More

    ‘ವಕೀಲ್ ಸಾಬ್’, ‘ಪುಷ್ಪ’ ದಾಖಲೆಯನ್ನು ಮುರಿದ ‘ಭೀಮಲಾ ನಾಯಕ್’ ಟ್ರೈಲರ್!

    ಅಭಿಮಾನಿಗಳನ್ನು ಬಹಳಷ್ಟು ಕಾಯಿಸಿದ ನಂತರ ಕೊನೆಗೂ ನಟ ಪವನ್ ಕಲ್ಯಾಣ್ ಮತ್ತು ನಟ ರಾಣಾ ದಗ್ಗುಬಾಟಿ ಅಭಿನಯದ ಭೀಮಲಾ ನಾಯಕ್ಸಿನಿಮಾದ ನಿರ್ಮಾಪಕರು ಫೆಬ್ರವರಿ 21 ರಂದು ಚಿತ್ರದ ಟ್ರೈಲರ್ ಅನ್ನು ಬಿಡುಗಡೆ ಮಾಡಿದ್ದಾರೆ. ಟ್ರೈಲರ್ ಕಂಡ ಎಲ್ಲರಿಗೂ ನಟ ರಾಣಾ ಅವರು ಹೀರೋಗೆ ಒಂದು ಪ್ರಬಲ ಎದುರಾಳಿ ಎಂದು ಅರ್ಥವಾಗುತ್ತೆ. ಇಬ್ಬರ ನಡುವಿನ ಯುದ್ಧವೇ ಸಿನಿಮಾದ ಉಳಿದ ಕಥೆ ಎಂಬಂತೆ ಕಾಣುತ್ತಿದೆ. ನಟ ರಾಣಾ ಅವರ ಲುಕ್ ಅಂತೂ ಸದ್ಯ ನೆಟ್ಟಿಗರ ಗಮನ ಸೆಳೆಯುತ್ತಿದೆ ಎಂದೇ ಹೇಳಬೇಕು. 
    ನಟಿ ನಿತ್ಯಾ ಮೆನನ್ ಅವರು ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ನಟ ಮುರಳಿ ಶರ್ಮಾ ಅವರ ಪಾತ್ರವು ಕೂಡಾ ಪ್ರಮುಖವಾದ್ದದು ಎನ್ನಲಾಗಿದೆ. ಸದ್ಯ, ಸಿನಿಮಾದ ಟ್ರೇಲರ್‌ಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಲಭಿಸುತ್ತಿದ್ದು, ರಿಲೀಸ್ ಆದ ಕೇವಲ ಕೆಲವೇ ಕ್ಷಣಗಳಲ್ಲಿ ಟ್ರೇಲರ್‌ ಒಂದು ಸೆನ್ಸೇಷನಲ್‌ ದಾಖಲೆ ಸೃಷ್ಟಿಸಲು ಆರಂಭಿಸಿತು. ಸದ್ಯ, ಟ್ರೈಲರ್​ಗೆ 1 ಮಿಲಿಯನ್​ಗೂ ಹೆಚ್ಚು ಲೈಕ್ಸ್ ಇದ್ದು, ಬರೋಬ್ಬರಿ 11.2 ಮಿಲಿಯನ್​ಗಿಂತ ಹೆಚ್ಚು ವೀಕ್ಷಣೆಗಳು ಪಡೆದಿದೆ.
    ಹೌದು, ಸ್ವತಃ ನಟ ಪವನ್ ಕಲ್ಯಾಣ್ ಅವರ ‘ವಕೀಲ್ ಸಾಬ್’ ಸಿನಿಮಾ ಟ್ರೈಲರ್​ಗೆ ಈ ಮೇಲಿನ ಅಂಕಗಳನ್ನು ಪಡೆಯಲು ಬರೋಬ್ಬರಿ 18 ಗಂಟೆಯ 06 ನಿಮಿಷಗಳು ಬೇಕಾಗಿತ್ತು ಎಂದು ವರದಿಯಾಗಿದೆ, ಇನ್ನು, ನಟ ಅಲ್ಲು ಅರ್ಜುನ್ ‘ಪುಷ್ಪ’ ಚಿತ್ರದ ಟ್ರೈಲರ್​ಗೂ ಈ ಮಟ್ಟದ ವೀಕ್ಷಣೆಗಳನ್ನು ಪಡೆಯಲು 24 ಗಂಟೆಯ 21 ನಿಮಿಷಗಳು ಆಗಿತ್ತು ಎನ್ನಲಾಗಿದೆ. ಈ ಮೂಲಕ ‘ವಕೀಲ್ ಸಾಬ್’, ‘ಪುಷ್ಪ’ ದಾಖಲೆಗಳನ್ನು ಮುರಿದ ಭೀಮಲಾ ನಾಯಕ್ಎರಡನೇ ಸ್ಥಾನದಲ್ಲಿದೆ. ಈ ದಾಖಲೆ ಮಾಡಿದ ಚಿತ್ರದ ಟ್ರೈಲರ್​ಗಳಲ್ಲಿ ಮೊದಲ ಸ್ಥಾನವನ್ನು ಎಸ್. ಎಸ್. ರಾಜಮೌಳಿಯ ‘RRR’ ಸಿನಿಮಾ ಕೇವಲ 6 ಗಂಟೆಗಳಲ್ಲಿ ಸಾಧಿಸಿದೆ.
    ಭೀಮಲಾ ನಾಯಕ್ಸಿನಿಮಾಗೆ ಎಸ್ ಥಮನ್ ಸಂಗೀತ ಸಂಯೋಜಿಸಿದ್ದು, ಸಾಗರ್ ಕೆ ಚಂದ್ರು ನಿರ್ದೇಶನ ಮಾಡಿದ್ದಾರೆ. ಇನ್ನು, ಚಿತ್ರಕ್ಕೆ ತ್ರಿವಿಕ್ರಮ್ ಶ್ರೀನಿವಾಸ್ ಸಂಭಾಷಣೆ ಬರೆದಿರುವುದು ವಿಶೇಷ ಎನ್ನಲಾಗಿದೆ. ಸೂರ್ಯದೇವರ ನಾಗವಂಶಿ ಸಿನಿಮಾಗೆ ನಿರ್ಮಾಪಕರಾಗಿದ್ದು, ಸಿತಾರಾ ಎಂಟರ್‌ಟೈನ್‌ಮೆಂಟ್ ಬ್ಯಾನರ್‌ ಅಡಿ ಚಿತ್ರ ತೆರೆಗೆಪ್ಪಳಿಸಲಿದೆ. ಫೆಬ್ರವರಿ 25 ರಂದು ಬಿಡುಗಡೆಯಾಗಲಿರುವ ಭೀಮಲಾ ನಾಯಕ್ಬಿಜು ಮೆನನ್ ಮತ್ತು ಪೃಥ್ವಿರಾಜ್ ಸುಕುಮಾರನ್ ಅಭಿನಯದ ಮಲಯಾಳಂನ ಅಯ್ಯಪ್ಪನುಮ್ ಕೊಶಿಯುಮ್ಚಿತ್ರದ ರಿಮೇಕ್ ಎನ್ನಲಾಗಿದೆ

    ‘ವಕೀಲ್ ಸಾಬ್’, ‘ಪುಷ್ಪ’ ದಾಖಲೆಯನ್ನು ಮುರಿದ 'ಭೀಮಲಾ ನಾಯಕ್' ಟ್ರೈಲರ್! ‘ವಕೀಲ್ ಸಾಬ್’, ‘ಪುಷ್ಪ’ ದಾಖಲೆಯನ್ನು ಮುರಿದ 'ಭೀಮಲಾ ನಾಯಕ್' ಟ್ರೈಲರ್!

    ತಮ್ಮದೇ ಹಾಡಿಗೆ ಸೂಪರ್ ಹಾಟ್​ ಆಗಿ ಕುಣಿದ ಪೂಜಾ ಹೆಗ್ಡೆ! ವಿಡಿಯೋ ವೈರಲ್…

    ಸುದ್ದಿ ಮಾಧ್ಯಮಗಳನ್ನು ‘ನಾನ್​ಸೆನ್ಸ್’ ಎಂದು ಬೈಯ್ಯುತ್ತಲೇ ಮದುವೆ ಬಗ್ಗೆ ವಿಜಯ್ ಹೇಳಿದ್ದೇನು?

    ಅಬ್ಬಬ್ಬಾ ಇದೆಂಥಾ ಅನುಬಂಧ? ನಟ ಸೈಫ್ ಮೊದಲ ಪತ್ನಿ, 2ನೇ ಪತ್ನಿ ಮಕ್ಕಳು ಒಂದೇ ಫೋಟೋದಲ್ಲಿ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts