗೆ ಸ್ವೀಕರಿಸಬಹುದು ಎಂಬ ಕುತೂಹಲದಲ್ಲಿದ್ದಾರೆ ನಮ್ಮ ಫ್ಲಿಕ್ಸ್ ಓಟಿಟಿಯ ವಿಜಯ್ ಕುಮಾರ್.

    ‘ಭೂಮಿಕಾ’ ಚಿತ್ರದಲ್ಲಿ ನವೀನ್ ಡಿ ಪಡೀಲ್, ಆಲಿಷಾ ಅಂಡ್ರದೆ, ರವಿ ಕಿರಣ್ ಇತರರು ನಟಿಸಿದ್ದಾರೆ. ರಾಜ್ ಭಾಸ್ಕರ್ ಸಂಗೀತ ನೀಡಿದರೆ, ಕೆ.ಎಂ ಇಂದ್ರ ಹಿನ್ನೆಲೆ ಸಂಗೀತ ಒದಗಿಸಿದ್ದಾರೆ. ನಿರ್ದೇಶನದ ಜೊತೆಗೆ ಛಾಯಾಗ್ರಹಣದ ಜವಾಬ್ದಾರಿಯನ್ನು ಸಹ ಹೊತ್ತಿದ್ದಾರೆ ಪಿಕೆಎಚ್ ದಾಸ್.

    ಹೊಸ ರೂಪಾಂತರ ಕರೊನಾ ವೈರಸ್ ಭೀತಿ: ಲಂಡನ್​ನಿಂದ ಬಂದ ಮೇಲೆ ಕ್ವಾರಂಟೈನ್​ ಆಗದ ಹರ್ಷಿಕಾ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts