More

    ಈ ವರ್ಷ ನಂದೇ … ಹಾಗಂತ ಭೂಮಿ ಪೆಡ್ನೇಕರ್​ ಹೇಳಿದ್ಯಾಕೆ?

    ಮುಂಬೈ: ಕಳೆದ ವರ್ಷ ಬಾಲಿವುಡ್​ ನಟಿ ಭೂಮಿ ಪೆಡ್ನೇಕರ್​ ಅಭಿನಯದ ‘ಬದಾಯಿ ದೊ’, ‘ರಕ್ಷಾ ಬಂಧನ್​’ ಮತ್ತು ‘ಗೋವಿಂದ ನಾಮ್​ ಮೇರಾ’ ಚಿತ್ರಗಳು ಬಿಡುಗಡೆಯಾಗಿವೆ. ಈ ಮೂರರಲ್ಲಿ ಒಂದು ಚಿತ್ರವಾದರೂ ಗೆಲ್ಲುವುದು ಬೇಡವಾ? ಅಕ್ಷಯ್​ ಕುಮಾರ್​, ವಿಕ್ಕಿ ಕೌಶಾಲ್​ ಮತ್ತು ರಾಜ್​ಕುಮಾರ್​ ರಾವ್​ರಂತಹ ನಟರ ಜತೆಗೆ ನಟಿಸಿದರೂ, ಅದ್ಯಾಕೋ ಮೂರರಲ್ಲಿ ಯಾವುದೇ ಚಿತ್ರಗಳೂ ಗೆಲ್ಲಲಿಲ್ಲ.

    ಇದನ್ನೂ ಓದಿ: ಜಾಸ್ತಿ ಮಾತಾಡಬೇಡಿ, ಜನ ಕಲ್ಲು ಹೊಡೆಯಬಹುದು … ನಾಸಿರುದ್ದೀನ್​ ಷಾಗೆ ಪತ್ನಿ ಎಚ್ಚರಿಕೆ

    ಆದರೆ, ಈ ವರ್ಷ ಹಾಗಿರುವುದಿಲ್ಲ, ದೊಡ್ಡ ಯಶಸ್ಸಿನ ರುಚಿ ನೋಡಲಿದ್ದೇನೆ ಎಂಬ ವಿಶ್ವಾಸದಲ್ಲಿದ್ದಾರೆ ಭೂಮಿ. ಆ ವಿಶ್ವಾಸಕ್ಕೆ ಕಾರಣವೇನು ಗೊತ್ತಾ? ಈ ವರ್ಷ ಭೂಮಿ ಅಭಿನಯದ ಆರು ಚಿತ್ರಗಳು ಬಿಡುಗಡೆಯಾಗಲಿಕ್ಕಿವೆ. ಅದೆಲ್ಲಕ್ಕಿಂತ ಹೆಚ್ಚಾಗಿ, ಈ ಚಿತ್ರಗಳಿಗೆ ಅವರಿಗೆ ವಿಭಿನ್ನವಾದ ಪಾತ್ರಗಳು ಇವೆಯಂತೆ. ಈ ಚಿತ್ರಗಳು ಮತ್ತು ಪಾತ್ರಗಳು ಖಂಡಿತಾ ತಮಗೆ ಯಶಸ್ಸು ತಂದುಕೊಡಲಿವೆ ಎಂದು ಭೂಮಿ ಹೇಳಿಕೊಂಡಿದ್ದಾಳೆ.

    ಅಂದಹಾಗೆ, ಬಿಡುಗಡೆಯಾಗಲಿರುವ ಚಿತ್ರಗಳು ಯಾವುವು ಗೊತ್ತಾ? ಅನುಭವ್​ ಸಿನ್ಹಾ ನಿರ್ದೇಶನದ ‘ಭೀಡ್​’, ಅಜಯ್​ ಬೆಹಲ್​ ನಿರ್ದೇಶನದ ‘ದಿ ಲೇಡಿ ಕಿಲ್ಲರ್​’, ಸುಧೀರ್​ ಮಿಶ್ರಾ ನಿರ್ದೇಶನದ ‘ಅಫ್ವಾ’, ಗೌರಿ ಖಾನ್​ ನಿರ್ಮಾಣದ ‘ಭಕ್ಷಕ್​’, ಮುದ್ದಾಸರ್​ ಅಜಿಜ್​ ನಿರ್ದೇಶನದ ‘ಮೇರಿ ಹಸ್ಬೆಂಡ್​ ಕೀ ಬೀವಿ’ ಮತ್ತು ಇನ್ನೊಂದು ಹೆಸರಿಡದ ಚಿತ್ರ ಈ ಪಟ್ಟಿಯಲ್ಲಿದೆ.

    ಇದನ್ನೂ ಓದಿ: ನೆಗೆಟಿವಿಟಿ ಬಂದಾಗ ಸ್ವೀಕರಿಸಬೇಕು; ರಶ್ಮಿಕಾಗೆ ಕಿಚ್ಚನ ಸಲಹೆ …

    ಈ ವರ್ಷ ತನ್ನದೇ ಎಂದು ಹೇಳಿಕೊಂಡಿರುವ ಭೂಮಿ, ‘ಒಬ್ಬ ನಟಿಯಾಗಿ ಇದು ನನ್ನ ವರ್ಷ. ಈ ಎಲ್ಲ ಚಿತ್ರಗಳಲ್ಲೂ ವಿಭಿನ್ನವಾದ ಪಾತ್ರಗಳನ್ನು ಮಾಡುತ್ತಿರುವುದಷ್ಟೇ ಅಲ್ಲ, ಶಕ್ತಿಶಾಲಿ ಮಹಿಳೆಯರಾಗಿ ಕಾಣಿಸಿಕೊಳ್ಳುತ್ತಿದ್ದೇನೆ. ಒಬ್ಬ ಕಲಾವಿದೆಯಾಗಿ ಇದಕ್ಕಿಂತ ವಿಭಿನ್ನವಾದ ಪಾತ್ರಗಳನ್ನು ನಾನು ನಿರೀಕ್ಷಿಸುವುದಕ್ಕೆ ಸಾಧ್ಯವೇ ಇಲ್ಲ’ ಎಂದು ಭೂಮಿ ಹೇಳಿಕೊಂಡಿದ್ದಾರೆ.

    ‘ದಿಲ್​’ ರಾಜು ನಿರ್ಮಾಣದ ಚಿತ್ರದಲ್ಲಿ ಯಶ್​?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts